ವಾಲ್ಮೀಕಿ ಹಗರಣವನ್ನು ಮುಚ್ಚಿಹಾಕಲು ಸಿದ್ದು, ಡಿಕೆಶಿಯಿಂದ ರಾಜಕೀಯ ನಾಟಕ: ಸಿ.ಟಿ.ರವಿ ಆರೋಪ

By Govindaraj S  |  First Published Jun 30, 2024, 9:19 PM IST

ವಾಲ್ಮೀಕಿ ನಿಗಮ ಹಾಗೂ ಮೈಸೂರು ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಇದನ್ನ ಮುಚ್ಚಿಹಾಕಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜಕೀಯ ನಾಟಕ ಆಡುತ್ತಿದ್ದಾರೆ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.


ಮೈಸೂರು (ಜೂ.30): ವಾಲ್ಮೀಕಿ ನಿಗಮ ಹಾಗೂ ಮೈಸೂರು ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಇದನ್ನ ಮುಚ್ಚಿಹಾಕಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜಕೀಯ ನಾಟಕ ಆಡುತ್ತಿದ್ದಾರೆ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು. ಮೈಸೂರು ಮುಡಾದಲ್ಲಿ ಬೇಲಿಯೇ ಎದ್ದು ಹೋಲ ಮೇದಾಂತಾಗಿದೆ. ಸಿಎಂ ಮೂಗಿನಡಿ ಸಾವಿರಾರು ಕೋಟಿ ಬೆಲೆ ಬಾಳುವ ಮುಡಾ ಆಸ್ತಿ ಕಳ್ಳರ ಪಾಲಾಗಿದೆ. 69ನೇ ಇಸವಿಯಲ್ಲಿ ಭೂಮಿ ಕಳೆದುಕೊಂಡವರು ಇವತ್ತಿಗೆ ಜ್ಞಾನೋದಯವಾಗಿ ಅರ್ಜಿ ಕೊಟ್ಟಿದ್ದಾರಂತೆ. ಮುಡಾದವರು ಲಕ್ಷ ಲಕ್ಷ ಅಡಿಯನ್ನ ಬಿಟ್ಟು ಕೊಟ್ಟಿದ್ದಾರೆ. ಮುಡಾ ಲೋಟಿಯನ್ನ ನೋಡಿದರೆ ಚಾಲ್ಸ್ ಶೋಬರಾಜ್ ನನ್ನದು ಏನು ಹಗರಣ ಇಲ್ಲ ಅಂದುಕೊಳ್ಳುತ್ತಾರೆ ಎಂದರು.

ವಾಲ್ಮೀಕಿ ನಿಗಮದ ಹಣ ಎಲ್ಲೆಲಿಗೆ ಹೋಗಿದೆ: ಈ ಬಗ್ಗೆ ಬಿಜೆಪಿ ಸಮಗ್ರ ಮಾಹಿತಿ ಕಲೆ ಹಾಕುತ್ತಿದೆ. ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸಿ ಸಮಗ್ರ ತನಿಖೆಯಾಗಬೇಕು. ಯಾರೇ ಈ ಪ್ರಕರಣದಲ್ಲಿದ್ದರು ಅವರ ತಲೆ ತಂಡ ಆಗಬೇಕು. ಬಡವರಿಗೆ, ದಲಿತರಿಗೆ ಜಾಗ ಕೊಡಲು ಆಗುವುದಿಲ್ಲ, ಲೋಟಿ ಕೋರರಿಗೆ ಜಾಗ ಕೊಡುತ್ತಿದ್ದಾರೆ. ಈ ಸರ್ಕಾರ ಬಂದ ಮೇಲೆ ಎಲ್ಲ ದರಗಳು ಹೆಚ್ಚಾಗಿದೆ. ವಾಲ್ಮೀಕಿ ನಿಗಮದ ಹಣ ಎಲ್ಲೆಲಿಗೆ ಹೋಗಿದೆ. ಬೇರೆ ರಾಜ್ಯದ ಚುನಾವಣೆಗೆ ಎಷ್ಟು ಹಣ ಕೊಟ್ಟಿದ್ದಾರೆ. ಇವೆಲ್ಲವೂ ಸಮಗ್ರವಾಗಿ ಬಹಿರಂಗ ಆಗಬೇಕು ಎಂದು ಸಿ.ಟಿ.ರವಿ ಆಗ್ರಹಿಸಿದರು.

Tap to resize

Latest Videos

undefined

ಸಿಟ್ಟನ್ನ ಸ್ಕ್ರಿಪ್ಟ್ ಮಾಡಬೇಕು, ದ್ವೇಷವನ್ನ ಕ್ಯಾರೆಕ್ಟರ್ ಮಾಡಬೇಕು: ದರ್ಶನ್‌ಗೆ ಹಂಸಲೇಖ ಕಿವಿಮಾತು

ಸಿದ್ದರಾಮಯ್ಯ ಅತ್ಯಂತ ಮೇಧಾವಿ: ಸಿಎಂ ಅವರ ಹಣತಿ ಇಲ್ಲದೆ ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ. ಸಿಎಂ ಏನ್ ಹೆಬೆಟ್ಟಾ, ಫೈನಾನ್ಸ್ ಮಿನಿಸ್ಟರ್ ಅನಪಡ್ ಹಾ. ಸಿದ್ದರಾಮಯ್ಯ ಅತ್ಯಂತ ಮೇಧಾವಿ. ಅತಿ ಹೆಚ್ಚು ಭಾರಿ ಬಜೆಟ್ ಮಂಡಿಸಿದ ಖ್ಯಾತಿ ಅವರಿಗಿದೆ. ಆ ಖ್ಯಾತಿ ಇರುವ ಇಲಾಖೆಯಿಂದಲೇ ಸಾಲು ಸಾಲು ಹಗರಣ ನಡೆದಿದೆ. ಮೈಸೂರು ಮುಡಾದಲ್ಲಿ ಸಿಎಂ ಕೃಪಾಕಟಾಕ್ಷ ಇಲ್ಲದೆ ಹಗರದ ನಡೆಯಲು ಸಾಧ್ಯವೇ. ಒಂದು ವೇಳೆ ಸಾಧ್ಯ ಇದ್ರೆ ಸಿದ್ದರಾಮಯ್ಯ ದುರ್ಬಲ ಸಿಎಂ, ಗೊತ್ತಿದ್ರು ಮಾಡಿದ್ರೆ ಭ್ರಷ್ಟಾಚಾರಿ ಸಿಎಂ. ರಾಜ್ಯ ಸರ್ಕಾರ ನಂಬರನಲ್ಲಿ ಸೇಫ್ ಇದ್ದಾರೆ. ಆದರೆ ಜನರ ನಂಬಿಕೆಯನ್ನ ಕಳೆದುಕೊಂಡಿದೆ. ವಿಶ್ವಾಸ ಇಲ್ಲದ ಸಂಬಂಧ ಎಷ್ಟು ದಿನ ಉಳಿಯಲು ಸಾಧ್ಯ. ತಾಂತ್ರಿಕವಾಗಿ ಸರ್ಕಾರ ಸೇಫ್ ಆಗಿದೆ, ಆತ್ಮವಿಶ್ವಾಸದಲ್ಲಿ ಸರ್ಕಾರ ವೀಕ್ ಆಗಿದೆ ಎಂದು ವ್ಯಂಗ್ಯವಾಡಿದರು.

click me!