'ಬಿಜೆಪಿ ವರಿಷ್ಠರಿಗೆ ಪ್ರವೇಶವಿಲ್ಲ': ಮನವೊಲಿಕೆಗೆ ಮುಂದಾದ ನಾಯಕರಿಗೆ ಖೂಬಾ ಟಾಂಗ್

By Suvarna News  |  First Published Apr 3, 2021, 6:53 PM IST

ಬಸವಕಲ್ಯಾಣ ಬೈ ಎಲೆಕ್ಷನ್‌ ಅಖಾಡ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಮತ್ತೊಂದೆಡೆ ಬಿಜೆಪಿಗೆ ಬಂಡಾಯ ಬಿಸಿ ತಟ್ಟಿದ್ದು, ಆತಂಕದಲ್ಲಿದೆ. 


ಬೀದರ್, (ಏ.03): ಬಿಜೆಪಿ ಟಿಕೆಟ್ ಸಿಗದ ಕಾರಣ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ  ಅವರು ಬಸವಕಲ್ಯಾಣ ಉಪಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖೂಬಾ ಮನವೊಲಿಸಿ ಕಣದಿಂದ ಹಿಂದೆ ಸರಿಯುವಂತೆ ಮಾಡಲು ಬಿಜೆಪಿ ಸಚಿವರು ಸೇರಿದಂತೆ ಪಕ್ಷದ ರಾಜ್ಯ ಮಟ್ಟದ ಮುಖಂಡರು ಮುಂದಾಗಿದ್ದಾರೆ.

Latest Videos

undefined

ಬಸವಕಲ್ಯಾಣ ಉಪಸಮರ: ಅಕ್ರಮ ಪುರಾವೆ ನೀಡಿದ್ರೆ ಮೈದಾನದಲ್ಲೇ ನೇಣಿಗೆ ಶರಣು, ಸಲಗರ 

ನಾಮಪತ್ರ ಹಿಂಪಡೆಯುವಂತೆ ಮಲ್ಲಿಕಾರ್ಜುನ ಖೂಬಾ ಮನವೊಲಿಸಲು ಅವರ ಮನೆಗೆ ಬಿಜೆಪಿ ನಾಯಕರ ದಂಡು ಭೇಟಿ ನೀಡುತ್ತಿದೆ. ಇದರಿಂದ ಬೇಸತ್ತ ಖೂಬಾ, ಬಿಜೆಪಿ ವರಿಷ್ಠರಿಗೆ ಪ್ರವೇಶವಿಲ್ಲ ಎಂದು ಮನೆ ಮುಂದೆ ಬೋರ್ಡ್ ಹಾಕಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.

ನಿಮಗೆ ಭೇಟಿಯಾಗುವುದಿದ್ದರೆ ಕಲಬುರ್ಗಿಗೆ ಹೋಗಿ ಕಲಬುರ್ಗಿ ಅಭ್ಯರ್ಥಿಯನ್ನು ಭೇಟಿಯಾಗಿ. ನಮ್ಮನ್ನು ಭೇಟಿಯಾಗುವುದು ಬೇಡ ಎಂದು ವಿನಂತಿ ಜೊತೆಗೆ ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರಿಗೆ ಆತ್ಮೀಯರಿಗೆ ಮತ್ತು ಎಲ್ಲಾ ಜನತೆಗೆ ಸದಾ ಪ್ರವೇಶ ಎಂದು ಬರೆದು ಮನೆ ಮುಂದಿನ ಗೇಟ್‌ಗೆ ಬೋರ್ಡ್ ಹಾಕಿದ್ದಾರೆ.

ಕಲಬುರ್ಗಿ ಜಿಲ್ಲೆಯ ಶರಣು ಸಲಗರ್‌ಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಮಲ್ಲಿಕಾರ್ಜುನ ಖೂಬಾ ಅವರು ಉಪಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದು ಬಿಜೆಪಿ ಅಭ್ಯರ್ಥಿಯ ನಿದ್ದೆಗೆಡಿಸಿದ್ದು, ಖೂಬಾ ಕಣದಲ್ಲಿದ್ದರೆ ಗೆಲುವಿಗೆ ಮುಗುಳುವಾಗುವ ಸಾಧ್ಯತೆ ಇದೆ. 

click me!