ಸಿದ್ದರಾಮೋತ್ಸವ ರಾಜ್ಯ ರಾಜಕಾರಣದಲ್ಲೇ ಬಹುದೊಡ್ಡ ಸಂಚಲನ ಸೃಷ್ಟಿಸಿದೆ. ಒಂದು ಕಡೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ವಿರೋಧಿಗಳಿಗೆ ಎಷ್ಟು ನಿದ್ದೆ ಬರುತ್ತಿಲ್ಲ. ಇತ್ತ ಬಿಜೆಪಿ ಪಾಳಯದಲ್ಲೂ ಸಿದ್ದರಾಮೋತ್ಸವದ ಬಗ್ಗೆಯೇ ಚರ್ಚೆ. ಇಂದು ಹಾವೇರಿಗೆ ಆಗಮಿಸಿದ್ದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಸಿದ್ದರಾಮೋತ್ಸವ ಬಿಜೆಪಿಗೆ ಎಚ್ಚರಿಕೆ ಘಂಟೆ ಆಗಿದೆಯಾ ಎಂಬ ಪ್ರಶ್ನೆಗೆ ಹಾರಿಕೆ ಉತ್ತರ ಕೊಟ್ಟಿದ್ದಾರೆ.
ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ
ಹಾವೇರಿ (ಆ.06): ಸಿದ್ದರಾಮೋತ್ಸವ ರಾಜ್ಯ ರಾಜಕಾರಣದಲ್ಲೇ ಬಹುದೊಡ್ಡ ಸಂಚಲನ ಸೃಷ್ಟಿಸಿದೆ. ಒಂದು ಕಡೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ವಿರೋಧಿಗಳಿಗೆ ಎಷ್ಟು ನಿದ್ದೆ ಬರುತ್ತಿಲ್ಲ. ಇತ್ತ ಬಿಜೆಪಿ ಪಾಳಯದಲ್ಲೂ ಸಿದ್ದರಾಮೋತ್ಸವದ ಬಗ್ಗೆಯೇ ಚರ್ಚೆ. ಇಂದು ಹಾವೇರಿಗೆ ಆಗಮಿಸಿದ್ದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಸಿದ್ದರಾಮೋತ್ಸವ ಬಿಜೆಪಿಗೆ ಎಚ್ಚರಿಕೆ ಘಂಟೆ ಆಗಿದೆಯಾ ಎಂಬ ಪ್ರಶ್ನೆಗೆ ಹಾರಿಕೆ ಉತ್ತರ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಸಿದ್ದರಾಮಯ್ಯನವರು 75 ವರ್ಷ ಆಗಿದೆ ಎಂದು ಅವರ ಖಾಸಗಿ ಉತ್ಸವ ಮಾಡಿಕೊಂಡಿದ್ದಾರೆ. ಅದಕ್ಕೂ ನಮ್ಮ ರಾಜಕಾರಣಕ್ಕೂ ಯಾವುದೇ ಸಂಬಂಧ ಇಲ್ಲ.
undefined
ಬಿಜೆಪಿ ಸೈದ್ಧಾಂತಿಕ ಮತ್ತು ಸಂಘಟನಾತ್ಮಕ ಹೋರಾಟ ಮತ್ತು ನಮ್ಮ ಅಭಿವೃದ್ಧಿ ಕೆಲಸ, ನಮ್ಮ ಸಿಎಂ ಪರಿಶ್ರಮ, ನಳೀನ್ ಕುಮಾರ್ ಕಟೀಲ್ ಅವರ ಸಂಘಟನಾ ಶಕ್ತಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳು, ಯಡಿಯೂರಪ್ಪನವರ ನೇತೃತ್ವ ಈ ಎಲ್ಲಾ ಕಾರಣದಿಂದ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಸಿದ್ದರಾಮಯ್ಯನವರ ಖಾಸಗಿ ಉತ್ಸವಕ್ಕೂ ನಮ್ಮ ರಾಜಕೀಯ ಸಂಘಟನೆಗೂ ಸಂಬಂಧ ಇಲ್ಲ ಎಂದರು. ನಾವೂ ಕೂಡಾ ಕಾಲ ಕಾಲಕ್ಕೆ ನಾವು ಪ. ಜಾತಿ, ಪ.ಪಂಗಡ ಸೇರಿದಂತೆ ಫಲಾನುಭವಿಗಳನ್ನು ಸೇರಿಸಿ ಸಮಾವೇಶ ಮಾಡಿದ್ದೇವೆ. ಸಂಘಟನಾತ್ಮಕ ಸಮಾವೇಶಗಳನ್ನು ನಾವೂ ಮಾಡಿದ್ದೇವೆ. ಸಿದ್ದರಾಮಯ್ಯನವರು ಮಾಡಿದ್ದಾರೆ ಅಂತ ನಾವು ಸಮಾವೇಶ ಮಾಡಲ್ಲ.
ಹಾವೇರಿಯಲ್ಲೊಂದು ಆಮೆಗತಿ ಕಾಮಗಾರಿ; 15 ವರ್ಷ ಕಳೆದರೂ ಮುಗಿಯದ ಯುಜಿಡಿ ಕಾಮಗಾರಿ!
ನಮ್ಮ ಕಾರ್ಯಕ್ರಮಗಳು ಮುಂದುವರೆಯುತ್ತವೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಹೋರಾಟ, ತಮ್ಮ ಸಭೆ ಸಮಾವೇಶ ಮಾಡಿ ನಾವು ಗೆಲ್ತೇವೆ ಅಂತ ಹೇಳ್ತಾರೆ. ಸಿದ್ದರಾಮಯ್ಯ ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ರಾಜಕೀಯ ಸಮಾವೇಶ ಮಾಡಿದ್ದಾರೆ. ಬಿಜೆಪಿ ಅನೇಕ ಹೋರಾಟ ಮಾಡಿಕೊಂಡು ಬಂದ ಪಕ್ಷ. ಈ ಬಾರಿ ಚುನಾವಣೆ ಎದುರಿಸುತ್ತೇವೆ. ಹಾಗೂ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ಸಂಘಟನೆಗೂ, ಸಿದ್ದರಾಮಯ್ಯ ಸಮಾವೇಶಕ್ಕೂ ಸಂಬಂಧವೇ ಇಲ್ಲ. ಅವರ ಸಮಾವೇಶಕ್ಕೂ ಜನ ಬಂದಿದ್ದಾರೆ. ಒಂದು ಸಮಾವೇಶ ಒಂದು ರಾಜಕೀಯ ತೀರ್ಮಾನ ಮಾಡಲ್ಲ. ಸಮಾವೇಶ ಬರೀ ಸಮಾವೇಶ ಆಗಿರುತ್ತೆ, ರಾಜಕೀಯ ನಿರ್ಧಾರ ರಾಜಕೀಯ ನಿರ್ಧಾರ ಆಗಿರುತ್ತೆ ಎಂದು ಹೇಳಿದರು.
ಅಮಿತ್ ಶಾ ನಮ್ಮ ಪರಮೋಚ್ಚ ನಾಯಕರು, ಅವರು ನಮಗೆ ತಿಳಿ ಹೇಳಿದ್ದಾರೆ: ಸಿದ್ದರಾಮೋತ್ಸವದ ಯಶಸ್ಸು, ಹಾಗೂ ಕರಾವಳಿ ಭಾಗದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಕುರಿತು ಸಿಎಂ ಸೇರಿದಂತೆ ಬಿಜೆಪಿ ಮುಖಂಡರಿಗೆ ಅಮಿತ್ ಶಾ ತರಾಟೆಗೆ ತೆಗೆದುಕೊಂಡ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೋಟಾ ಶ್ರೀನಿವಾಸ್ ಪೂಜಾರಿ, ಅಮಿತ್ ಶಾ ನಮ್ಮ ಹಿರಿಯರು. ನಮ್ಮನ್ನು ಕರೆದು ರಾಜಕೀಯ ಮಾರ್ಗದರ್ಶನ ಮಾಡೋದು ರೂಢಿ. ಅಮಿತ್ ಶಾ ರವರು ನಮ್ಮ ಪರಮೋಚ್ಛ ನಾಯಕರಾಗಿದ್ದಾರೆ. ನಮಗೆ ಸಲಹೆ, ಸೂಚನೆ ಕೊಡೋ ಜವಾಬ್ದಾರಿ ಸ್ಥಾನದಲ್ಲಿರೋದ್ರಿಂದ ನಮಗೆ ಅವರು ತಿಳಿ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ಪಷ್ಟವಾಗಿ ಬಿಜೆಪಿ ನಿಶ್ಚಿತ ಬಹುಮತ ಗಳಿಸುತ್ತದೆ ಎಂದರು.
ಹಾವೇರಿ: ಹಿಂದೂ ಕಾರ್ಯಕರ್ತರ ಹತ್ಯೆಗೆ ರಾಣೆಬೆನ್ನೂರಲ್ಲಿ ಭುಗಿಲೆದ್ದ ಆಕ್ರೋಶ
ಬಿ.ಎಸ್.ವೈ ಉತ್ತರಾಧಿಕಾರಿ ಯಾರೂ ಇಲ್ಲ. ವಿಜಯೇಂದ್ರ ಕಾರ್ಯಕರ್ತ ಅಷ್ಟೆ: ಯಡಿಯೂರಪ್ಪ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ವಿಚಾರವಾಗಿಯೂ ಕೋಟಾ ಶ್ರೀನಿವಾಸ್ ಪೂಜಾರಿ ಉತ್ತರಿಸಿದರು. ಯಡಿಯೂರಪ್ಪನವರು ನಮ್ಮ ಪ್ರಶ್ನಾತೀತ ಮುಖಂಡರಲ್ಲಿ ಒಬ್ಬರು. ಈ ರಾಜ್ಯದಲ್ಲಿ ಪಾರ್ಟಿ ಕಟ್ಟಿದವರು, ಮುನ್ನಡೆಸುವವರು ಅವರೇ, ಕೆಲವು ವಿಚಾರಕ್ಕೆ ಸಲಹೆ ಕೊಟ್ಟಿರ್ತಾರೆ. ಅವರ ಉತ್ತರಾಧಿಕಾರಿ ಯಾರೂ ಇಲ್ಲ. ವಿಜಯೇಂದ್ರ ನಮ್ಮ ಪಾರ್ಟಿ ಉಪಾಧ್ಯಕ್ಷರು. ವಿಜಯೇಂದ್ರ ಸೇರಿದಂತೆ ರಾಜ್ಯದ ಎಲ್ಲಾ ಬಿಜೆಪಿ ಕಾರ್ಯಕರ್ತರೂ ಯಡಿಯೂರಪ್ಪನವರಿಗೆ ಕಾರ್ಯಕರ್ತರೇ. ಬಿಎಸ್‌ವೈ ವಿಜಯೇಂದ್ರ ಸೇರಿದಂತೆ ಎಲ್ಲಾ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡ್ತಾರೆ. ಅವರ ಮಾರ್ಗದರ್ಶನದಲ್ಲಿ ನಾವು ಮುನ್ನಡೆಯುತ್ತೇವೆ ಎಂದು ಹೇಳಿದರು.