Pancharatna Rathayatra: ರೈತರ ಸಂಕಷ್ಟಕ್ಕೆ ರಾಷ್ಟ್ರೀಯ ಪಕ್ಷಗಳು ಸ್ಪಂದಿಸಲ್ಲ: ಸಂಸದ ಪ್ರಜ್ವಲ್‌ ರೇವಣ್ಣ

By Sathish Kumar KHFirst Published Nov 24, 2022, 5:26 PM IST
Highlights

ರಾಜ್ಯದಲ್ಲಿ ಈ ಹಿಂದೆ ರೈತರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಯಾವುದೇ ರಾಷ್ಟ್ರೀಯ ಪಕ್ಷಗಳು ಬರಲಿಲ್ಲ. ಆಗ ಕುಮಾರಣ್ಣ ಮಾತ್ರ ನೆರವಿಗೆ ಬಂದಿದ್ದು, ಎಲ್ಲ ರೈತರ ತಲಾ 50 ಸಾವಿರ ರೂ. ಸಾಲ ಮನ್ನಾ ಮಾಡುವ ಮೂಲಕ ರೈತರ ಕಷ್ಟಕ್ಕೆ ಹೆಗಲು ಕೊಟ್ಟಿದ್ದಾರೆ. ರೈತರ ಎಲ್ಲ ಸಮಸ್ಯೆ ಮತ್ತು ಸವಾಲುಗಳ ಪರಿಹಾರಕ್ಕೆ ಜೆಡಿಎಸ್‌ ಅಧಿಕಾರಕ್ಕೆ ತರಬೇಕು ಎಂದು ಸಂಸದ ಪ್ರಜ್ವಲ್‌ ರೇವಣ್ಣ ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ (ನ.24): ರಾಜ್ಯದಲ್ಲಿ ಈ ಹಿಂದೆ ರೈತರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಯಾವುದೇ ರಾಷ್ಟ್ರೀಯ ಪಕ್ಷಗಳು ಬರಲಿಲ್ಲ. ಆಗ ಕುಮಾರಣ್ಣ ಮಾತ್ರ ನೆರವಿಗೆ ಬಂದಿದ್ದು, ಎಲ್ಲ ರೈತರ ತಲಾ 50 ಸಾವಿರ ರೂ. ಸಾಲ ಮನ್ನಾ ಮಾಡುವ ಮೂಲಕ ರೈತರ ಕಷ್ಟಕ್ಕೆ ಹೆಗಲು ಕೊಟ್ಟಿದ್ದಾರೆ. ರೈತರ ಎಲ್ಲ ಸಮಸ್ಯೆ ಮತ್ತು ಸವಾಲುಗಳ ಪರಿಹಾರಕ್ಕೆ ಜೆಡಿಎಸ್‌ ಅಧಿಕಾರಕ್ಕೆ ತರಬೇಕು ಎಂದು ಸಂಸದ ಪ್ರಜ್ವಲ್‌ ರೇವಣ್ಣ ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಜ್ವಲ್‌ ರೇವಣ್ಣ, ರೈತರ ಸಹಾಯಕ್ಕೆ ಯಾವುದೇ ರಾಷ್ಟ್ರೀಯ ಪಕ್ಷಗಳು ನೆರವಿಗೆ ಬರುವುದಿಲ್ಲ. ಪ್ರಾದೇಶಿಕ ಪಕ್ಷ ಜೆಡಿಎಸ್‌ ಮಾತ್ರವೇ ರೈತರ ಎಲ್ಲ ಸಮಸ್ಯೆಗಳನ್ನು ಪರಿಹರಸಲು ಮುಂದೆ ಬರುತ್ತದೆ. ಈ ಹಿಂದೆ ರೈತರ ಆತ್ಮಹತ್ಯೆ ತಡೆಗಟ್ಟುವ ಹಿನ್ನೆಲೆಯಲ್ಲಿ ತಲಾ ೫೦ ಸಾವಿರ ರೂ. ಸಾಲ ಮನ್ನಾ ಮಾಡಿ ಸಾಂತ್ವನ ಹೇಳಿದ್ದರು. ಕೇವಲ 14 ತಿಂಗಳು ಅಧಿಕಾರದಲ್ಲಿ ಇದ್ದರೂ ರೈತರ 23 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸಿದ್ದೇವೆ, ಮತ್ತೊಮ್ಮೆ ಜೆಡಿಎಸ್‌ ಅಧಿಕಾರಕ್ಕೆ ತಂದೇ ತರ್ತೀವಿ ಎಂಬ ಸಂಕಲ್ಪ ಮಾಡಿದ್ದೇವೆ. ಇದಕ್ಕೆ ನೀವೆಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Pancharatna Rathayatra: ಎರಡೂ ರಾಷ್ಟ್ರೀಯ ಪಕ್ಷಗಳನ್ನು ಕಿತ್ತೊಗೆಯಿರಿ: ಎಚ್ಡಿಕೆ ವಾಗ್ದಾಳಿ

ಜನರಿಗೆ ಕೊಳಚೆ ನೀರು ಕೊಡಲಾಗಿದೆ: ಈ ಭಾಗದ ಜನರಿಗೆ ಕುಡಿಯುವ ನೀರು ಕೊಡ್ತೀನಿ ಅಂತ ಹೇಳಿದ ಸರ್ಕಾರ ಕೊಳಚೆ ನೀರು ಕೊಡಲಾಗಿದೆ. ಇದರಿಂದ ಜಗತ್ತಿಗೆ ಹೆಚ್ಚಾಗಿ ಕೆಂಪು ಟೊಮ್ಯಾಟೊ ಸರಬರಾಜು ಮಾಡುತ್ತಿರುವ ಕೋಲಾರದಲ್ಲಿಯೇ ಈಗ ಟೊಮ್ಯಾಟೊ ಬಣ್ಣ ಬದಲಾಗುತ್ತಿದೆ. ಈ ಭಾಗ ಒಂದು ಸಿಲ್ಕ್, ಮತ್ತೊಂದು ಮಿಲ್ಕ್ ಎರಡಕ್ಕೇ ಫೇಮಸ್ ಆಗಿದೆ. ಕುಮಾರಣ್ಣ ಅವರು ಯುವಕರಿಗೆ, ರೈತರಿಗೆ ಸಹಾಯ ಆಗಬೇಕು ಅಂತ ಮಾಡಿದ್ದರೂ, ಸರ್ಕಾರ ನಡೆಸಲು ಬಿಡಲೇ ಇಲ್ಲ. ರಾಜ್ಯದಲ್ಲಿ ಪ್ರಗತಿಪರ ರೈತರಿದ್ದರೆ ಅದು ಶಿಡ್ಲಘಟ್ಟ ಅಂದರೆ ತಪ್ಪಾಗುವುದಿಲ್ಲ.  ಕೆಲವರು ಒಮ್ಮೆ ಚುನಾವಣೆಯಲ್ಲಿ ಸೋತರೆ ಮುಂದಿನ ಚುನಾವಣೆವರೆಗೂ ಕ್ಷೇತ್ರದತ್ತ ಮುಖ ಮಾಡುವುದಿಲ್ಲ. ಆದರೆ, ರವಿಕುಮಾರ್ ಹಾಗೆ ಮಾಡದೆ ಚೆನ್ನಮ್ಮ ಟ್ರಸ್ಟ್ ಮಾಡಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸ್ವಾಭಿಮಾನಿ ರವಿಕುಮಾರ್‍‌ ಅವರನ್ನು ಗೆಲ್ಲಿಸಿ ಕುಮಾರಣ್ಣನ ಕೈ ಬಲಪಡಿಸಬೇಕು ಎಂದು ಹೇಳಿದರು.

Pancharatna Rathayatra: ಕೋಲಾರಕ್ಕೆ ಯಾರೇ ಬಂದ್ರೂ ನಮ್ಮ ಅಭ್ಯರ್ಥಿ ಬದಲಿಲ್ಲ: ಎಚ್‌ಡಿಕೆ

ಕಾಂಗ್ರೆಸ್‌, ಬಿಜೆಪಿಗೆ ಗುರಿ ಇಲ್ಲ: ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಯಾರೂ ಕೂಡ ಗುರಿ ಇಟ್ಟು ಕೊಂಡಿಲ್ಲ. ಕುಮಾರಣ್ಣ ಮಾತ್ರ ನಾನು ಅಧಿಕಾರಕ್ಕೆ ಬಂದ್ರೆ ಈ ಕೆಲಸ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಇಂದು ಪಂಚರತ್ನ ಎಲ್ಲಾ ಸಾರ್ವಜನಿಕರಿಗೆ ಅನುಕೂಲ ಆಗುವ ಕೆಲಸ ಮಾಡಲಾಗುತ್ತಿದೆ. 2023ಕ್ಕೆ ಕುಮಾರಣ್ಣನಿಗೆ ಶಕ್ತಿ ತುಂಬಿ ಮುಖ್ಯಮಂತ್ರಿ ಆಗಿ ಮಾಡಿ. ಆಗ ಆಡಳಿತವನ್ನು ಹೇಗೆ ಮಾಡಬೇಕು ಎನ್ನುವುದನ್ನು ಕುಮಾರಣ್ಣ ತೋರಿಸಿಕೊಡುತ್ತಾರೆ. ಯುವಕರು ನಮಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
 

click me!