Karnataka Politics: 'ಬಿಜೆಪಿಯಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ತಾಂಡವ'

By Kannadaprabha News  |  First Published Jan 2, 2022, 10:46 AM IST

*  ಬೆಲೆ ಏರಿಕೆಯಿಂದ ತತ್ತರಿಸಿದ ದೇಶದ ಜನತೆ
*  ಜಿಎಸ್ಟಿ ಸುಂಕ ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆಯತ್ತಿರುವ ಕೇಂದ್ರ ಸರ್ಕಾರ
*  ರಾಜ್ಯ ಸರಕಾರ ಎಲ್ಲ ರಂಗದಲ್ಲೂ ವಿಫಲ
 


ಶಿಗ್ಗಾಂವಿ(ಜ.02): ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಸಂಸ್ಕೃತಿ ಇಲ್ಲದ ಬಿಜೆಪಿಯಲ್ಲಿ(BJP) ಸ್ವಜನ ಪಕ್ಷಪಾತ, ಭ್ರಷ್ಟಾಚಾರ(Corruption) ತಾಂಡವಾಡುತ್ತಿದೆ. ಸುಳ್ಳು ಭರವಸೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದೆ. ಇದಕ್ಕೆ ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶವೇ ಸಾಕ್ಷಿ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ(Somanna Bevinamarad) ಆರೋಪಿಸಿದರು.

ತಾಲೂಕಿನ ಬಂಕಾಪುರ ಕಾಂಗ್ರೆಸ್‌(Congress) ಕಚೇರಿಯಲ್ಲಿ ಪುರಸಭೆಗೆ ಚುನಾಯಿತರಾದ ಪಕ್ಷದ ನೂತನ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿದೇಶದಲ್ಲಿನ ಕಪ್ಪು ಹಣವು(Black Money) ತರಲಿಲ್ಲ. ಉದ್ಯೋಗ ನೀಡುವುದಾಗಿ ತಿಳಿಸಿ ಇದ್ದವರ ಉದ್ಯೋಗ(Job) ಕಳೆದು ನಿರುದ್ಯೋಗಿಯನ್ನಾಗಿ ಮಾಡಿದ ಕೀರ್ತಿ ಕೇಂದ್ರ ಸರಕಾರಕ್ಕೆ ಸಲ್ಲುತ್ತದೆ. ಬೆಲೆ ಏರಿಕೆಯಿಂದ ತತ್ತರಿಸಿದ ದೇಶದ ಜನರ ಮೇಲೆ ಈಗ ಜಿಎಸ್ಟಿ(GST) ಸುಂಕ ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆಯತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

Karnataka Politics: ಅಧಿಕಾರದ ಗದ್ದುಗೆಗೆ ಬಿಜೆಪಿ-ಕಾಂಗ್ರೆಸ್‌ ಫೈಟ್‌

ಈ ಹಿಂದೆ ಸಿದ್ದರಾಮಯ್ಯನವರ(Siddaramaiah) ನೇತೃತ್ವದ ಸರಕಾರಕ್ಕೆ ಆಧಾರ ರಹಿತ ಶೇ.10 ಪರ್ಸೆಟೇಂಜ್ ಆರೋಪಗೈದ ಮೋದಿ(Narendra Modi) ಅವರೆ, ಈಗ ನಿಮ್ದೇ ಸರಕಾರದಲ್ಲಿ ಶೇ. 40 ಪರ್ಸೆಟೇಂಜ್‌ ವ್ಯವಹಾರಗಳು ನಡೆಯತ್ತಿದೆ. ಈಗೇನು ಹೇಳುತ್ತಿರಿ ಎಂದು ಪ್ರಶ್ನಿಸಿದ ಬೇವಿನಮರದ, ಕೋವಿಡ್‌ನಲ್ಲಿ ಮೃತರಿಗೆ ಅಟಕ್ಕುಂಟು, ಲೆಕ್ಕಕ್ಕಿಲ್ಲವೆಂಬಂತೆ ಪರಿಹಾರ ಕೊಟ್ಟು ಕೈತೊಳೆದುಕೊಂಡ ರಾಜ್ಯ ಸರಕಾರ ಎಲ್ಲ ರಂಗದಲ್ಲಿ ವಿಫಲವಾಗಿದೆ. ಇದಕ್ಕೆ ಬೇಸತ್ತು ಮತದಾರ ಕಾಂಗ್ರೆಸ್‌ ಬೆಂಬಲಿಸಿದ್ದಾರೆ ಎಂದರು.

ಅಧ್ಯಕ್ಷ ಎಂ.ಎನ್. ವೆಂಕೋಜಿ ಮಾತನಾಡಿ, ರಾಜಕೀಯ(Politics) ಸ್ಥಾನ ನೀಡಿದ ಮತದಾರರನ್ನು ಮರೆಯಬೇಡಿ. ಅವರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಿ. ನಿಮ್ಮನ್ನು ಗುರುತಿಸಿ ನಿಮಗೆ ಟಿಕೆಟ್ನೀಡಿದ ಪಕ್ಷ ಅಪ್ಪಿಕೊಂಡು ಮುನ್ನಡಿಯಿರಿ ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಪುರಸಭೆ ನೂತನ 14 ಜನ ಕಾಂಗ್ರೆಸ್ಸದಸ್ಯರನ್ನು ಸನ್ಮಾನಿಸಿದರು.

ಕೆಪಿಸಿಸಿ ಸದಸ್ಯ ಎಸ್.ಎಸ್. ಶಿವಳ್ಳಿ, ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಪ್ರಕಾಶ ಹಾದಿಮನಿ, ಗುರುನಗೌಡ್ರ ಪಾಟೀಲ, ಗುಡ್ಡಪ್ಪ ಜಲದಿ, ಶಿವಾನಂದ ಬಾಗೂರು, ಈಸೂಫಸಾಬ ಭಾವಿಕಟ್ಟಿ, ಅಂಗಡಿ, ಮಹ್ಮದಗೌಸ್ಗುಲ್ಮಿ, ಸತೀಶ ಆಲದಕಟ್ಟಿ, ರಾಜೇಶ ಕಮ್ಮಾರ, ಬೀರಪ್ಪ ಸಣ್ಣತಮ್ಮನವರ ಸೇರಿದಂತೆ ಕಾರ್ಯಕರ್ತ, ಮುಖಂಡರುಗಳು ಉಪಸ್ಥಿತರಿದ್ದರು.

Anti Conversion Bill: ಮತಾಂತರ ನಿಷೇಧ ಕಾಯ್ದೆ ಜಾರಿಯಾದ್ರೆ ಕೋರ್ಟ್‌ ಮೊರೆ: ತಾಹೇರ್‌ ಹುಸೇನ್‌

ಕಾಂಗ್ರೆಸ್‌ ಸೇರಿ ನೋವು ಪಡಬೇಡಿ: ಶಾಸಕ ದಢೇಸುಗೂರು

ಕನಕಗಿರಿ: ಕಾಂಗ್ರೆಸ್(Congress) ಸೇರಿ ನೋವು ಅನುಭವಿಸುವುದಕ್ಕಿಂತ ಬಿಜೆಪಿಯಲ್ಲಿದ್ದುಕೊಂಡು ರಾಜ್ಯ, ದೇಶ ಕಟ್ಟಿ ಬೆಳೆಸಬೇಕು ಎಂದು ಶಾಸಕ ಬಸವರಾಜ ದಢೇಸುಗೂರು(Basavaraj Dadesugur) ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.  ಪಟ್ಟಣ ಪಂಚಾಯಿತಿ ಚುನಾವಣೆ(Town Panchayat Election) ಹಿನ್ನೆಲೆಯಲ್ಲಿ ಬಿಜೆಪಿ(BJP) ಮಂಡಲ ವತಿಯಿಂದ ಡಿ.24ರಂದು ಏರ್ಪಡಿಸಿದ್ದ ಪ್ರಚಾರ(Campaign) ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಮ್ಮ ಕ್ಷೇತ್ರವಲ್ಲದೆ ಬೇರೆಡೆ ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಹೋದವರು ಇದೀಗ ನೋವು ಅನುಭವಿಸುತ್ತಿದ್ದಾರೆ. ಅಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ. ಬಿಜೆಪಿ ಕಾರ್ಯಕರ್ತರ ಪಕ್ಷವಾದರೆ, ಕಾಂಗ್ರೆಸ್ನಾಯಕರ ಪಕ್ಷವಾಗಿದೆ ಎಂದು ಹೇಳಿದ್ದರು. 

ವಿವಿಧ ವಾರ್ಡ್ಗಳಿಗೆ ತೆರಳಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ವೇಳೆ ಮತದಾರರು(Voters) ಆಶ್ರಯ ಮನೆ, ಸಿಸಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳು ಕುರಿತು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಸೌಕರ್ಯ ಕಲ್ಪಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಪಟ್ಟಣ ಪಂಚಾಯಿತಿಯಿಂದ ಅಲ್ಪಸಂಖ್ಯಾತರಿಗೆ(Minorities) 300 ಆಶ್ರಯ ಮನೆ ಮಂಜೂರಾಗಿವೆ. ಫಲಾನುಭವಿಗಳನ್ನು ಗುರುತಿಸಿ ಮಂಜೂರಾತಿ ಆದೇಶಿಸಲಾಗುವುದು. ಆದ್ದರಿಂದ ಫಲಾನುಭವಿಗಳು(Beneficiaries) ಚುನಾವಣೆ(Election) ನಂತರ ಅರ್ಜಿ ಸಲ್ಲಿಸುವಂತೆ ಶಾಸಕರು ಮನವಿ ಮಾಡಿದ್ದರು. 
 

click me!