ಹೊಸ ಮತದಾರರ ಒಲವು ಬಿಜೆಪಿಯತ್ತ: ಸಚಿವ ಸಿ.ಸಿ.ಪಾಟೀಲ್‌

By Kannadaprabha News  |  First Published Apr 15, 2023, 10:42 PM IST

ನರಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಲಕ್ಕುಂಡಿ ಗ್ರಾಮದಲ್ಲಿ ಪ್ರಥಮ ಬಾರಿಗೆ ಮತದಾನದ ಹಕ್ಕು ಪಡೆದಿರುವ ನೂರಾರು ಯುವಕರು ಮತ್ತು ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡ ಹಿರಿಯರನ್ನು, ಯುವಕರನ್ನು ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡು ಸಿ.ಸಿ. ಪಾಟೀಲ ಮಾತನಾಡಿದರು. 


ನರಗುಂದ (ಏ.15): ದೇಶದ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ದಿಟ್ಟನಿಲುವುಗಳಿಂದಾಗಿ ದೇಶದಲ್ಲಿ ಸುಭಿಕ್ಷ ಜೀವನ ವಿಶ್ವದಲ್ಲಿ ಭಾರತವನ್ನು ಶಕ್ತಿಶಾಲಿ ರಾಷ್ಟ್ರವಾಗಿ ರೂಪಿಸುವಲ್ಲಿ ಅವರು ಜಾರಿಗೊಳಿಸಿದ ಮಹತ್ತರವಾದ ವಿದೇಶಾಂಗ ನೀತಿಗಳು ಪ್ರಥಮ ಬಾರಿಗೆ ಮತದಾನ ಮಾಡುವ ಯುವ ಸಮುದಾಯಕ್ಕೆ ತೀವ್ರ ಮೆಚ್ಚುಗೆಗಳಿಸಿದ್ದು ಅವರೆಲ್ಲಾ ಈಗ ಬಿಜೆಪಿ ಮತದಾರರು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು.

ನರಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಲಕ್ಕುಂಡಿ ಗ್ರಾಮದಲ್ಲಿ ಪ್ರಥಮ ಬಾರಿಗೆ ಮತದಾನದ ಹಕ್ಕು ಪಡೆದಿರುವ ನೂರಾರು ಯುವಕರು ಮತ್ತು ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡ ಹಿರಿಯರನ್ನು, ಯುವಕರನ್ನು ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡು ನಂತ​ರ ಮಾತನಾಡಿದರು. ಮೀಸಲಾತಿ ವಿಷಯದಲ್ಲಿ ರಾಜ್ಯದಲ್ಲಿ ಕ್ರಾಂತಿಕಾರ ನಿರ್ಧಾರವನ್ನು ನಮ್ಮೆಲ್ಲರ ನಾಯಕರಾದ ಬಸವರಾಜ ಬೊಮ್ಮಾಯಿ, ಬಿ.ಎಸ್‌. ಯಡಿಯೂರಪ್ಪ ತೆಗೆದುಕೊಂಡಿದ್ದಾರೆ. 

Tap to resize

Latest Videos

undefined

ನಾನು ಮಾಡಿದ ಅಭಿವೃದ್ಧಿ ಮುಂದಿಟ್ಟು ಮತ ಕೇಳುವೆ: ಶಾಸಕ ವೀರಣ್ಣ ಚರಂತಿಮಠ

ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ, ಒಳಮೀಸಲಾತಿ ಜಾರಿ, ಲಿಂಗಾಯತ ಮತ್ತು ಒಕ್ಕಲಿಗರಿಗೆ ನೀಡಿರುವ ಮೀಸಲಾತಿ ಹೆಚ್ಚಳ ಮತ್ತು ಪ್ರವರ್ಗ ಸೃಷ್ಟಿಯಿಂದಾಗಿ ಆ ಸಮಾಜ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ ಇದನ್ನು ಪಡೆಯುವುದು ಪ್ರತಿಯೊಬ್ಬರ ಹಕ್ಕಾಗಿತ್ತು, ಆದರೆ ಈ ಹಕ್ಕನ್ನು ಕಾಂಗ್ರೆಸ್‌ ಪಕ್ಷದವರು ನೀಡದೇ ಕಾಯಿಸುತ್ತಲೇ ಲಿಂಗಾಯತರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದ್ದರು. ಇದನ್ನು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಸಾರ್ವಜನಿಕರಿಗೆ ತಿಳಿಸಬೇಕು. ನಮ್ಮ ಪಕ್ಷ ಮಾಡಿದ ಜನಸೇವೆಗೆ ಮರಳಿ ಮತದಾನದ ಮೂಲಕ ಆಶೀರ್ವಾದ ಪಡೆಯಬೇಕು ಎಂದು ವಿನಂತಿಸಿದರು.

ಪ್ರಥಮ ಬಾರಿಗೆ ಮತದಾನ ಮಾಡುತ್ತಿರುವ ಶ್ರೀಧರ ಬಟ್ಟೂರ, ಮಲ್ಲಿಕಾರ್ಜುನ ಬಡಿಗೇರ, ಸಚಿನ ಮದ್ಲಿ, ರಾಜು ಪತ್ರಿಮಠ, ಸಂತೋಷ ಬಟ್ಟೂರ, ಅಭಿಷೇಕ ಗೊಂಡಬಾಳ, ವಿನೋದ ತೆವರ, ಪ್ರಸನ್ನ ಕಮ್ಮಾರ, ಸುದೀಪ ಕಮ್ಮಾರ ಸೇರಿ​ದಂತೆ ರಮೇಶ ಹಳ್ಳಿ, ವಿರುಪಾಕ್ಷಪ್ಪ ಕಲಾಲ ಬಂಡಿ, ಅಶೋಕ ಬೂದಿಹಾಳ, ಈರಣ್ಣ ಗುಳೇದಗುಡ್ಡ, ತಮ್ಮಣ್ಣ ಕಲ್ಲೂರ, ರಮೇಶ ಕರಿಯಣ್ಣವರ, ಶಂಕ್ರಪ್ಪ ಜಾಡರ, ಈರಣ್ಣ ಮಣ್ಣೂರ, ಗೋವಿಂದಪ್ಪ ಬೆಂತೂರ, ಬಸವರಾಜ ನೂಕಾಪೂರ, ಮಲ್ಲಪ್ಪ ಹಟ್ಟಿ, ಸುಂದರಗೌಡ ಬೇಲೇರಿ, ಅಜ್ಜಪ್ಪ ಕುರುಡಗಿ, ಉಸ್ಮಾನ್‌ ಮುಲ್ಲಾ, ಪೀರಸಾಬ ನದಾಫ, ಹಸನಸಾಬ ನದಾಫ, ಬಸವರಾಜ ಕಪ್ಪತನವರ, ಶರೀಫಸಾಬ ನದಾಫ್ವರು ಬಿಜೆಪಿಗೆ ಸೇರ್ಪಡೆಯಾದರು. 

ನನಗೆ ಮಂತ್ರಿಯಾಗುವ ಅವಕಾಶವಿದೆ ಗೆಲ್ಲಿಸಿ​: ಮಾಲೀಕಯ್ಯ ಗುತ್ತೇದಾರ್‌

ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!