ವಿಜಯೇಂದ್ರ ನೇಮಕದಿಂದ ಕಾಂಗ್ರೆಸ್‌ಗೆ ನಷ್ಟವಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

By Kannadaprabha News  |  First Published Nov 12, 2023, 10:03 PM IST

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ಮಾಡಿರುವುದರಿಂದ ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.


ಬೆಳಗಾವಿ (ನ.12): ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ಮಾಡಿರುವುದರಿಂದ ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಡಿಯೂರಪ್ಪ ಪ್ರಬಲ ನಾಯಕರು. ಅವರಿಗಿದ್ದ ಆಕರ್ಷಣೆ ಬಿಜೆಪಿಯಲ್ಲಿ ಯಾರಿಗೂ ಬರಲ್ಲ. ನಮ್ಮ ಪಕ್ಷದಲ್ಲಿಯೂ ಸಿದ್ದರಾಮಯ್ಯನವರಿದ್ದಾರೆ. ಆ ರೀತಿ ಆಕರ್ಷಣೆ ಇರುವವರು. ಎಲ್ಲ ಪಕ್ಷಗಳಲ್ಲಿ ಇರುತ್ತಾರೆ ಎಂದರು.

ಕುಟುಂಬ ರಾಜಕಾರಣಕ್ಕೆ ಮಣೆ ಹಾಕುವುದಿಲ್ಲ ಎಂದು ಬಿಜೆಪಿ ವರಿಷ್ಠರು ನಿಯಮ ಮಾಡಿದ್ದಾರೆ. ಈಗ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ, ಕಳೆದ 10 ವರ್ಷಗಳಿಂದ ಕುಟುಂಬ ರಾಜಕಾರಣ ನಡೆಯುತ್ತಲೇ ಇದೆ. ಮೊದಲು ಕಾಂಗ್ರೆಸ್‌ ಟೀಕೆ ಮಾಡುತ್ತಿದ್ದರು. ಈಗ ಅವರ ಪಕ್ಷದಲ್ಲಿಯೂ ಮಕ್ಕಳು ಶಾಸಕರು, ವಿಧಾನ ಪರಿಷತ್ ಸದಸ್ಯರು ಆಗಿದ್ದಾರೆ. ಯಡಿಯೂರಪ್ಪ ಮಗ ಎಂದಾಕ್ಷಣ ಎಲ್ಲರೂ ಅವರ ಹಿಂದೆ ಬರುವುದಿಲ್ಲ. ಅಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾಗುತ್ತದೆ. ವಿಜಯೇಂದ್ರ ಅವರು ಕಲಿಯಬೇಕಾದದ್ದು ಬಹಳಷ್ಟಿದೆ. ಪಕ್ಷವೂ ಅವರನ್ನು ಸಾಕಷ್ಟು ಬಳಸಿಕೊಳ್ಳಬೇಕಿದೆ ಎಂದು ಹೇಳಿದರು.

Tap to resize

Latest Videos

ರಾಜಕಾರಣದಲ್ಲಿ ಕಾಫಿ, ಡಿನ್ನರ್‌ಗೆ ಬಹಳ ಮಹತ್ವವಿದೆ: ಶಾಸಕ ರವಿ ಗಣಿಗ

ಎಲ್ಲ ಪಕ್ಷದಲ್ಲಿಯೂ ಮೂರು ಗುಂಪುಗಳು ಇದ್ದೇ ಇರುತ್ತವೆ. ಒಂದನ್ನು ಸಮಾಧಾನ ಮಾಡಿದರೆ, ಎರಡು ಗುಂಪುಗಳು ದೂರ‌ ಸರಿಯುತ್ತವೆ. ಅದು ಎಲ್ಲ ಕಡೆ ಇರುವುದೆ. ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಪಕ್ಷದ ಅಧ್ಯಕ್ಷರಿಗೆ ಇರಬೇಕು ಎಂದ ಅವರು, ವಿಧಾನಸಭಾ‌ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಯಡಿಯೂರಪ್ಪನವರನ್ನು ತೆಗೆದಿದ್ದೂ ಒಂದು ಕಾರಣ. ನಾವು ಈ‌ ಹಿಂದೆಯೇ ಹೇಳಿದ್ದೆವು. ಯಡಿಯೂರಪ್ಪ ಇದ್ದರೆ ಬಿಜೆಪಿಗೆ 110 ಸ್ಥಾನಕ್ಕೆ ಬರುತ್ತವೆ. ಇಲ್ಲದಿದ್ದರೆ 60 ಬರಲ್ಲ ಎಂದು ಹೇಳಿದರು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಪರೇಷನ್ ಮಾಡುವುದಿಲ್ಲ. 

ಮದುವೆ ಭಾಗ್ಯಕ್ಕೆ ಮಲೆ ಮಹದೇಶ್ವರನ ಮೊರೆ ಹೋದ ಬ್ರಹ್ಮಚಾರಿಗಳು!

ಬಿಜೆಪಿಯವರು ಅಧಿಕಾರದಲ್ಲಿದ್ದಾರೆ. ಅವರೇ ಅಧಿಕಾರ ಮಾಡಲಿ. ಪಾಲಿಕೆಯಲ್ಲಿ ಸಮಸ್ಯೆ ಇದ್ದೇ ಇದೆ. ಬಿಜೆಪಿ ಸದಸ್ಯರ ಸಮಸ್ಯೆ ಏನಿದೆ ಎಂದು ಮುಂದೆ ನೋಡೋಣ ಎಂದು ವಿವರಿಸಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾದರೆ ಸತೀಶ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ನಾನು ಸಿಎಂ ಆಗಬೇಕೆಂದಿಲ್ಲ. ಈಗ ಸಿದ್ದರಾಮಯ್ಯನವರು ಸಿಎಂ ಇದ್ದಾರೆ. ನನ್ನ ಸರದಿ ಮುಂದಿನ ಸಲ ಇದೆ ಎಂದರು.

click me!