ಕ್ಷೇತ್ರದಲ್ಲಿ ರಾಜಕೀಯ ವಾಸ್ತವಿಕತೆ ಮಾಹಿತಿ ಪಡೆದು ಎಐಸಿಸಿಗೆ ವರದಿ ಸಲ್ಲಿಸುವೆ, ಟಿಕೆಟ್ ಯಾರಿಗಾದರೂ ಸಿಗಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಶ್ರಮಿಸಿ ಎಂದು ಎಐಸಿಸಿ ಜಿಲ್ಲಾ ವೀಕ್ಷಕಿ ಪ್ರಣತಿ ಶಿಂಧೆ ಸೂಚಿಸಿದರು.
ಜಗಳೂರು (ಫೆ.8) : ಕ್ಷೇತ್ರದಲ್ಲಿ ರಾಜಕೀಯ ವಾಸ್ತವಿಕತೆ ಮಾಹಿತಿ ಪಡೆದು ಎಐಸಿಸಿಗೆ ವರದಿ ಸಲ್ಲಿಸುವೆ, ಟಿಕೆಟ್ ಯಾರಿಗಾದರೂ ಸಿಗಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಶ್ರಮಿಸಿ ಎಂದು ಎಐಸಿಸಿ ಜಿಲ್ಲಾ ವೀಕ್ಷಕಿ ಪ್ರಣತಿ ಶಿಂಧೆ ಸೂಚಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಕಣ್ಣಿನಲ್ಲಿ ಎಣ್ಣೆ ಬಿಟ್ಟು ತಳಮಟ್ಟದಿಂದ ಒಗ್ಗಟ್ಟು ಪ್ರದರ್ಶಿಸಬೇಕಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಲಹೆಗಳ ಸ್ವೀಕರಿಸಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರೋಣ. ದೇಶದಲ್ಲಿ ಪ್ರಧಾನಿ ಮೋದಿ ಅವರ ಆಡಳಿತ ಅಂಬಾನಿ,ಅದಾನಿ ಪರವಾಗಿರುವ ಬಿಜೆಪಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕಿದೆ ಎಂದು ಕಾರ್ಯಕರ್ತರಿಗೆ ಹೇಳದರು.
ಸಿದ್ದರಾಮಯ್ಯ ಸಾಧನೆಯಿಂದಲೇ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಜಿಲ್ಲೆಯ ವಿಧಾನ ಕ್ಷೇತ್ರಗಳಲ್ಲಿನ ಕಾಂಗ್ರೆಸ್ ಪಕ್ಷ ಸಂಘಟನೆ ವರದಿಯ ಎಐಸಿಸಿಗೆ ಸಲ್ಲಿಸುವ ಹಿನ್ನೆಲೆ ವೀಕ್ಷಕರು ಆಗಮಿಸಿದ್ದು ಕಾರ್ಯಕರ್ತರು ಕಾಂಗ್ರೆಸ್ ಗೆಲುವಿನ ಸಂಕಲ್ಪ ಮಾಡಬೇಕು ಎಂದರು.
ಕ್ಷೇತ್ರದ ಉಸ್ತುವಾರಿ ಕಲ್ಲೇಶ್‌ರಾಜ್ ಪಟೇಲ್ ಮಾತನಾಡಿ, ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆಯ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 136 ದಿನಗಳ ಕಾಲ ನಿರಂತರ 4,080 ಕಿ.ಮೀ ಸಂಚರಿಸಿ ಯಶಸ್ವಿಗೊಳಿಸಲಾಯಿತು. ಪಾದಯಾತ್ರೆಯಲ್ಲಿ ನಾನೂ ಜಿಲ್ಲೆಯಿಂದ ಪ್ರತಿನಿಧಿಸಿದ್ದು ಹರ್ಷ ತಂದಿದೆ ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾರಥ್ಯದಲ್ಲಿ ಪ್ರಜಾಧ್ವನಿ ಕಾರ್ಯಕ್ರಮದ ಮೂಲಕ ಕಾರ್ಯಕರ್ತರ ಒಗ್ಗೂಡಿಸುವ ಕೆಲಸ ನಡೆಯುತ್ತಿದೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಬಲವರ್ಧನೆಗೊಳಿಸೋಣ ಎಂದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಮಾಣ ವಚನ ಮಂಡಿಸಿದರು. ಇದೇ ವೇಳೆ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಭಾಗಹಿಸಿ ತವರಿಗೆ ಮರಳಿದ ಕ್ಷೇತ್ರ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್‌ರಿಗೆ ವಿವಿಧ ಘಟಕಗಳ ಪದಾಧಿಕಾರಿಗಳು ಸನ್ಮಾನಿಸಿದರು.
ಮಾಜಿ ಸಚಿವ ಹಾಗೂ ಕ್ಷೇತ್ರ ಉಸ್ತುವಾರಿ ಶಿವಮೂರ್ತಿ ನಾಯ್ಕ, ಕೆಪಿಸಿಸಿ ಎಸ್‌ಟಿ ಘಟಕದ ಕೆ.ಪಿ.ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಶೀರ್ ಅಹಮ್ಮದ್, ಎಸ್.ಮಂಜುನಾಥ್, ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ, ಪಲ್ಲಾಗಟ್ಟೆಶೇಖರಪ್ಪ, ಮಹಿಳಾ ಘಟಕದ ಕೆಂಚಮ್ಮ ಧನ್ಯಕುಮಾರ್, ನಾಗರತ್ನಮ್ಮ, ಸಾವಿತ್ರಮ್ಮ, ಮುಖಂಡರಾದ ಯರಬಳ್ಳಿ ಉಮಾಪತಿ, ಯು.ಜಿ.ಶಿವಕುಮಾರ್, ಸಿ.ತಿಪ್ಪೇಸ್ವಾಮಿ, ಶಂಭುಲಿಂಗಪ್ಪ, ತುಪ್ಪದಹಳ್ಳಿ ಹನುಮಂತಪ್ಪ, ಎಸ್.ಕೆ.ರಾಮರೆಡ್ಡಿ ಸೇರಿ ಮುಖಂಡರಿದ್ದರು.
ಆಕಾಂಕ್ಷಿತರಿಂದ ಪಕ್ಷ ಸಂಘಟನೆ ಮಾಹಿತಿ ಪಡೆದ ಪ್ರಣತಿ
ಪಟ್ಟಣದಲ್ಲಿ ಎಐಸಿಸಿ ಜಿಲ್ಲಾ ವೀಕ್ಷಕಿ ಪ್ರಣತಿ ಶಿಂಧೆ ಮಂಗಳವಾರ ಭೇಟಿ ನೀಡಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರ ಮತ್ತು ಪಕ್ಷದ ಮುಖಂಡರ ಸಭೆಯ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆಸಿದರು.
ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಪಕ್ಷದ ಬಲವರ್ಧನೆ ಬಗ್ಗೆ ಮಾಹಿತಿ ಪಡೆದರು ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲ್ಲಿಸಬೇಕು ಮತ್ತು ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು. ಈಗಾಗಲೇ ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿ ಬಸವರಾಜ್ ಶಿವಗಂಗಾ, ಹೊದಿಗೆರೆ ರಮೇಶ್, ವಡ್ನಾಳ್ ಜಗದೀಶ್, ವಡ್ನಾಳ್ ಅಶೋಕ್, ತೇಜಸ್ವಿ ಪಟೇಲ್, ಪುನೀತ್, ನಿರಂಜನ್, ಲಿಂಗರಾಜ್‌ರನ್ನು ಪ್ರತ್ಯೇಕವಾಗಿ ಮಾತನಾಡಿ ಪಕ್ಷದ ಸಂಘಟನೆ ಮತ್ತು ಚುನಾವಣೆ ಕುರಿತು ಮಾಹಿತಿ ಪಡೆದರು.
'ಬಿಜೆಪಿ ಸರ್ಕಾರ ಹಗಲು ದರೋಡೆ ಮಾಡ್ತಿದೆ, 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಖಚಿತ'
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಚ್.ಶ್ರೀನಿವಾಸ್, ಸಂತೆಬೆನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಜಬೀಉಲ್ಲಾ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸಿ.ನಾಗರಾಜ್, ಅಮಾನುಲ್ಲಾ, ಬಸವಲಿಂಗಪ್ಪಗೌಡ, ಕೆಪಿಸಿಸಿ ಸದಸ್ಯ ವಡ್ನಾಳ್ ಜಗದೀಶ್, ವೀರೇಶ್ ನಾಯ್‌್ಕ, ದೋಣಿಹಳ್ಳಿ ಸುನೀಲ್ ಸೇರಿ ಪಕ್ಷದ ಕಾರ್ಯಕರ್ತರಿದ್ದರು. ಸಭೆ ಮುಕ್ತಾಯ ಬಳಿಕ ಕ್ಷೇತ್ರದ ಮಾಜಿ ಶಾಸಕ ವಡ್ನಾಳ್ ರಾಜಣ್ಣನ ಪರವಾಗಿ ಜೈ ಕಾರಗಳ ಕಾರ್ಯಕರ್ತರು ಕೂಗಿದರು.