ಮೋದಿಯವರ ಆಡ​ಳಿತ ಮೆಚ್ಚಿ ವಿಶ್ವವೇ ಕೊಂಡಾಡುತ್ತಿದೆ: ಕುಮಾರ ಬಂಗಾರಪ್ಪ

By Kannadaprabha News  |  First Published Mar 11, 2023, 11:53 AM IST

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಹಾಗೂ ಅಭಿವೃದ್ಧಿಪರ ಆಡಳಿತದಿಂದಾಗಿ ವಿಶ್ವವೇ ಭಾರತವನ್ನು ಕೊಂಡಾಡುತ್ತಿದ್ದು, ಮುಂದಿನ ದಿನಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಶಾಸಕ ಕುಮಾರ ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.


ಸೊರಬ (ಮಾ.11) : ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಹಾಗೂ ಅಭಿವೃದ್ಧಿಪರ ಆಡಳಿತದಿಂದಾಗಿ ವಿಶ್ವವೇ ಭಾರತವನ್ನು ಕೊಂಡಾಡುತ್ತಿದ್ದು, ಮುಂದಿನ ದಿನಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಶಾಸಕ ಕುಮಾರ ಬಂಗಾರಪ್ಪ(MLA Kumarabangarappa) ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ತಾಲೂಕು ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದ ಅವ​ರು, ತಾಲೂಕಿನಲ್ಲಿ ಹಿಂದೆಂದೂ ಕಂಡರಿಯದಷ್ಟುಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಹಲವು ವರ್ಷಗಳಿಂದ ನನೆಗುದಿಯಲ್ಲಿದ್ದ ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಮತ್ತು ಸುಸಜ್ಜಿತ ಡಾಂಬರು ರಸ್ತೆ ಸುಮಾರು .5 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದ್ದು, ಮುಕ್ತಾಯದ ಹಂತ ತಲುಪಿದೆ. ತಾವು ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಚುನಾವಣೆ ಎದುರಿಸಲು ಸಿದ್ಧ. ಮೋದಿಜೀ ಅವರ ಅಭಿವೃದ್ಧಿ ಯೋಜನೆಗಳು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡುತ್ತಿರುವ ಸಹಕಾರದಿಂದ ತಾಲೂಕಿನಲ್ಲಿ ಅಭಿವೃದ್ಧಿ ಪರ್ವವೇ ಪ್ರಾರಂಭವಾಗಿದೆ ಎಂದರು.

Tap to resize

Latest Videos

Shivamogga: ಸತ್ತ ಗುತ್ತಿ​ಗೆ​ದಾ​ರ​ನನ್ನು ಬಿಜೆಪಿ ವಾಪಸ್‌ ಕೊಡ​ಬ​ಲ್ಲ​ದೇ? ಸುರ್ಜೇವಾಲ ಪ್ರಶ್ನೆ

ಕಳೆದೆರಡು ತಿಂಗಳ ಹಿಂದೆ ತಾಲೂಕು ಪೇಜ್‌ ಪ್ರಮುಖರ ಸಮಾವೇಶವನ್ನು ಹಮ್ಮಿಕೊಂಡಿದ್ದು, ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಮಾ.12ರಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶವನ್ನು ಬಿಜೆಪಿ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದೆ. ತಾಲೂಕಿನಾದ್ಯಂತ ಒಬಿಸಿ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ ಎಂದರು.

ಇತ್ತೀಚೆಗೆ ವಿಮಾನ ನಿಲ್ದಾಣ ಉದ್ಘಾಟನೆ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ ಬಿಜೆಪಿ ಕಾರ್ಯಕರ್ತ, ನರೇಂದ್ರ ಮೋದಿ(Narendra Modi) ಅವರ ಅಭಿಮಾನಿ ಚಿಮಣೂರು ಗ್ರಾಮದ ಮಲ್ಲಿಕಾರ್ಜುನ (ಮಲ್ಕಪ್ಪ) ಅವರಿಗೆ ಸಂತಾಪ ಸೂಚಿಸಲಾಯಿತು.

ಸಿಸಿ ಪಾಟೀಲ ಉತ್ತಮ ಕೆಲಸ ಮಾಡ್ತಾನೆ ಅಂತಾ ಹೇಳಿದ್ರೋ ಇಲ್ಲೋ ಆಣೆ ಮಾಡಿ: ಸಿದ್ದರಾಮಯ್ಯಗೆ ಆಣೆ ಪ್ರಮಾಣದ ಸವಾಲು ಹಾಕಿದ ಸಿಸಿ ಪಾಟೀಲ!

ಪೂರ್ವಭಾವಿ ಸಭೆಯಲ್ಲಿ ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ, ಸೊರಬ ಮಂಡಲ ಅಧ್ಯಕ್ಷ ಪ್ರಕಾಶ್‌ ತಲಕಾಲುಕೊಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ, ಓಬಿಸಿ ಜಿಲ್ಲಾಧ್ಯಕ್ಷ ಮಾಲತೇಶ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಮಂಡಲ ಓಬಿಸಿ ಅಧ್ಯಕ್ಷ ಜಗದೀಶ ಗೆಂಡ್ಲ- ಹೊಸೂರು, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು, ಶಕ್ತಿ ಕೇಂದ್ರಗಳ ಪ್ರಮುಖರು, ಮುಖಂಡರು ಉಪಸ್ಥಿತರಿದ್ದರು.

click me!