Mekedatu Politics: ಸುಳ್ಳಿಗೂ ಆಸ್ಕರ್‌ ಪ್ರಶಸ್ತಿ ಬರ್ತಿದ್ರೆ ಅದು ಪ್ರಧಾನಿ ಮೋದಿಗೆ ಕೊಡಬೇಕು: ಸಲೀಂ ಅಹ್ಮದ್‌

Kannadaprabha News   | Asianet News
Published : Jan 02, 2022, 07:44 AM IST
Mekedatu Politics: ಸುಳ್ಳಿಗೂ ಆಸ್ಕರ್‌ ಪ್ರಶಸ್ತಿ ಬರ್ತಿದ್ರೆ ಅದು ಪ್ರಧಾನಿ ಮೋದಿಗೆ ಕೊಡಬೇಕು: ಸಲೀಂ ಅಹ್ಮದ್‌

ಸಾರಾಂಶ

*  ಮೇಕೆದಾಟು ಪಾದಯಾತ್ರೆ: ಪಕ್ಷಾತೀತ ಬೆಂಬಲ *  ಬುದ್ಧಿಮಾಂದ್ಯ ಮಕ್ಕಳೊಂದಿಗೆ ಸಲೀಂ ಜನ್ಮದಿನ *  ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದೇ ಆಪರೇಷನ್‌ ಕಮಲದ ಮೂಲಕ 

ಹುಬ್ಬಳ್ಳಿ(ಜ.02): ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಡೆಯಲಿರುವ ಪಾದಯಾತ್ರೆಗೆ ಸಾಹಿತಿಗಳು, ಚಲನಚಿತ್ರ ಕಲಾವಿದರೂ ಭಾಗಿಯಾಗುವಂತೆ ಕೇಳಿಕೊಳ್ಳಲಾಗಿದೆ. ಉತ್ತಮ ಸ್ಪಂದನೆ ಸಿಗುವ ವಿಶ್ವಾಸವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌(Saleem Ahmed) ಹೇಳಿದರು.

ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ(Mekedatu to Bengaluru Padayatra) ನಡೆಸಲಿದ್ದೇವೆ. ಪಕ್ಷಾತೀತವಾಗಿ ಬೆಂಬಲ ದೊರೆಯಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ(Central Government) ಕೂಡಲೇ ಅನುಮತಿಯನ್ನು ನೀಡಬೇಕು ಎಂದು ಆಗ್ರಹಿಸಿದ ಅವರು, ಪಾದಯಾತ್ರೆಗೆ ಸಂಬಂಧಪಟ್ಟಂತೆ ಬಿಜೆಪಿ(BJP) ಮುಖಂಡ ಸಿ.ಟಿ.ರವಿ(CT Ravi) ಬಾಲೀಶತನದ ಹೇಳಿಕೆ ನೀಡುತ್ತಿದ್ದಾರೆ. ಇದು ಖಂಡನೀಯ ಎಂದರು.

Mekedatu Politics: ಡಿ.ಕೆ.ಶಿವಕುಮಾರ್‌ ಫೋಟೋ ಶೂಟ್ ಬಗ್ಗೆ ವ್ಯಂಗ್ಯವಾಡಿದ ಶ್ರೀರಾಮುಲು

ಸಿ.ಟಿ. ರವಿ ಅವರದು ಪ್ರತಿಯೊಬ್ಬರ ಬಗ್ಗೆಯೂ ಬರೀ ಟೀಕೆ ಮಾಡುವುದೇ ಆಗಿದೆ. ನೆಹರು, ಇಂದಿರಾಗಾಂಧಿ, ರಾಜೀವಗಾಂಧಿ ಅವರ ವಿರುದ್ಧವೂ ಟೀಕೆ ಮಾಡುತ್ತಾರೆ. ಇದು ಬಿಜೆಪಿಗೆ ಶೋಭೆ ತರುವಂತಹದ್ದಲ್ಲ ಎಂದು ನುಡಿದರು.
ಬಿಜೆಪಿಯ ದುರಾಡಳಿತ, ಆಡಳಿತ ವೈಫಲ್ಯದಿಂದ ಜನತೆ ರೋಸಿ ಹೋಗಿದ್ದಾರೆ. ಹೀಗಾಗಿ ಜನತೆ ಕಾಂಗ್ರೆಸ್‌ನತ್ತ(Congress) ಒಲವು ತೋರುತ್ತಿದ್ದಾರೆ. ಇದಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯೇ ಸಾಕ್ಷಿ ಎಂದ ಅವರು, ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 11 ಸೀಟು ಗೆದ್ದಿದ್ದು, ಮತ್ತೆರಡರಲ್ಲಿ ಕಡಿಮೆ ಅಂತರದಿಂದ ಸೋಲು ಕಂಡಿದೆ. ಸರಾಸರಿ ಮತದಾನ ಗಮನಿಸಿದರೆ ಕಾಂಗ್ರೆಸ್‌ ಶೇ.48, ಬಿಜೆಪಿ ಶೇ.41ರಷ್ಟು ಮತಗಳನ್ನು ಪಡೆದಿದೆ. ಇನ್ನು ಮೊನ್ನೆ ನಡೆದ ನಗರಸಭೆ, ಪುರಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳು ಹೆಚ್ಚು ಸೀಟುಗಳಲ್ಲಿ ಗೆಲವು ಕಂಡಿದ್ದಾರೆ. ಇದರಲ್ಲೂ ಕಾಂಗ್ರೆಸ್‌ ಪಕ್ಷ ಶೇ.42.19 ಮತ ಪಡೆದರೆ, ಬಿಜೆಪಿ ಶೇ.36.68ರಷ್ಟುಪಡೆದಿದೆ. ಈ ಅಂಕಿ ಅಂಶಗಳಿಂದ ಜನರು ಬಿಜೆಪಿಯ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.

ಸುಳ್ಳಿಗೂ ಆಸ್ಕರ್‌ ಪ್ರಶಸ್ತಿ ಬರುತ್ತಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಕೊಡಬೇಕು. ಅಷ್ಟೊಂದು ಸುಳ್ಳು ಹೇಳುತ್ತಾರೆ ಅವರು. ಸುಳ್ಳಿನ ಸರದಾರ ಎಂದು ನುಡಿದರು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದೇ ಆಪರೇಷನ್‌ ಕಮಲದ ಮೂಲಕ, ಕಳೆದ ಮೂರುವರೆ ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಈ ಹಿನ್ನೆಲೆಯಲ್ಲಿ ಜನರು ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಕೇಡರ್‌ ಬೇಸ್‌:

ಕಾಂಗ್ರೆಸ್‌ನ್ನು ಮಾಸ್‌ ಬೇಸ್‌ನಿಂದ ಕೇಡರ್‌ ಬೇಸ್‌ ಪಕ್ಷವನ್ನಾಗಿ ಸಂಘಟಿಸಲಾಗುತ್ತಿದೆ. ಘಟಪ್ರಭಾದಲ್ಲಿ ಜಿಲ್ಲಾವಾರು, ವಿಧಾನಸಭಾ ಕ್ಷೇತ್ರವಾರು ಕಾರ್ಯಕರ್ತರು, ಮುಖಂಡರಿಗೆ ತರಬೇತಿ ನೀಡಲಾಗುವುದು. ಸದ್ಯ ಸದಸ್ಯತ್ವ ಅಭಿಯಾನ ಶುರುವಾಗಿದೆ. 50 ಲಕ್ಷ ಸದಸ್ಯತ್ವ ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದೇವೆ. ಬೂತ್‌ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಾಗುವುದು ಎಂದ ಅವರು, ಮುಂಬರುವ ಜಿಪಂ, ತಾಪಂ ಚುನಾವಣೆಗಳಲ್ಲೂ ಕಾಂಗ್ರೆಸ್‌ ಪಕ್ಷ ಉತ್ತಮ ಸಾಧನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Mekedatu Politics: ಹೋಂ ಮಿನಿಸ್ಟರ್‌ಗೆ ಅನುಭವ ಇಲ್ಲವೆಂದ ಡಿ.ಕೆ.ಶಿವಕುಮಾರ್‌

ಸುದ್ದಿಗೋಷ್ಠಿಯಲ್ಲಿ ಉಭಯ ಜಿಲ್ಲಾ ಅಧ್ಯಕ್ಷರಾದ ಅನಿಲಕುಮಾರ ಪಾಟೀಲ್‌, ಅಲ್ತಾಫ ಹಳ್ಳೂರ, ಮಾಜಿ ಶಾಸಕರಾದ ಎನ್‌.ಎಚ್‌.ಕೊನರೆಡ್ಡಿ, ಎಂ.ಎಸ್‌.ಅಕ್ಕಿ, ಮುಖಂಡರಾದ ಸದಾನಂದ ಡಂಗನವರ, ರಾಜಶೇಖರ ಮೆಣಸಿನಕಾಯಿ, ಇಮ್ರಾನ್‌ ಎಲಿಗಾರ, ಶಾಜಾನ ಮುಜಾಹೀದ್‌ ಸೇರಿದಂತೆ ಅನೇಕರಿದ್ದರು.!

ಬುದ್ಧಿಮಾಂದ್ಯ ಮಕ್ಕಳೊಂದಿಗೆ ಸಲೀಂ ಜನ್ಮದಿನ

ಗೋಪನಕೊಪ್ಪದಲ್ಲಿರುವ ಮನೋವಿಕಾಸ ನಿರಾಶ್ರಿತರ ಕೇಂದ್ರದ ಅಂಗವಿಕಲ ಮಕ್ಕಳೊಂದಿಗೆ ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ತಮ್ಮ ಜನ್ಮದಿನವನ್ನು ಶನಿವಾರ ಆಚರಿಸಿಕೊಂಡರು.

ಇದಕ್ಕೂ ಮುನ್ನ ಪತೇಶಾವಲಿ ದರ್ಗಾ ಹಾಗೂ ಮೂರುಸಾವಿರ ಮಠಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು. ಮೂರುಸಾವಿರ ಮಠದಲ್ಲಿ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಸಲೀಂ ಅವರನ್ನು ಸನ್ಮಾನಿಸಿದರು.
ಈ ವೇಳೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ವಿಧಾನ ಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ, ಮಾಜಿ ಶಾಸಕ ಎನ್‌.ಎಚ್‌.ಕೋನರಡ್ಡಿ, ಕಾಂಗ್ರೆಸ್‌ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರು, ಗ್ರಾಮೀಣ ಅಧ್ಯಕ್ಷ ಅನೀಲಕುಮಾರ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ
ಸಾರಿಗೆ ಇಲಾಖೆಗೆ ನಕಲಿ ವ್ಯಾಸಂಗ ಪತ್ರ ದಾಖಲೆ ನೀಡಿದರೆ ತನಿಖೆ: ಸಚಿವ ರಾಮಲಿಂಗಾರೆಡ್ಡಿ