Assembly election: ಜೆಡಿಎಸ್‌ನಲ್ಲಿ ಕಾರ್ಯಕರ್ತನೊಬ್ಬ ಸಿಎಂ ಆಗಲು ಸಾಧ್ಯವಾ?: ಸಿ.ಟಿ.ರವಿ ಪ್ರಶ್ನೆ

By Kannadaprabha News  |  First Published Feb 8, 2023, 8:44 AM IST

ಬಿಜೆಪಿ, ಓರ್ವ ಸಾಮಾನ್ಯ ಕಾರ್ಯಕರ್ತನಿಗೂ ಕೂಡ ಮುಖ್ಯಮಂತ್ರಿ ಆಗುವ ಅವಕಾಶವನ್ನು ಅವರ ಪರಿಶ್ರಮಕ್ಕೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಆಯಾ ಕಾಲಘಟ್ಟದಲ್ಲಿ ಒದಗಿಸಿ ಕೊಡುತ್ತದೆ. ಅದೇ ಸ್ಥಿತಿ ಜಾತ್ಯತೀತ ಜನತಾ ದಳದಲ್ಲಿದೆ ಇದೆಯಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.


ಚಿಕ್ಕಮಗಳೂರು (ಫೆ.8) : ಬಿಜೆಪಿ, ಓರ್ವ ಸಾಮಾನ್ಯ ಕಾರ್ಯಕರ್ತನಿಗೂ ಕೂಡ ಮುಖ್ಯಮಂತ್ರಿ ಆಗುವ ಅವಕಾಶವನ್ನು ಅವರ ಪರಿಶ್ರಮಕ್ಕೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಆಯಾ ಕಾಲಘಟ್ಟದಲ್ಲಿ ಒದಗಿಸಿ ಕೊಡುತ್ತದೆ. ಅದೇ ಸ್ಥಿತಿ ಜಾತ್ಯತೀತ ಜನತಾ ದಳದಲ್ಲಿದೆ ಇದೆಯಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಸಚಿವ ಪ್ರಹ್ಲಾದ್‌ ಜೋಷಿ ಕೂಡ ಸಾಮಾನ್ಯ ಕಾರ್ಯಕರ್ತರೆ. ಹಾಗಾಗಿ ಸಾಮಾನ್ಯ ಕಾರ್ಯಕರ್ತನಾಗಿ ಶ್ರಮಿಸಿದ ಎಲ್ಲರಿಗೂ ಪಕ್ಷ ಅವಕಾಶ ಕೊಡುತ್ತದೆ. ನಮ್ಮ ದೇಶದ ಪ್ರಧಾನಮಂತ್ರಿ ಕೂಡ ಒಂದು ಕಾಲದಲ್ಲಿ ಸಾಮಾನ್ಯ ಕಾರ್ಯಕರ್ತರು. ಇಂದೂ ಪರಿಶ್ರಮಿಸುವಂಥ ಮಾದರಿ ಕಾರ್ಯಕರ್ತ ಎಂದರು.

Latest Videos

undefined

ಎಸ್‌ಡಿಪಿ, ಪಿಎಫ್‌ಐಗೆ ಬೆಂಬಲ ಕೊಟ್ಟ ಕಾಂಗ್ರೆಸ್‌: ಸಿ.ಟಿ.​ರವಿ ಆರೋಪ

ಹಾಸನ ಜಗಳ ನೀವುಗಳು ನೋಡಿದ್ದೀರಲ್ಲವಾ? ಅವರ ದೃಷ್ಟಿಯಲ್ಲಿ ಸಾಮಾನ್ಯ ಕಾರ್ಯಕರ್ತರೆಂದರೆ ಭವಾನಿ ಅಕ್ಕನವರೆ ಸಾಮಾನ್ಯ ಕಾರ್ಯಕರ್ತರು. ನಿಖಿಲ್‌ ಕುಮಾರಸ್ವಾಮಿ, ಪ್ರಜ್ವಲ್‌ ರೇವಣ್ಣ ಅವರೇ ಸಾಮಾನ್ಯ ಕಾರ್ಯಕರ್ತರು. ಬಿಜೆಪಿಯಲ್ಲಿ ಹಾಗಲ್ಲ. ಯಾವುದೇ ಓರ್ವ ಸಾಮಾನ್ಯ ಕಾರ್ಯಕರ್ತನೂ ಯಾವ ಸ್ಥಾನಕ್ಕಾದರೂ ಏರಬಹುದು. ನಾನು ಪಕ್ಷದಲ್ಲಿ ಪೋಸ್ಟರ್‌ ಹೊಡೆದಿದ್ದೇನೆ, ಫ್ಲಾಗ್‌, ಮೈಕ್‌ ಕಟ್ಟಿದ್ದೇನೆ. ಇಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಎಚ್‌ಡಿಕೆಯಷ್ಟುನಾವು ಸಾಮರ್ಥ್ಯ ಇರುವವರಲ್ಲ: ಸಿ.ಟಿ.ರವಿ ಟಾಂಗ್‌

ಬಿಜೆಪಿಯವರು ನಪುಂಸಕರೆಂದು ಟ್ವಿಟ್‌ ಮಾಡಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟಾಂಗ್‌ ಕೊಟ್ಟಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ ಅವ​ರು, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೊ ಅದನ್ನು ಅವರಿಗೆ ಕೇಳಬೇಕು, ವೈಯಕ್ತಿಕವಾಗಿ ಹೇಳಿದ್ದರೆ ನಾವು ಅವರಷ್ಟುಸಾಮರ್ಥ್ಯ ಇರುವವರಲ್ಲ ಎಂದು ಹಿಂದೆಯೇ ಒಪ್ಪಿಕೊಂಡಿದ್ದೇವೆ. ನಮ್ಮ ಸಾಮರ್ಥ್ಯ ನಮ್ಮ ಮನೆಗಳಿಗಷ್ಟೆಸೀಮಿತ. ಆದರೆ ಅವರದ್ದು ಊರು, ಮನೆಯಿಂದ ದಾಟಿದ ಸಾಮರ್ಥ್ಯ ಎಂದು ಟೀಕಿಸಿದರು.

ಅವರು ರಾಜಕೀಯವಾಗಿ ಹೇಳಿಕೆ ನೀಡಿದ್ದರೆ ಬಿಜೆಪಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಲೇ ಬಂದಿದೆ. ಅವರಿಗೆ ಬೇಜರಾಗಬಹುದು. ಮಂಡ್ಯದಂತ ಜನತಾದಳದ ಭದ್ರಕೋಟೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನೂರಾರು ಕೋಟಿ ಖರ್ಚು ಮಾಡಿ ಎಲ್ಲ ಶ್ರಮ ಹಾಕಿ ಅವರ ಮಗನನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ. ಅದಕ್ಕೆ ಅವರೇನು ಹೇಳುತ್ತಾರೆ. ರಾಜಕೀಯ ದೃಷ್ಟಿಇಟ್ಟುಕೊಂಡು ನಪುಂಸಕ ಎನ್ನುವ ಪದ ಬಳಸಿದ್ದರೆ, ದೇವೇಗೌಡರು ನಾಡಿನ ಅತ್ಯಂತ ಹಿರಿಯ ರಾಜಕೀಯ ನಾಯಕರಲ್ಲೊಬ್ಬರು ಪ್ರಧಾನಮಂತ್ರಿ ಸ್ಥಾನಕ್ಕೆ ಏರಿದವರು. ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರನ್ನು ಇಳಿವಯಸ್ಸಿನಲ್ಲಿ ತುಮಕೂರಿನಲ್ಲಿ ನಿಲ್ಲಿಸಿ ಕಾಂಗ್ರೆಸ್‌, ಜೆಡಿಎಸ್‌ ಎರಡೂ ಪಕ್ಷ ಸೇರಿ ಗೆಲ್ಲಿಸಿಕೊಳ್ಳಲಾಗಲಿಲ್ಲ. ಅದನ್ನು ಏನಂತ ಕರೆಯಬೇಕು ಎಂದು ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದರು.

ರಾಮನಗರದಲ್ಲಿ ತ್ಯಾಗದ ನಾಟಕ ನಡೀತಿದೆ: ಜೆಡಿಎಸ್‌ ವಿರುದ್ಧ ಹರಿಹಾಯ್ದ ಸಿ.ಟಿ. ರವಿ

ಇದನ್ನು ರಾಜಕೀಯ ದೃಷ್ಟಿಯಿಂದ ಹೇಳುವುದಾದರೆ ಮಾತ್ರ ಹೇಳಿದ್ದೇನೆ. ಅವರು ವೈಯಕ್ತಿಕ ಕಾರಣಕ್ಕೆ ಹೇಳುವುದಾದರೆ ಅವರಷ್ಟುಸಾಮರ್ಥ್ಯ ಖಂಡಿತಾ ನಮಗಿಲ್ಲ ಎಂದು ಒಪ್ಪಿಕೊಂಡು ಬಿಟ್ಟಿದ್ದೇವೆ. ನಮ್ಮದು ಸೀಮಿತ ಚೌಕಟ್ಟಿನೊಳಗಿನ ಸಾಮರ್ಥ್ಯ ಅದು ಅವರ ಚೌಕಟ್ಟು ಮೀರಿದ ಸಾಮರ್ಥ್ಯ. ರಾಜಕೀಯವಾಗಿ ಹೇಳುವುದಾದರೆ 25 ಪ್ಲಸ್‌ 1 ಅಂದರೆ 26 ಸೀಟ್‌ ಗೆಲ್ಲುವ ಮೂಲಕ ಬಿಜೆಪಿ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 104, ನಂತರ ನಡೆದ ಉಪ ಚುನಾವಣೆಯಲ್ಲೂ 14 ಸ್ಥಾನ ಗೆಲ್ಲುವ ಮೂಲಕ ನಮ್ಮ ಸಾಮರ್ಥ್ಯವನ್ನು ತೋರಿಸಿದ್ದೇವೆ. ವೈಯಕ್ತಿಕವಾಗಿ ನಾವು ಶರಣು ಶರಣಾರ್ಥಿ ಎಂದರು.

click me!