ಅಕ್ರಮ ಆಸ್ತಿ ಗಳಿಕೆ: ಶಾಸಕ ಜಮೀರ್ ಅಹಮದ್ ಎಸಿಬಿ ವಿಚಾರಣೆಗೆ ಹಾಜರು

By Govindaraj SFirst Published Aug 6, 2022, 2:36 PM IST
Highlights

ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್‌ರಿಗೆ ಎಸಿಬಿಯಿಂದ ಬುಲಾವ್ ಬಂದಿದ್ದು, ಎಸಿಬಿ ಕಛೇರಿಗೆ ವಿಚಾರಣೆಗೆ ಇಂದು ಹಾಜರಾಗಿದ್ದಾರೆ. ದಾಳಿ ಬಳಿಕ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ನೀಡಿತ್ತು.

ಬೆಂಗಳೂರು (ಆ.06): ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್‌ರಿಗೆ ಎಸಿಬಿಯಿಂದ ಬುಲಾವ್ ಬಂದಿದ್ದು, ಎಸಿಬಿ ಕಛೇರಿಗೆ ವಿಚಾರಣೆಗೆ ಇಂದು ಹಾಜರಾಗಿದ್ದಾರೆ. ದಾಳಿ ಬಳಿಕ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ನೀಡಿತ್ತು. ದಾಳಿಯಲ್ಲಿ ಮನೆ, ಆಸ್ತಿ, ಆದಾಯದ, ಮೂಲ ಪತ್ತೆಯಾಗಿತ್ತು. ಅದಮತೋಲನ ಆಸ್ತಿ ಗಳಿಕೆ ಹಿನ್ನೆಲೆ ವಿಚಾರಣೆಗೆ 10 ದಿನದ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ನೀಡಿತ್ತು. ಇಂದು ಎಸ್ಪಿ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ಜಮೀರ್ ವಿಚಾರಣೆ ನಡೆಯುತ್ತಿದ್ದು, ಜಮೀರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ಕಲಂ 13(1)(b)r/w13(2) ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಪಿಎಂಎಲ್ಎ ಕಾಯ್ದೆ ಅನ್ವಯ ಇಡಿ ಕೊಟ್ಟ ಮಾಹಿತಿ ಮೇರೆಗೆ ದೂರು ದಾಖಲಾಗಿಸಲಾಗಿದ್ದು, ಇಡಿ ದಾಖಲಿಸಿದ ಇಸಿಐಆರ್ ತನಿಖೆಯಲ್ಲಿ ಜಮೀರ್ ಅಹಮದ್ ಸಾರ್ವಜನಿಕ ಸೇವಕರಾಗಿದ್ದಾರೆ. ಹಾಗೂ 2005ರಿಂದ ಆಗಸ್ಟ್ 5.2021ರ ಅವಧಿಯಲ್ಲಿ ತನ್ನ ಅಧಿಕಾರವನ್ನ ದುರುಪಯೋಗ ಮಾಡಿಕೊಂಡಿದ್ದು, ಈ ವೇಳೆ ಅಪಾರ ಪ್ರಮಾಣದ ಆಸ್ತಿ ಗಳಿಸಿರೋ ಅಂಶ ಪತ್ತೆಯಾಗಿದೆ. 

ಜಾರಿ ನಿರ್ದೇಶನಾಲಯ ನೀಡಿದ ಮಾಹಿತಿಯ ಪ್ರಕಾರ ಒಟ್ಟು ಆಸ್ತಿ-73,94,36,027, ಆದಾಯ-4,30,48,790, ವೆಚ್ಚ-17,80,18,000, ಹಾಗೂ ಆದಾಯಕ್ಕಿಂತ 87,44,05,057 ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖವಾಗಿತ್ತು. ಅಲ್ಲದೇ ಅಧಿಕವಾಗಿ ಅಕ್ರಮವಾಗಿ ಆಸ್ತಿ ಗಳಿಸಿದ ಆರೋಪ ದಾಖಲಾಗಿದೆ. 

ಶಾಸಕ ಜಮೀರ್‌ಗೆ ಸಾಲ ಕೊಟ್ಟಿದ್ದಕ್ಕೆ ಇಡಿ ವಿಚಾರಣೆ: ಕೆಜಿಎಫ್‌ ಬಾಬು

ಜಮೀರ್ ಮನೆಯ ಇತಿಹಾಸ: ಜಮೀರ್ ಬಳಿ  ಅಂದಾಜು 80 ಕೋಟಿ ಮೌಲ್ಯದ ಮನೆಯಿದ್ದು, 20 ಗುಂಟೆ ವಿಸ್ತೀರ್ಣದಲ್ಲಿದೆ. 10 ಗುಂಟೆಯಲ್ಲಿ ಮನೆಯ ನಿರ್ಮಾಣವಾಗಿದ್ದು, 10 ಗುಂಟೆಯಲ್ಲಿ ಗಾರ್ಡನ್ ನಿರ್ಮಾಣ ಮಾಡಲಾಗಿದೆ. ಈ ಜಾಗದ ಮೌಲ್ಯ 15 ಕೋಟಿ ರೂಪಾಯಿಯಾಗಿದ್ದು, ಮನೆ ನಿರ್ಮಾಣಕ್ಕೆ ಗ್ರಾನೈಟ್ ಶ್ವೇತ ಶಿಲೆ ಬಳಸಲಾಗಿದೆ. ಅರೆಬಿಕ್ ಶೈಲಿಯಲ್ಲಿ ಮನೆಯ ನಿರ್ಮಿಸಲಾಗಿದ್ದು, ಇಟಾಲಿಯನ್ ಮಾರ್ಬಲ್ಸ್ 5 ಕೋಟಿ ಮೌಲ್ಯದ್ದಾಗಿದೆ. ಮನೆಗೆ ಸ್ಯಾಂಡ್‌ವಿಚ್ ಗಾಜುಗಳನ್ನು ಬಳಸಲಾಗಿದ್ದು, ಟೀಕ್ ವುಡ್ ಕಿಟಿಕಿ ಮತ್ತು ಬಾಗಿಲುಗಳಿವೆ. 

ಮನೆಗೆ ವೈಭವಪೂರಿತ ಸೀಲಿಂಗ್ ಲೈಟ್‌ಗಳನ್ನು ಅಳವಡಿಕೆ ಮಾಡಲಾಗಿದ್ದು, ಇದೆಲ್ಲದಕ್ಕೂ ಎಸಿಬಿ ಬಿಲ್ಲಿಂಗ್ ಕೇಳಿದೆ. ಒಟ್ಟು 87,44,05,057 ರೂಪಾಯಿ ಮೂಲದ ದಾಖಲೆಯನ್ನು ಎಸಿಬಿ ಕೇಳಿದ್ದು, ಜೊತೆಗೆ ನ್ಯಾಷನಲ್ ಟ್ರಾವೆಲ್ಸ್‌ನ ಆದಾಯದ ಮೊತ್ತ ಮಾಹಿತಿಯನ್ನು ಕೇಳಿದೆ. ಇನ್ನು ಕೊರೋನಾದಿಂದಾಗಿ ಎರಡು ವರ್ಷ ಬಸ್‌ಗಳು ಶೆಡ್ ಸೇರಿದ್ದರೂ ಇದರ ನಡುವೆಯೂ ಆದಾಯದ ಮೂಲ ಹೇಗೆ? ಎಂಬೆಲ್ಲಾ ಪ್ರಶ್ನೆಗೆ ಜಮೀರ್ ಉತ್ತರಿಸಬೇಕಿದೆ.

ಸಿದ್ದುಗೆ ಅಧಿಕಾರಕ್ಕಾಗಿ ನಮಾಜ್‌ ಆದ ಬಳಿಕ ಪ್ರಾರ್ಥಿಸಿ: ಜಮೀರ್‌ ಅಹಮ್ಮದ್‌

ಸದ್ಯ ಮೊದಲ ವಿಚಾರಣೆಯಲ್ಲೇ ಜಮೀರ್‌ಗೆ ಎಸಿಬಿ ಶಾಕ್ ಕೊಟ್ಟಿದ್ದು, ನೂರಕ್ಕೂ ಅಧಿಕ ಪ್ರಶ್ನೆಗಳನ್ನು ಲಿಖಿತವಾಗಿ ಕೇಳಿದ್ದಾರೆ. ನೂರು ಪ್ರಶ್ನೆಗಳಿಗೂ ಲಿಖಿತ ರೂಪದಲ್ಲಿಯೇ ಉತ್ತರ ನೀಡುವಂತೆ ಜಮೀರ್‌ಗೆ ಎಸಿಬಿ ಸೂಚನೆ ನೀಡಿದ್ದು, ಉತ್ತರವನ್ನ ಬರೆದು ಕೊಡಲು ಒಬ್ಬ ಸಿಬ್ಬಂದಿಯನ್ನು ಎಸಿಬಿ ಅಧಿಕಾರಿಗಳು ನೀಡಿದ್ದಾರೆ. ಈ ಪ್ರಶ್ನೆಗಳು ಗಳಿಕೆ‌ ಮಾಡಿರುವ ಅಪಾರ ಪ್ರಮಾಣದ ಆಸ್ತಿಯ ಮೂಲದ ಕುರಿತಾಗಿವೆ.

ಇನ್ನು ಎಸಿಬಿ ಎರಡು ತಿಂಗಳ ಒಳಗೆ ಮತ್ತಷ್ಟು ದಾಖಲೆಗಳೊಂದಿಗೆ ಹಾಜರಾಗಲು ಜಮೀರ್‌ಗೆ ಗಡುವು ನೀಡಿದ್ದಾರೆ. ಕೆಲವು ದಾಖಲೆಗಳನ್ನು ಮಾತ್ರ ಸದ್ಯ ಜಮೀರ್ ಸಲ್ಲಿಸಿದ್ದಾರೆ. ಪ್ರಮುಖ ದಾಖಲೆಗಳ ಅವಶ್ಯವಿರುವ ಹಿನ್ನಲೆ, ತನಿಖೆ ಭಾಗವಾಗಿ ಅವಶ್ಯವಿದೆ, ತಪ್ಪದೇ ಮಹತ್ವದ ದಾಖಲೆಗಳನ್ನ ಮುಂದಿನ ವಿಚಾರಣೆಗೆ ತರುವಂತೆ ಎಸಿಬಿ ಸೂಚನೆ ನೀಡಿದ್ದು, ಅವಶ್ಯ ದಾಖಲೆಗಳನ್ನ ಪಟ್ಟಿಮಾಡಿ ಶಾಸಕ ಜಮೀರ್ ಅಹಮ್ಮದ್‌ಗೆ ಎಸಿಬಿ ಅಧಿಕಾರಿಗಳು ನೀಡಿದ್ದಾರೆ.

click me!