Shivamogga: ಸತ್ತ ಗುತ್ತಿ​ಗೆ​ದಾ​ರ​ನನ್ನು ಬಿಜೆಪಿ ವಾಪಸ್‌ ಕೊಡ​ಬ​ಲ್ಲ​ದೇ? ಸುರ್ಜೇವಾಲ ಪ್ರಶ್ನೆ

By Kannadaprabha News  |  First Published Mar 11, 2023, 11:36 AM IST

ಬಿಜೆಪಿಗೆ ಎಷ್ಟುಹಣ ಬೇಕು ಎಂದು ಹೇಳಲಿ. ಅವರ ಹಣದ ದಾಹವನ್ನು ಕಾಂಗ್ರೆಸ್‌ ತೀರಿಸುತ್ತದೆ. ಆದರೆ, ಸತ್ತ ಗುತ್ತಿಗೆದಾರರನ್ನು ಅವರು ವಾಪಾಸು ಕೊಡಬಲ್ಲರೇ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಪ್ರಶ್ನೆ ಮಾಡಿದರು.


ಶಿವಮೊಗ್ಗ (ಮಾ.11) : ಬಿಜೆಪಿಗೆ ಎಷ್ಟುಹಣ ಬೇಕು ಎಂದು ಹೇಳಲಿ. ಅವರ ಹಣದ ದಾಹವನ್ನು ಕಾಂಗ್ರೆಸ್‌ ತೀರಿಸುತ್ತದೆ. ಆದರೆ, ಸತ್ತ ಗುತ್ತಿಗೆದಾರರನ್ನು ಅವರು ವಾಪಾಸು ಕೊಡಬಲ್ಲರೇ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ(Randeep singh surjewala) ಪ್ರಶ್ನೆ ಮಾಡಿದರು.

ನಗರದ ಗಾಡಿ​ಕೊ​ಪ್ಪದ ಲಗನಾ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕಾಂಗ್ರೆಸ್‌ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿ, .3.10 ಲಕ್ಷ ಕೋಟಿ ಬಜೆಟ್‌ನಲ್ಲಿ .75 ಲಕ್ಷ ಕೋಟಿಯಷ್ಟುದುಡ್ಡು ಬಿಜೆಪಿ ಸರ್ಕಾರ(BJP Government) ಭ್ರಷ್ಟಾಚಾರ(Curruption) ಮಾಡಿದೆ. ಆ ಹಣದಲ್ಲೇ ನಾವು ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್‌ ಸಭೆಯಲ್ಲೆ ರಾಜ್ಯದ ಎಲ್ಲ ಮನೆಗಳಿಗೂ ಉಚಿತ ವಿದ್ಯುತ್‌, ಪ್ರತಿ ಮನೆಯ ಗೃಹಿಣಿಗೆ ಮನೆ ಖರ್ಚಿಗೆ .2 ಸಾವಿರ ರು. ಅನ್ನಭಾಗ್ಯ ನೀಡುವ ಆದೇಶ ಮಾಡುತ್ತೇವೆ ಎಂದು ಭರವಸೆ ನೀಡಿದರು.

Tap to resize

Latest Videos

ಮೈಸೂರು ಸೋಪಿನ ಸುಗಂಧವನ್ನೂ ಮಾರಿದ ಬಿಜೆಪಿ: ಸುರ್ಜೇವಾಲಾ ಕಿಡಿ

ಕಮಿ​ಷನ್‌ ದಾಹ:

ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶದ ಎಲ್ಲ ಜನರು ಮಾತನಾಡುತ್ತಿದ್ದಾರೆ. 40 ಪರ್ಸೆಂಟ್‌ ಕಮಿಷನ್‌ (40 percent commission Govt)ವಿಚಾರವಾಗಿ ಕರ್ನಾಟಕ ಇಡೀ ದೇಶದ ಗಮನ ಸೆಳೆದಿದೆ. ಈ ಆರೋಪ ಕಾಂಗ್ರೆಸ್‌ ಮಾಡುತ್ತಿಲ್ಲ. ರಾಜ್ಯದ 50 ಸಾವಿರ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಆರೋಪಿಸಿದ್ದಾರೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಗುತ್ತಿಗೆದಾರ ಬೆಳಗಾವಿಯ ಸಂತೋಷ್‌ ಪಾಟೀಲ್‌(Contractor santosh patil suicide case) ತಾನು ಮಾಡಿದ ಕೆಲಸಕ್ಕೆ 40 ಪರ್ಸೆಂಟ್‌ ಕಮಿಷನ್‌ ನೀಡಲಾಗದೇ ಆತ್ಮಹತ್ಯೆ ಮಾಡಿಕೊಂಡ. ಆತನ ವೃದ್ಧ ತಂದೆ ಮತ್ತು ಪತ್ನಿ ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇನ್ನೋರ್ವ ಗುತ್ತಿಗೆದಾರ ಬೆಂಗಳೂರು ಗ್ರಾಮಾಂತರದ ಟಿ.ಎನ್‌. ಪ್ರಸಾದ್‌ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜೇಂದ್ರ ಎಂಬ ವ್ಯಕ್ತಿ ಕೂಡ ಕಮಿಷನ್‌ ನೀಡಲಾಗದೇ ಸತ್ತಿದ್ದಾನೆ ಎಂದು ಹೇಳಿದರು.

ಪೊಲೀಸ್‌ ಹಿರಿಯ ಅಧಿಕಾರಿಯೊಬ್ಬರು ಪಿಎಸ್‌ಐ ಹಗರಣದಲ್ಲಿ ಜೈಲು ಪಾಲಾಗಿರುವುದು ದೇಶದಲ್ಲೇ ಮೊದಲು. ಬಿಜೆಪಿಯವರು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಸಹಕಾರಿ ಬ್ಯಾಂಕ್‌ಗಳ ನೇಮಕಾತಿ, ಪಿಎಸ್‌ಐ ನೇಮಕಾತಿ, ಎಂಜಿನಿಯರ್‌ಗಳ ನೇಮಕಾತಿ, ವರ್ಗಾವಣೆ, ಖಾಸಗಿ ಶಾಲೆಗಳಿಗೆ ಅನುದಾನ ಮಂಜೂರು ಮಾಡಲು ಕೂಡ ನೇರವಾಗಿ ಲಂಚ ಕೇಳಿದ್ದಾರೆ ಎಂದು ಅವರ ಸಂಘಟನೆಯ ಪ್ರಮುಖರೇ ಆರೋಪಿಸಿದ್ದಾರೆ. ಮಠ- ಮಂದಿರಗಳಿಗೆ ಅನುದಾನ ನೀಡಲು ಕೂಡ ಕಮಿಷನ್‌ ಕೇಳಿದ್ದಾರೆ ಎಂದು ಸ್ವಾಮೀಜಿಗಳೇ ಆರೋಪಿಸಿದ್ದಾರೆ ಎಂದು ತಿಳಿಸಿದರು.

ಟಾಟಾ ಮಾಡಿ​ಹೋ​ಗುವ ಪ್ರಧಾ​ನಿ:

ಕೇವಲ ಆರು ತಿಂಗಳಲ್ಲಿ 8 ಬಾರಿ ಪ್ರಧಾನಿ ಬಂದು ಹೋಗಿದ್ದಾರೆ. ಟಾಟಾ ಮಾಡಿ ಹೋಗಿದ್ದು ಬಿಟ್ಟರೆ ಮುಗ್ಧ ಜನರಿಗೆ ಏನನ್ನೂ ಕೊಟ್ಟಿಲ್ಲ. ಕಾಂಗ್ರೆಸ್‌ ಕೊಟ್ಟಯೋಜನೆಗಳನ್ನು ತಮ್ಮದು ಎಂದು ಬಿಂಬಿಸುತ್ತಿದ್ದಾರೆ. ಹಕ್ಕುಪತ್ರ ನೀಡಿಲ್ಲ, ಮನೆ ನೀಡಿಲ್ಲ, ಉದ್ಯೋಗ ಸೃಷ್ಟಿಮಾಡಿಲ್ಲ. ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಮಾರಿದ್ದಾರೆ. ಜಿಲ್ಲೆಯ ಎರಡು ಪ್ರಮುಖ ಕಾರ್ಖಾನೆಗಳನ್ನು ಮುಚ್ಚಿದ್ದಾರೆ. ಸ್ವಾಮೀಜಿಗಳು ಮಾಡಿದ ಆರೋಪಕ್ಕೆ ಸಿಎಂ ಬಸವರಾಜ್‌ ಬೊಮ್ಮಾಯಿ ಹಾಗೂ ಬಿ.ಎಸ್‌.ಯಡಿಯೂರಪ್ಪ 6 ತಿಂಗಳಾದರೂ ಉತ್ತರಿಸಿಲ್ಲ. .20 ಸೋಪಿನಲ್ಲಿ ಕೋಟ್ಯಂತರ ರು. ಲೂಟಿ ಮಾಡಿದ ಇವರು ಕರ್ನಾಟಕವನ್ನು ಬಿಡುತ್ತಾರೆಯೇ ಎಂದು ಟೀಕಿಸಿದರು.

ಹೆಣ್ಣುಮಕ್ಕಳಿಗೆ ರೈತರಿಗೆ, ಯುವಕರಿಗೆ, ದಲಿತರಿಗೆ ಬಿಜೆಪಿ ನ್ಯಾಯ ಕೊಡುವುದಿಲ್ಲ. ಮೋದಿ ಬಂದುಹೋದ ಮೇಲೆ ಗ್ಯಾಸ್‌ ಬೆಲೆ .500 ಹೆಚ್ಚಾಯಿತು. ಪಕೋಡ ಮಾಡುವ ವಾಣಿಜ್ಯ ಗ್ಯಾಸ್‌ ಬೆಲೆ .300 ಹೆಚ್ಚಾಯಿತು. ಹವಾಯಿ ಚಪ್ಪಲಿ ಹಾಕುವ ಬಡವ ವಿಮಾನದಲ್ಲಿ ಹಾರಾಡಬಹುದು ಎಂದು ಹೇಳಿ ಅವನ ಬೆವರಿನ ದುಡಿಮೆಗೆ ಕನ್ನ ಹಾಕಿದ ಮೋದಿ ಕರ್ನಾಟಕದ ಹಗರಣಗಳ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಮಯೂರ್‌ ಜಯಕುಮಾರ್‌ ಜಿಲ್ಲಾಧ್ಯಕ್ಷ ಎಚ್‌.ಎಸ್‌. ಸುಂದರೇಶ್‌, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ, ಪ್ರಮುಖರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್‌, ಮಧು ಬಂಗಾರಪ್ಪ, ಕೆ.ಬಿ. ಪ್ರಸನ್ನಕುಮಾರ್‌, ಆರ್‌.ಎಂ. ಮಂಜುನಾಥ್‌ ಗೌಡ, ಆರ್‌ ಪ್ರಸನ್ನಕುಮಾರ್‌, ಎನ್‌.ರಮೇಶ್‌, ಎಚ್‌. ಎಂ. ಚಂದ್ರಶೇಖರಪ್ಪ ಮೊದಲಾದವರು ಮಾತನಾಡಿದರು. ಸುರ್ಜೇವಾಲಾ ಭಾಷಣವನ್ನು ಬಲ್ಕಿಷ್‌ ಬಾನು ಭಾಷಾಂತರಗೋಸಿದರು.

ಸಭೆಯಲ್ಲಿ ಎಚ್‌.ಸಿ. ಯೋಗೀಶ್‌, ಇಸ್ಮಾಯಿಲ್‌ ಖಾನ್‌, ಎಸ್‌.ಪಿ. ದಿನೇಶ್‌, ವೈ.ಎಚ್‌. ನಾಗರಾಜ್‌, ಪಲ್ಲವಿ, ಸತ್ಯನಾರಾಯಣ ರಾವ್‌ ಭಾವೆ, ರವಿಕುಮಾರ್‌, ಎಸ್‌.ಕೆ. ಮರಿಯಪ್ಪ, ಡಾ. ಶ್ರೀನಿವಾಸ ಕರಿಯಣ್ಣ, ರಾಮೇಗೌಡ, ಬೇಳೂರು ಗೋಪಾಲಕೃಷ್ಣ, ಬಲದೇವಕೃಷ್ಣ, ಇಕ್ಕೇರಿ ರಮೇಶ್‌, ಎನ್‌ಎಸ್‌ಯುಐ ಹಾಗೂ ಯುವ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಜನರ ಹಣ ಜನರಿಗೇ ಸಲ್ಲಬೇಕು ಎಂಬುದು ಕಾಂಗ್ರೆಸ್‌ ಸಿದ್ಧಾಂತವಾಗಿದ್ದು, ಪ್ರತಿ ಮನೆಗೆ 200 ಯೂನಿಟ್‌ಉಚಿತ ವಿದ್ಯುತ್‌, ಪ್ರತಿ ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಡಿ 2000 ರೂ,.ನೇರವಾಗಿ ಬ್ಯಾಂಕ್‌ ಖಾತೆಗೆ ಮತ್ತು ರಾಜ್ಯದ 4ಕೋಟಿ ಜನರಿಗೆ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಕಾರ್ಡ್‌ ನೀಡುತ್ತದೆ

- ರಣದೀಪ್‌ ಸಿಂಗ್‌ ಸುರ್ಜೇವಾಲಾ, ಪ್ರಧಾನ ಕಾರ್ಯದರ್ಶಿ, ಎಐಸಿಸಿ

ತಾಕತ್ತಿದ್ದರೆ ಕಾಂಗ್ರೆಸ್‌ ನಾಯಕರನ್ನು ಹೊಡೆದು ಹಾಕಲಿ

ಸಿದ್ದರಾಮಯ್ಯ(Siddaramaiah) ಅವರಿಗೆ ಒಬ್ಬ ಸಚಿವ ಕೊಲೆ ಬೆದರಿಕೆ ಹಾಕುತ್ತಾನೆ. ರಾಜ್ಯದ ಎಲ್ಲಾ ಕಾಂಗ್ರೆಸ್‌ ನಾಯಕರನ್ನು ನಾನು ತಂದು ಬಿಜೆಪಿಯವರ ಮುಂದೆ ನಿಲ್ಲಿಸುತ್ತೇನೆ. ತಾಕತ್ತಿದ್ದರೆ ಹೊಡೆದುಹಾಕಲಿ ಎಂದು ರಣದೀಪ್‌ ಸಿಂಗ್‌ ಸುರ್ಜೆವಾಲಾ ಸವಾಲು ಎಸೆದರು.

ಕರ್ನಾಟಕ 40 ಪರ್ಸೆಂಟ್‌ ಕಮಿಷನ್‌ಗೆ ಹೆಸರುವಾಸಿ: ಬಿಜೆಪಿ ವಿರುದ್ದ ಸುರ್ಜೆವಾಲಾ ವಾಗ್ದಾಳಿ

ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್‌ ನಾಯಕರು ಗುಂಡಿಗೆ ಬಲಿಯಾದರು. ಆದರೆ, ಕಾಂಗ್ರೆಸ್‌ ಸತ್ತಿಲ್ಲ. ದೇಶ ಜೀವಂತವಾಗಿದೆ ಎಂದರು.

ಮಾ.11ರಿಂದ ನಮ್ಮ ಗ್ಯಾರಂಟಿ ಕಾರ್ಡ್‌ ಅನ್ನು ರಾಜ್ಯದ ಎಲ್ಲರ ಮನೆಗೂ ತಲುಪಿಸುತ್ತೇವೆ. ಅದರ ಒಂದು ಭಾಗದಲ್ಲಿ ಅವರಿಂದ ನಂಬರ್‌ ಪಡೆದು ಇನ್ನರ್ಧ ಭಾಗವನ್ನು ಗ್ಯಾರಂಟಿಯಾಗಿ ನೀಡುತ್ತೇವೆ. ನಮ್ಮ ಸರ್ಕಾರ ಬಂದ ತಕ್ಷಣ ಈ ಮೂರೂ ಯೋಜನೆಗಳು ಜಾರಿಗೆ ಬರುತ್ತವೆ ಜನರ ಹಣವನ್ನೇ ಜನರಿಗೆ ನೀಡುತ್ತೇವೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದ​ು ಹೇಳಿ​ದ​ರು.

click me!