ಮುಸ್ಲಿಂ ಧರ್ಮಕ್ಕೆ ನೀಡಿದ್ದ ಶೇಕಡ 4 ಮೀಸಲಾತಿಯನ್ನು ಮುರಿದು ಲಿಂಗಾಯಿತ, ಒಕ್ಕಲಿಗ ಸೇರಿದಂತೆ ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳ ಮಾಡಿದ್ದು ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಗುಬ್ಬಿ (ಮೇ.02): ಮುಸ್ಲಿಂ ಧರ್ಮಕ್ಕೆ ನೀಡಿದ್ದ ಶೇಕಡ 4 ಮೀಸಲಾತಿಯನ್ನು ಮುರಿದು ಲಿಂಗಾಯಿತ, ಒಕ್ಕಲಿಗ ಸೇರಿದಂತೆ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದು ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು. ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಸಹಸ್ರಾರು ಬಿಜೆಪಿ ಕಾರ್ಯಕರ್ತರ ಬೃಹತ್ ರೋಡ್ ಶೋನಲ್ಲಿ ಪಾಲ್ಗೊಂಡು ಮಾತನಾಡಿದರು.
ಇದೇ 10ರಂದು ನಿಮ್ಮ ಅಭ್ಯರ್ಥಿ ದಿಲೀಪ್ ಕುಮಾರ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ಬಿಜೆಪಿ ಡಬಲ್ ಎಂಜಿನ್ ಸರ್ಕಾರ ರಚನೆಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು. ದೇಶದ ಶೇಕಡಾ 25 ರಷ್ಟು ರೈತರಿಗೆ ಅನುಕೂಲ ಮಾಡಿದ ಬಿಜೆಪಿ ಸರ್ಕಾರ ಅಡಿಕೆ ವ್ಯಾಪಾರದ ಸ್ಮಗ್ಲಿಂಗ್ ದಂಧೆಗೆ ಕಡಿವಾಣ ಹಾಕಲು ಕೆಲ ನಿರ್ಧಾರ ಕೈಗೊಳ್ಳಲಾಯಿತು. ಮೋದಿ ನೇತೃತ್ವದ ಸರ್ಕಾರ ಕೈಗೊಂಡ ತೀರ್ಮಾನ ಎಂದೂ ಕಿಸಾನ್ ವರ್ಗದ ಪರ ಒಳ್ಳೆಯ ಕೆಲಸವನ್ನೇ ಮಾಡಿದೆ. ಅಡಿಕೆ ಆಮದು ಕೂಡಾ ಒಂದು ವರ್ಗದ ಜನರ ಕಡಿವಾಣಕ್ಕೆ ಮಾಡಲಾಗಿತ್ತು. ಈಗ ಎಲ್ಲವೂ ರೈತರಿಗೆ ಅರ್ಥವಾಗಿದೆ.
ಗ್ಯಾರಂಟಿ ಕಾರ್ಡ್ ನೀಡಿ ಕಾಂಗ್ರೆಸ್ ಮತಭಿಕ್ಷೆ: ಯಡಿಯೂರಪ್ಪ ಲೇವಡಿ
ಅಡಿಕೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಸಹ ಬಿಜೆಪಿ ಸರ್ಕಾರ ಕಾರಣ ಎಂಬುದು ಮರೆಯುವಂತಿಲ್ಲ ಎಂದ ಅವರು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರ ಮಾಡಿದ ಕೆಲಸಗಳು ಇಂದಿಗೂ ಸ್ಮರಣೀಯ. ಇಲ್ಲಿ ಬಿಜೆಪಿ ಸರ್ಕಾರಕ್ಕೆ ಮತದಾರರು ಸಹಕರಿಸಿದ್ದಲ್ಲಿ ಮುಂದಿನ ಪ್ರಧಾನಿ ಮೋದಿ ಅವರೇ ಆಗಲಿದ್ದಾರೆ ಎಂದರು. ಬಿಜೆಪಿ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಗುಬ್ಬಿಗೆ ಅಮಿತ್ ಶಾ ಅವರ ಭೇಟಿ ಬೂಸ್ಟರ್ ಡೋಸ್ ಕೊಟ್ಟಂತೆ ಆಗಿದೆ. ಕಾರ್ಯಕರ್ತರಲ್ಲಿ ಮತ್ತಷ್ಟುಹುಮ್ಮಸ್ಸು ತುಂಬಿದೆ. ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಅನ್ನುವ ರೀತಿ ಕೆಲಸ ಮಾಡುತ್ತಿದ್ದಾರೆ.
ಕ್ಷೇತ್ರದಲ್ಲಿ ಹೈಟೆಕ್ ಆಸ್ಪತ್ರೆ, ಶಾಲೆ, ಕೈಗಾರಿಕಾ ವಲಯ ಸ್ಥಾಪನೆ ಮಾಡುವ ಜೊತೆಗೆ ನೀರಾವರಿ ಯೋಜನೆಗೆ ಪ್ರಮುಖ ಆದ್ಯತೆ ನೀಡುತ್ತೇನೆ. ನಮ್ಮ ಕೃಷಿಕರ ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ಕೆಲಸ ಸರ್ಕಾರ ಮಾಡಿಕೊಡುವಂತೆ ಮನವಿ ಮಾಡಿದರು. ಭಾಷಣದ ಆರಂಭದಲ್ಲಿ ಅಮಿತ್ ಶಾ ಅವರು ತಾಯಿ ಭುವನೇಶ್ವರಿದೇವಿ, ಶ್ರೀ ಚನ್ನಬಸವೇಶ್ವರಸ್ವಾಮಿ, ಚಿದಂಬರಾಶ್ರಮ, ಸಿದ್ಧಗಂಗಾ ಮಠ, ಸಿದ್ದಲಿಂಗೇಶ್ವರಸ್ವಾಮಿ, ಚುಂಚನಗಿರಿ ಮಠವನ್ನು ಸ್ಮರಿಸಿ ಪ್ರಣಾಮವನ್ನು ತಿಳಿಸಿದರು.
ಗ್ಯಾರಂಟಿ ಕಾರ್ಡ್ ಬೇಕಿಲ್ಲ, ಸಾಧನೆಯೇ ನಮಗೆ ರಿಪೋರ್ಟ್ ಕಾರ್ಡ್: ಬಿ.ಎಲ್.ಸಂತೋಷ್
ರೋಡ್ ಶೋ ನಲ್ಲಿ ಸಂಸದ ಜಿ.ಎಸ್.ಬಸವರಾಜು, ಉಸ್ತುವಾರಿ ಸಂಜಯ್ ಭಾಟಿಯಾ, ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೈರಪ್ಪ, ಸಂಪಿಗೆ ಶ್ರೀಧರ್, ತಾಲೂಕು ಅಧ್ಯಕ್ಷ ಪಂಚಾಕ್ಷರಿ, ಮುಖಂಡ ಪಿ.ಬಿ.ಚಂದ್ರಶೇಖರಬಾಬು ಇತರರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.