ಕೇಂದ್ರ ಸಚಿವರಾದ ವಿ.ಸೋಮಣ್ಣ; ನಮ್ಮಪ್ಪಂಗೆ ಇದೇ ಖಾತೆ ಕೊಡಬೇಕೆಂದ ಪುತ್ರ ಅರುಣ್ ಸೋಮಣ್ಣ

By Sathish Kumar KH  |  First Published Jun 9, 2024, 9:20 PM IST

ತುಮಕೂರಿನ ಸಂಸದರಾದ ವಿ.ಸೋಮಣ್ಣ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ, ನಮ್ಮ ತಂದೆಗೆ ವಸತಿ, ಗ್ರಾಮೀಣಾಭಿವೃದ್ಧಿ ಅಥವಾ ಮೂಲಸೌಕರ್ಯ ಖಾತೆಗಳನ್ನು ಕೊಡಬೇಕೆಂದ ಅಭಿಲಾಷೆಯನ್ನು ಅರುಣ್ ಸೋಮಣ್ಣ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು (ಜೂ.09): ರಾಜ್ಯದಲ್ಲಿ ಹಲವು ವರ್ಷಗಳಿಂದ ವಿವಿಧ ಸಚಿವ ಸ್ಥಾನಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಯಶಸ್ವಿಯಾಗಿದ್ದ ವಿ. ಸೋಮಣ್ಣ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ನರೇಂದ್ರ ಮೋದಿ ಸಚಿವ ಸಂಪುಟಕ್ಕೆ ಸೇರ್ಪಡೆ ಆಗಿದ್ದಾರೆ. ತುಮಕೂರಿನ ಸಂಸದರಾದ ವಿ.ಸೋಮಣ್ಣ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ನಮ್ಮ ತಂದೆಗೆ ವಸತಿ, ಗ್ರಾಮೀಣಾಭಿವೃದ್ಧಿ ಅಥವಾ ಮೂಲಸೌಕರ್ಯ ಖಾತೆಗಳನ್ನು ಕೊಟ್ಟರೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಾರೆ ಎಂದು ಅರುಣ್ ಸೋಮಣ್ಣ ಹೇಳಿದ್ದಾರೆ.

ಕೇಂದ್ರ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ವಿ. ಸೋಮಣ್ಣ ಅವರು ಜನರೊಂದಿಗೆ ಉತ್ತಮ ಸಂವಹನ ಸಂಪರ್ಕ ಸಾಧಿಸುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಸರ್ಕಾರದ ಘನತೆ ಎತ್ತಿಹಿಡಿಯುವುದಾಗಿ ಹೇಳಿದರು. ಈ ಮೂಲಕ ರಾಜ್ಯದಲ್ಲಿ ಹಲವು ವರ್ಷಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವವನ್ನು ಕೇಂದ್ರ ಸರ್ಕಾರದಲ್ಲಿ ಸದ್ಬಳಕೆ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಇನ್ನು ಕೇಂದ್ರ ಸರ್ಕಾರದಲ್ಲಿ ರಾಜ್ಯಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಆದರೆ, ಅವರಿಗೆ ಕನ್ನಡ ಹೊರತಾಗಿ ಹಿಂದಿ ಅಥವಾ ಇಂಗ್ಲೀಷ್ ಭಾಷೆಯ ಮೇಲೆ ಅಷ್ಟೊಂದು ಹಿಡಿತವಿಲ್ಲದ ಕಾರಣ ದೇಶದ ವಿವಿಧ ಭಾಗಗಳಲ್ಲಿ ಜನರೊಂದಿಗೆ ಯಾವ ರೀತಿ ಸಂಪರ್ಕ ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Tap to resize

Latest Videos

undefined

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿ. ಸೋಮಣ್ಣ ಕೇಂದ್ರ ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣ್ ಸೋಮಣ್ಣ ಅವರು, ರಾಜ್ಯದಲ್ಲಿ ಹಲವು ವರ್ಷಗಳಿಂದ ವಿವಿಧ ಸಚಿವ ಖಾತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ ಅನುಭವವನ್ನು ನಮ್ಮ ತಂದೆ ವಿ.ಸೋಮಣ್ಣ ಹೊಂದಿದ್ದಾರೆ. ಈಗ ಸಂಸದರಾಗಿ ಆಯ್ಕೆಯಾಗಿದ್ದು, ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ವಸತಿ, ಗ್ರಾಮೀಣಾಭಿವೃದ್ಧಿ ಅಥವಾ ಮೂಲಸೌಕರ್ಯ ಖಾತೆಗಳನ್ನು ಕೊಟ್ಟರೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಾರೆ ಎಂದು ಅರುಣ್ ಸೋಮಣ್ಣ ಹೇಳಿದರು.

ಬೆಂಗಳೂರಿನ ಬಿನ್ನಿ ಪೇಟೆ ಹಾಗೂ ಗೋವಿಂದರಾಜನಗರ ಜನರ ಆಶೀರ್ವಾದದಿಂದ ನಮ್ಮ ತಂದೆ ವಿ.ಸೋಮಣ್ಣ ಅವರ ರಾಜಕೀಯ ಜೀವನ ಆರಂಭವಾಗಿದೆ. ಕಳೆದ ವರ್ಷ ವರುಣ ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಫೈಟ್ ಆಗಿ ಹಿನ್ನಡೆಯಾಗಿತ್ತು. ನಮ್ಮ ಪಕ್ಷದ ವರಿಷ್ಠರು ಸೋಮಣ್ಣ ಅವರಿಗೆ ತುಮಕೂರು ಭಾಗದಲ್ಲಿ ಸಂಸದರಾಗಲು ಅವಕಾಶ ಕೊಟ್ಟಿದ್ದಾರೆ. ಆ ಭಾಗದಲ್ಲಿ ದೇವೇಗೌಡರು, ಕುಮಾರಸ್ವಾಮಿ ಸೇರಿದಂತೆ ಎಲ್ಲ ಜೆಡಿಎಸ್ ನಾಯಕರು ಹಾಗೂ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಸಹಕಾರದಿಂದ ಗೆದ್ದಿದ್ದಾರೆ. ಇತಿಹಾಸದಲ್ಲಿ‌ ತುಮಕೂರು ಸಂಸದೀಯ ಇತಿಹಾಸದಲ್ಲಿ ಇಷ್ಟೊಂದು ಲೀಡ್ ಬಂದಿರಲಿಲ್ಲ. ಅಷ್ಟು ಲೀಡ್ ಕೊಟ್ಟು ಲೋಕಸಭೆಗೆ ಕಳಿಸಿದ್ದಾರೆ ಎಂದು ಅರುಣ್ ಸೋಮಣ್ಣ ಹೇಳಿದರು.

ಕೇಂದ್ರ ಸರ್ಕಾರದಲ್ಲಿ ಮೋದಿಯವರ ಕಲ್ಪನೆಗೆ ತಕ್ಕಂತೆ ನಡೆಯುವವರು ಸೋಮಣ್ಣ ಆಗಿದ್ದಾರೆ. ಅದೇ ಕಾರಣಕ್ಕೆ ನರೇಂದ್ರ ಮೋದಿ ಅವರ ಕ್ಯಾಬಿನೆಟ್ ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಸೋಮಣ್ಣ ಈ ಹಿಂದೆ ನಗರಾಭಿವೃದ್ಧಿ ಸಚಿವರಾಗಿ, ವಸತಿ ಸಚಿವರಾಗಿ, ಮೂಲಸೌಕರ್ಯ ಸಚಿವರಾಗಿ ಕೆಲಸ ಮಾಡಿದ್ಧಾರೆ. ವಿಶೇಷವಾಗಿ ರಾಜ್ಯ ಖಾತೆಗೆ ಯೋಚನೆ ಮಾಡೋದಾದರೆ ವಸತಿ ಖಾತೆ , ಮೂಲಸೌಕರ್ಯ ಖಾತೆ ಅಥವಾ ಗ್ರಾಮೀಣಾಭಿವೃದ್ದಿ ಖಾತೆ ಕೊಟ್ರೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡ್ತಾರೆ. ರಾಜ್ಯದ ಹಲವು ಹಿಂದುಳಿದ ಪ್ರದೇಶಗಳ ಅಭಿವೃದ್ದಿ ಮಾಡಲು ಸಹಕಾರಿಯಾಗುತ್ತದೆ ಎಂದು ಅರುಣ್ ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

click me!