'ಈಶ್ವರಪ್ಪರಂತಹ ಹಿಂದುಳಿದ ವರ್ಗಗಳ ನಾಯಕರನ್ನು ಮುಗಿಸಲು ಯಡಿಯೂರಪ್ಪ ಸ್ಕೆಚ್'

By Suvarna News  |  First Published Apr 3, 2021, 4:13 PM IST

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು, (ಏ.03): ಯಡಿಯೂರಪ್ಪ ಅವರು ಲಿಂಗಾಯತ ನಾಯಕರನ್ನು ಮುಗಿಸಿದಂತೆ ಈಗ ಹಿಂದುಳಿದ ವರ್ಗಗಳ ನಾಯಕರನ್ನು ಮುಗಿಸಲು ನೋಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಡಿಯೂರಪ್ಪ ವಿರುದ್ಧ ಸಚಿವ ಕೆಎಸ್ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿದರು.

Tap to resize

Latest Videos

undefined

ಈಶ್ವರಪ್ಪರನ್ನು ಉಚ್ಚಾಟಿಸಿ ಇಲ್ಲವೇ ನೀವೇ ರಾಜೀನಾಮೆ ನೀಡಿ: ಸಿಎಂಗೊಂದು ಸವಾಲು!

ಈ ಹಿಂದೆ ಯಡಿಯೂರಪ್ಪನವರು ಲಿಂಗಾಯತ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸಿದ್ದಾರೆ. ಇದೀಗ ಈಶ್ವರಪ್ಪರಂತಹ ಹಿಂದುಗಳಿದ ವರ್ಗಗಳ ನಾಯಕರನ್ನು ಮುಗಿಸುತ್ತಿದ್ದಾರೆ. ಅವರು ಒಂದಿಷ್ಟು ಹೊಗಳು ಭಟರನ್ನು ಇಟ್ಟುಕೊಂಡಿದ್ದಾರೆ. ಅದೇ ಅವರ ಶಕ್ತಿ ಎಂದು ಯತ್ನಾಳ್, ಯಡಿಯೂಪರಪ್ಪ ವಿರುದ್ಧ ಕಿಡಿಕಾರಿದರು. 

ಯತ್ನಾಳರ ಈ ಹೇಳಿಕೆಯನ್ನಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್​ನಲ್ಲಿ ಯಡಿಯೂರಪ್ಪ ಅವರ ಕಾಲೆಳೆದಿದೆ. BSY ಅವರು ಲಿಂಗಾಯತ ನಾಯಕರನ್ನು ಮುಗಿಸಿದರು, ಈಗ ಹಿಂದುಳಿದ ವರ್ಗದ ನಾಯಕರನ್ನು ಮುಗಿಸುವ ಕಾರ್ಯಕ್ರಮ ಹಾಕಿದ್ದಾರೆ. ಯಡಿಯೂರಪ್ಪ ಅವರೇ ಯತ್ನಾಳ್ ಹೇಳಿದಂತೆ ಬಿ ಬಿ ಶಿವಪ್ಪನವರಿಂದ ಹಿಡಿದು ಇಂದಿನ ನಾಯಕರವರೆಗೂ ಎಲ್ಲರನ್ನೂ ಮುಗಿಸಿದಿರಿ ಅಲ್ಲವೇ? ನೀವು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದಿರುವುದು, ಅವರ ಆರೋಪ ಒಪ್ಪಿದಂತೆ! ಎಂದು ಟ್ವೀಟ್ ಮಾಡಿದೆ.

BSY ಅವರು ಲಿಂಗಾಯತ ನಾಯಕರನ್ನು ಮುಗಿಸಿದರು, ಈಗ ಹಿಂದುಳಿದ ವರ್ಗದ ನಾಯಕರನ್ನು ಮುಗಿಸುವ ಕಾರ್ಯಕ್ರಮ ಹಾಕಿದ್ದಾರೆ.
- ಅವರೇ ಯತ್ನಾಳ್ ಹೇಳಿದಂತೆ ಬಿ ಬಿ ಶಿವಪ್ಪನವರಿಂದ ಹಿಡಿದು ಇಂದಿನ ನಾಯಕರವರೆಗೂ ಎಲ್ಲರನ್ನೂ ಮುಗಿಸಿದಿರಿ ಅಲ್ಲವೇ?

ನೀವು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದಿರುವುದು, ಅವರ ಆರೋಪ ಒಪ್ಪಿದಂತೆ! pic.twitter.com/0ihwXDsFSJ

— Karnataka Congress (@INCKarnataka)
click me!