ಬಿಜೆಪಿಗೆ ಜನ ಬೆಂಬಲಿಸಿದ್ದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದೇ ಒಳ್ಳೆಯದು: ಕಾಂಗ್ರೆಸ್ ನಾಯಕ ಲಕ್ಷ್ಮಣ

By Kannadaprabha News  |  First Published Jun 9, 2024, 6:55 PM IST

ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ. ಅದನ್ನು ಅವರು ಫಲಿತಾಂಶದ ಮೂಲಕ ತೋರಿಸಿದ್ದಾರೆ. ಬಿಜೆಪಿ ಗ್ಯಾರಂಟಿ ವಿರುದ್ಧ ಮಾತಾನಾಡುತ್ತಿದ್ದು, ಜನರು ಅವರನ್ನು ಬೆಂಬಲಿಸಿದ್ದಾರೆ. ಜನರಿಗೆ ನಮ್ಮ ಗ್ಯಾರಂಟಿ ಇಷ್ಟ ಆಗಿಲ್ಲ ಎಂದರ್ಥ. ಹೀಗಾಗಿ, ಗ್ಯಾರಂಟಿ ನಿಲ್ಲಿಸೋದೆ ಒಳಿತು. ಗ್ಯಾರಂಟಿ ಯೋಜನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಮರು ಪರಿಶೀಲನೆ ಮಾಡಬೇಕು ಎಂದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ 


ಮೈಸೂರು(ಜೂ.09): 5 ಗ್ಯಾರಂಟಿಗಳನ್ನು ಟೀಕಿಸಿ ರದ್ದು ಮಾಡುವಂತೆ ಒತ್ತಾಯಿಸುತ್ತಿದ್ದ ಬಿಜೆಪಿ ಪರವಾಗಿ ಜನರು ಮತ ಚಲಾಯಿಸಿದ್ದಾರೆ. ಹೀಗಾಗಿ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದೇ ಒಳ್ಳೆಯದು ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು.

ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ. ಅದನ್ನು ಅವರು ಫಲಿತಾಂಶದ ಮೂಲಕ ತೋರಿಸಿದ್ದಾರೆ. ಬಿಜೆಪಿ ಗ್ಯಾರಂಟಿ ವಿರುದ್ಧ ಮಾತಾನಾಡುತ್ತಿದ್ದು, ಜನರು ಅವರನ್ನು ಬೆಂಬಲಿಸಿದ್ದಾರೆ. ಜನರಿಗೆ ನಮ್ಮ ಗ್ಯಾರಂಟಿ ಇಷ್ಟ ಆಗಿಲ್ಲ ಎಂದರ್ಥ. ಹೀಗಾಗಿ, ಗ್ಯಾರಂಟಿ ನಿಲ್ಲಿಸೋದೆ ಒಳಿತು. ಗ್ಯಾರಂಟಿ ಯೋಜನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಮರು ಪರಿಶೀಲನೆ ಮಾಡಬೇಕು ಎಂದು ಹೇಳಿದರು.

Tap to resize

Latest Videos

undefined

ತನ್ನನ್ನು ಸೋಲಿಸಿ ಮೈಸೂರು ಮತದಾರರನ್ನು 'ಸ್ಯಾಡಿಸ್ಟ್' ಎಂದ ಸಿಎಂ ಸಿದ್ದರಾಮಯ್ಯ ಶಿಷ್ಯ ಎಂ.ಲಕ್ಷ್ಮಣ್

ಸಿದ್ದರಾಮಯ್ಯ ಏನು ತಪ್ಪು ಮಾಡಿದ್ದಾರೆ?: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಎಷ್ಟು ಬಾರಿ ಅವಮಾನ ಮಾಡುತ್ತೀರಿ? ಇಷ್ಟರ ಮಟ್ಟಿಗೆ ಸ್ಯಾಡಿಸ್ಟಿಕ್ ನೇಚರ್‌ಇದ್ದರೆ ಹೇಗೆ? ನನ್ನನ್ನು ಸೋಲಿಸಿ, ಪರವಾಗಿಲ್ಲ. ಮೈಸೂರಿನ ಜನ ಸಿದ್ದರಾಮಯ್ಯ ಅವರಿಗೆ ಎಷ್ಟು ಬಾರಿ ನೋವು ಕೊಡ್ತೀರಿ? ಅವರು ಏನು ತಪ್ಪು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಮೈಸೂರಿಗೆ ಏನು ಕೊಟ್ಟರು? ಆದರೆ, ಸಿದ್ದರಾಮಯ್ಯ ಎಷ್ಟು ಕೆಲಸ ಮಾಡಿದ್ದಾರೆ. ಜಯದೇವ ಆಸ್ಪತ್ರೆ ಸೇರಿದಂತೆ ಮೈಸೂರಿಗೆ ಎಷ್ಟು ಕೊಡುಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರಂಥ ಕ್ಲೀನ್ ಇಮೇಜ್ ಇರುವ ಸಿಎಂ ದೇಶದಲ್ಲಿ ಬೇರೆ ಯಾರಾದರೂ ಇದ್ದಾರಾ? ಅವರು ಮನಸ್ಸಿನಲ್ಲಿ ಬಹಳ ನೊಂದಿದ್ದಾರೆ. ಆದರೆ, ಯಾವುದನ್ನೂ ಹೇಳಿಕೊಳ್ಳೋದಿಲ್ಲ ಎಂದರು.

ಬಿಜೆಪಿ ಅಭ್ಯರ್ಥಿ ಯದುವೀರ್‌ಜನರನ್ನು ಎಷ್ಟರ ಮಟ್ಟಿಗೆ ಅರಮನೆಗೆ ಬಿಟ್ಟುಕೊಳ್ತಾರೋ ಇಲ್ಲವೋ ಗೊತ್ತಿಲ್ಲ. ಹಿಂದಿನ ಸಂಸದರ ರೀತಿ ನೀವು ಇರಬೇಡಿ. ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರದ ಯಾವುದೇ ಹೊಸ ಯೋಜನೆ ಇಲ್ಲಿಗೆ ಬರಲಿಲ್ಲ. ಕೇಂದ್ರ ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ಗಮನಹರಿಸಿ. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ. ರೈಲ್ವೆ ಟರ್ಮಿನಲ್ ಗಳ ನಿರ್ಮಾಣದ ಕಡೆ ಗಮನ ಕೊಡಲಿ ಎಂದು ಸಲಹೆ ನೀಡಿದರು.

ನನಗೆ ಸಿದ್ದರಾಮಯ್ಯನವರೇ ದೇವರು. ಸಿದ್ದರಾಮಯ್ಯ ಅವರು ನನಗೆ ಟಿಕೆಟ್ ಕೊಟ್ಟರು. ಅದಕ್ಕೆಡಿ.ಕೆ. ಶಿವಕುಮಾರ್ ಕೂಡ ಸಹಕಾರ ನೀಡಿದ್ದರು. 8 ಕ್ಷೇತ್ರದ ಶಾಸಕರು, ಮಾಜಿ ಶಾಸಕರು ನನಗೆ ಸಹಕಾರ ನೀಡಿದ್ದಾರೆ. ನನಗೆ ಅದೃಷ್ಟ ಇರಲಿಲ್ಲ, ನನ್ನ ಹಣೆಬರಹ ಸರಿ ಇರಲಿಲ್ಲ, ಹೀಗಾಗಿ, ನಾನು ಸೋತಿದ್ದೇನೆ ಎಂದರು.

'ಹಿಂದಿನ ಸಂಸದರ ರೀತಿ ಇರಬೇಡಿ' ಯದುವೀರ್ ಒಡೆಯರ್‌ಗೆ ಪರಾಜಿತ ಅಭ್ಯರ್ಥಿ ಎಂ ಲಕ್ಷ್ಮಣ್ ಕಿವಿಮಾತು

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ໖.໖໐. ರಾಮು, ಮುಖಂಡರಾದ ಎಂ. ಶಿವಣ್ಣ, ಕೆ. ಮಹೇಶ್ ಇದ್ದರು.

ವಿವಿಧ ರೀತಿಯ ನಮಸ್ಕಾರ

ನನಗೆ 6.5 ಲಕ್ಷ ಜನ ಮತ ನೀಡಿದ್ದಾರೆ. 7.9 ಲಕ್ಷ ಜನ ಮತ ನೀಡಿಲ್ಲ. ನನಗೆ ಮತ ನೀಡಿರುವವರು, ನೀಡದೆ ಇರುವವರಿಗೂ ಧನ್ಯವಾದ ಹೇಳುತ್ತೇನೆ ಎಂದ ಎಂ. ಲಕ್ಷ್ಮಣ ಅವರು, ಮತ ಹಾಕಿದವರಿಗೆ ಸಾಷ್ಟಾಂಗ ನಮಸ್ಕಾರ. ಮತ ಹಾಕದವರಿಗೆ ಬರಿ ನಮಸ್ಕಾರ. ಸಿದ್ದರಾಮಯ್ಯಗೆ ಎದ್ದು ನಿಂತು ಸಾಷ್ಟಾಂಗ ನಮಸ್ಕಾರ ಮಾಡಿದರು.

ಒಕ್ಕಲಿಗರು ನನಗೆ ಮತ ಹಾಕಿಲ್ಲ. ಹಳೆ ಮೈಸೂರು ಭಾಗದ 8 ಜನ ಒಕ್ಕಲಿಗರನ್ನು ಸೋಲಿಸಿದ್ದೀರಾ. ನಾವು ಏನು ಅನ್ಯಾಯ ಮಾಡಿದ್ದೇವೆ ಹೇಳಿ? ಜೆಡಿಎಸ್, ಬಿಜೆಪಿಯಲ್ಲಿ ಇರುವವರು ಮಾತ್ರ ಒಕ್ಕಲಿಗರಾ? ನಾವು ಒಕ್ಕಲಿಗರು ಅಂತ ಪೂವ್ ಮಾಡಲಿಕ್ಕೆ ಏನು ಮಾಡಬೇಕು? ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದ್ದಾರೆ. 

click me!