ದಾವಣಗೆರೆ: ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲವೆಂದು ಸಾಬೀತುಪಡಿಸಿ: ಎಂ.ಪಿ.ರೇಣುಕಾಚಾರ್ಯ ಸವಾಲ್

By Kannadaprabha News  |  First Published Feb 13, 2023, 5:30 AM IST

ನಾನು ಪಲಾಯನವಾದಿಯಲ್ಲ, ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಸಾಬೀತುಪಡಿಸಿದರೆ. ನಾನು ಮುಂಬರುವ ಚುನಾವಣೆಯಿಂದ ಹಿಂದೆ ಸರಿಯಲು ಸಿದ್ಧ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.


ಹೊನ್ನಾಳಿ (ಫೆ.13) : ನಾನು ಪಲಾಯನವಾದಿಯಲ್ಲ, ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಸಾಬೀತುಪಡಿಸಿದರೆ. ನಾನು ಮುಂಬರುವ ಚುನಾವಣೆಯಿಂದ ಹಿಂದೆ ಸರಿಯಲು ಸಿದ್ಧ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ತಾಲೂಕಿನ ಸಾಸ್ವೇಹಳ್ಳಿ-1 ಹೋಬಳಿ ವ್ಯಾಪ್ತಿಯ ಲಿಂಗದಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮವಾಸ್ತವ್ಯ(Grama vastavya) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅತಿವೃಷ್ಟಿಯಿಂದ ಅವಳಿ ತಾಲೂಕಿನಲ್ಲಿ ಸುಮಾರು 3,500 ಮನೆಗಳಿಗೆ 131 ಕೋಟಿ ರು. ಪರಿಹಾರ ಒದಗಿಸಿದೆ. ಲಿಂಗಾಪುರದಲ್ಲಿ 20 ಮನೆ ಹಾಗೂ ಹನಗವಾಡಿ ಗ್ರಾಮದಲ್ಲಿ 36 ಮನೆಗಳಿಗೆ ಮನೆಹಾನಿ ಪರಿಹಾರ ಮಂಜೂರು ಮಾಡಿಸಿದೆ ಎಂದರು. ಹೊಸಹಳ್ಳಿ, ಸಾಸ್ವೇಹಳ್ಳಿ, ಕುಳಗಟ್ಟೆ, ಕ್ಯಾಸಿನಕಟ್ಟೆಈ ಭಾಗದ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿಗಾಗಿ 49 ಕೋಟಿ ರು.ಮಂಜೂರು ಮಾಡಿಸಿದ್ದು ಟೆಂಡರ್‌ ಆಗಿದೆ. ಈ ಭಾಗದ ಕೆರೆ ತುಂಬಿಸುಲು 59 ಕೋಟಿ ರು. ಅನುದಾನ ನೀಡಿ ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

Tap to resize

Latest Videos

ಚಿಕ್ಕಮಗಳೂರಿನಲ್ಲಿ ಹೆಲಿಪೋರ್ಟ್ ನಿರ್ಮಾಣ: ಡಿಪಿಆರ್‌ಗೆ ಸಿದ್ಧತೆ

ಗ್ರಾಮದ ಜನರ ಬೇಡಿಕೆಗೆ ಸ್ಪಂದನೆ:

ಕಾರ್ಯಕ್ರಮದಲ್ಲಿ ಲಿಂಗಾಪುರ ಮತ್ತು ಹನಗÜವಾಡಿ ಗ್ರಾಮಗಳ ಜನತೆ ತಮ್ಮ ಗ್ರಾಮದÜಲ್ಲಿ ಸ್ಮಶಾನವಿಲ್ಲದೆ ಹೊಳೆ ದಂಡೆ ಮೇಲೆ ಶವಸಂಸ್ಕಾರ ಮಾಡುವ ಕೆಟ್ಟಪರಿಸ್ಥಿತಿ ಇದೆ ಈ ಭಾಗದಲ್ಲಿ ಆಸ್ತಿಯ ಇ-ಸ್ವತ್ತು ಆಗದೆ ತೊಂದರೆಯಾಗಿದೆ ಜೊತೆಗೆ ಶಾಲಾ ಆವರಣದ ತಗ್ಗು ಪ್ರದೇಶದಲ್ಲಿ ನೀರು ನಿಂತು ತೊಂದರೆಯಾಗುತ್ತಿದೆ ಎಂಬ ಬೇಡಿಕೆಗಳಿಗೆ ಸ್ಪಂದಿಸಿ ಮಾತನಾಡಿದ ಶಾಸಕರು ಕೂಡಲೇ ಸ್ಮಶಾನ ವ್ಯವಸ್ಥೆ ಹಾಗೂ ಶಾಲಾ ಅವರಣದ ಗುಂಡಿ ಮುಚ್ಚಲು ಹಾಗೂ ಇ-ಸ್ವತ್ತು ದಾಖಲೆ ನೀಡಲು ಶೀಘ್ರ ವ್ಯವಸ್ಥೆಗೆ ಸ್ಥಳದಲ್ಲಿದ್ದ ತಹಸೀಲ್ದಾರ್‌ ಹಾಗೂ ತಾಲೂಕು ಪಂಚಾಯಿತಿ ಇಒಗಳಿಗೆ ಸೂಚನೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಹಸೀಲ್ದಾರ್‌ ತಿರುಪತಿ ಪಾಟೀಲ್‌ ಸರ್ಕಾರದ ಬಳಿ ಸಮಸ್ಯೆಗಳ ಹೇಳಿಕೊಳ್ಳುವ ಬದಲಿಗೆ ಸರ್ಕಾರವೇ ಜನರ ಬಳಿಗೆ ಬಂದು ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ವ್ಯವಸ್ಥೆಯೇ ಗ್ರಾಮವಾಸ್ತವ್ಯ. ರಾಜ್ಯದಲ್ಲಿಯೇ ಹೊನ್ನಾಳಿ ಕ್ಷೇತ್ರ ಪ್ರಥಮವಾಗಿ ಈ ಕಾರ್ಯಕ್ರಮ ನಡೆಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೇಖಾ, ಗ್ರಾಮದ ಹಿರಿಯರಾದ ಎ.ಕೆ.ಚಂದ್ರಪ್ಪ, ನರೇಂದ್ರ, ಧನರಾಜಪ್ಪ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ ಟಿ. ಉಪಾಧ್ಯಕ್ಷೆ ರೇಖಾ, ಸದಸ್ಯ ಉಷಾ, ಜ್ಯೋತಿ, ಶಿವು, ಗೌರಮ್ಮ, ದೇವರಾಜ, ವೆಂಕಟೇಶ್‌, ನರೇಂದ್ರ, ವೀರೇಶ್‌ ರಾವ್‌, ಶಶಿಕಲಾ, ಪಾರ್ವತಮ್ಮ ಕೆಎಸ್‌ಡಿಎಲ್‌ನ ಶಿವು ಹುಡೇದ್‌, ದೇವು, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಂಗಪ್ಪ, ಜಿ.ವಿ.ರಾಜು, ತಾಲೂಕು ಪಂಚಾಯಿತಿ ಇಒ ರಾಮಭೋವಿ ಸ್ವಾಗತಿಸಿದರು. ಪಿಡಿಒ ಭಾರತಿ ನಿರೂಪಿಸಿದರು. ಗ್ರಾಮದ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

ಚಿಕ್ಕಮಗಳೂರು: ಶ್ರೀಮಠ ಸಂಸ್ಕಾರ ಕೊಡುವ ಶ್ರೇಷ್ಠ ಕೇಂದ್ರ: ಸಿ.ಟಿ.ರವಿ

101 ಮಂದಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ(MP Renukacharya) ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ ಫಲಾನುಭವಿಗಳು 52, ಸಂಧ್ಯಾಸುರಕ್ಷಾ ಯೋಜನೆ 14, ಅಂಗವಿಕಲ ವೇತನ ಫಲಾನುಭವಿಗಳು 4, ನಿರ್ಗತಿಕ ವಿಧವಾ ವೇತನ ಫಲಾನುಭವಿಗಳು 5, ಆಧಾರ್‌ ನೋಂದಣಿ ತಿದ್ದುಪಡಿ 26 ಫಲಾನುಭವಿಗಳಿಗೆ ಸೌಲಭ್ಯ ಮಂಜೂರಾತಿಯ ಆದೇಶ ಪತ್ರಗಳ ಶಾಸಕರು ವಿತರಿಸಿದರು.

ಹೊನ್ನಾಳಿ ಆಸ್ಪತ್ರೆಯ 100ರಿಂದ 250 ಹಾಸಿಗೆಗೆ ಮೇಲ್ದರ್ಜೆಗೇರಿಸಿದ್ದು, ಕೋವಿಡ್‌ ಸಂದರ್ಭದಲ್ಲಿ ಕ್ಷೇತ್ರದ ಜನತೆಯ ಸೇವೆಯ ಜಾತ್ಯತೀತವಾಗಿ ಕೆಲಸ ಮಾಡಿದ್ದೇನೆ. ರಾಂಪುರ ಮತ್ತು ಗೋವಿನಕೋವಿ ನಡುವಿನ ಸೇತುವೆಗಾಗಿ .385 ಕೋಟಿ ಮಂಜೂರು ಮಾಡಿಸುವ ಕಾರ್ಯ ಪ್ರಗತಿಯಲ್ಲಿದೆ. ಲಿಂಗಾಪುರ ಗ್ರಾಮಕ್ಕೆ ಪದವಿ ಪೂರ್ವ ಕಾಲೇಜು, ಆಸ್ಪತ್ರೆ ಹಾಗೂ ಹಾಸ್ಟೆಲ್‌ ಮಂಜೂರು ಮಾಡಿಸಲು ಬದ್ಧ

ಎಂ.ಪಿ.ರೇಣುಕಾಚಾರ್ಯ, ಶಾಸಕ

click me!