ನರೇಂದ್ರ ಮೋದಿ ಗೆಲುವು ದೇಶದ ಗೆಲುವು: ರಾಜಕುಮಾರ ಪಾಟೀಲ್ ತೇಲ್ಕೂರ್

Published : Apr 20, 2024, 12:01 PM IST
ನರೇಂದ್ರ ಮೋದಿ ಗೆಲುವು ದೇಶದ ಗೆಲುವು: ರಾಜಕುಮಾರ ಪಾಟೀಲ್ ತೇಲ್ಕೂರ್

ಸಾರಾಂಶ

ನಾನು ವಿಧಾನಸಭಾ ಚುನಾವಣೆಯಲ್ಲಿ ಕುತಂತ್ರ ರಾಜಕಾರಣದಿಂದ ಸೋತಿರಬಹುದು. ಆದರೆ ಈ ಬಾರಿ ಮೋದಿಯವರನ್ನು ಸೋಲಿಸಿದರೆ ದೇವರು ಕ್ಷಮಿಸುವುದಿಲ್ಲ ಮೂರನೇ ಬಾರಿಗೆ ಮೋದಿಯವರ ಪ್ರಧಾನಿಯಾಗಬೇಕು. ನಿಮ್ಮೆಲ್ಲರ ಆಶೀರ್ವಾದ ಬಿಜೆಪಿ ಮೇಲಿರಲಿ. ನಿಮ್ಮ ಪಾದಮಟ್ಟಿ ನಮಸ್ಕಾರ ಮಾಡಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ 

ಕಲಬುರಗಿ(ಏ.20):   ಈ ಬರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಭರ್ಜರಿ ಜಯ ಸಾಧಿಸಿದರೆ ಅದು ದೇಶದ ಗೆಲುವು ಮೋದಿಯವರನ್ನು ಸೋಲಿಸಿದರೆ ದೇವರು ಕೂಡ ಕ್ಷಮಿಸಲಾರರು ಎಂದು ಮಾಜಿ ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ್ ಹೇಳಿದರು.

ಸೇಡಂ ಮಂಡಲದ ಅಡಕಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಅವರು, ನಾನು ವಿಧಾನಸಭಾ ಚುನಾವಣೆಯಲ್ಲಿ ಕುತಂತ್ರ ರಾಜಕಾರಣದಿಂದ ಸೋತಿರಬಹುದು. ಆದರೆ ಈ ಬಾರಿ ಮೋದಿಯವರನ್ನು ಸೋಲಿಸಿದರೆ ದೇವರು ಕ್ಷಮಿಸುವುದಿಲ್ಲ ಮೂರನೇ ಬಾರಿಗೆ ಮೋದಿಯವರ ಪ್ರಧಾನಿಯಾಗಬೇಕು. ನಿಮ್ಮೆಲ್ಲರ ಆಶೀರ್ವಾದ ಬಿಜೆಪಿ ಮೇಲಿರಲಿ. ನಿಮ್ಮ ಪಾದಮಟ್ಟಿ ನಮಸ್ಕಾರ ಮಾಡಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆಂದರು.

ಸರ್ಕಾರ ಸೇಂದಿ ಇಳಿಸೋಕೆ ಅನುಮತಿ ಕೊಡದಿದ್ದರೆ, ಈಡಿಗರು ಮತದಾನ ಬಹಿಷ್ಕಾರ ಮಾಡ್ತೇವೆ; ಪ್ರಣವಾನಂದ ಸ್ವಾಮೀಜಿ

ಡಾ. ಉಮೇಶ ಜಾಧವ್‌ ಮಾತನಾಡಿ, ಸನಾತನ ಹಿಂದೂ ಧರ್ಮವನ್ನು ಅವಹೇಳನ ಮಾಡಿದ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಉದಯ ಸ್ಟಾಲಿನ್ ಹೇಳಿಕೆಯನ್ನು ಸಮರ್ಥಿಸಿ ಮಾತನಾಡಿದ ಪ್ರಿಯಾಂಕ್‌ ಖರ್ಗೆಯವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದರು.

ಕಾಂಗ್ರೆಸ್ ಆಡಳಿತದಲ್ಲಿ ಧರ್ಮವನ್ನು ಅವಹೇಳನ ಮಾಡುವುದು, ದೇಗುಲಗಳನ್ನು ಕಟ್ಟದಂತೆ ತಡೆಯುವುದು ಕಾಂಗ್ರೆಸ್‌ ಪಕ್ಷದ ಸಂಸ್ಕೃತಿಯಾಗಿದೆ ಎಂದು ತಿವಿದರು.

ಚುನಾವಣೆ ಬಳಿಕ ಬಿಜೆಪಿ ಜೊತೆ ಜೆಡಿಎಸ್ ವಿಲೀನ: ಡಿ.ಕೆ.ಶಿವಕುಮಾರ್

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರಾಜಕುಮಾರ್ ಪಾಟೀಲ್ ತೆಲುಗು ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೇವಾಡಗಿ, ಎಂಎಲ್‌ಸಿ ಶಶಿಲ್ ನಮೋಶಿ ಮಾತನಾಡಿದರು ಮಂಡಲ ಅಧ್ಯಕ್ಷರಾದ ಶರಣು ಶಂಕರ್ ಹಿಂದುಳಿದ ವರ್ಗಗಳ ಮೋರ್ಚಾದ ಅವ್ವಣ್ಣ ಮ್ಯಾಕೇರಿ, ಮುಕುಂದ ದೇಶಪಾಂಡೆ, ನಾಗರೆಡ್ಡಿ ಪಾಟೀಲ್, ಜ್ಯೋತಿ ಶಾಬಾದಕರ್, ಅನಂತರಿಟಿ ಪಾಟೀಲ್ ವೆಂಕಟರೆಡ್ಡಿ ಪಾಟೀಲ್ ಶಿವರಾಜ ರೆಡ್ಡಿ ಪಾಟೀಲ್ ಗೋವಿಂದ ಅಡಕಿ ನಾಗರಾಜ್ ಭಟ್ ತಿರುಪತಿ ರೆಡ್ಡಿ ಅಡಕಿ ಇದ್ದರು.

ನೂರಾರು ಕಾರ್ಯಕರ್ತರು ಬಿಜೆಪಿಗೆ ಪಕ್ಷಾಂತರ

ಸೇಡಂ ಮಂಡಲದಿಂದ ಅಡಕಿ ಗ್ರಾಮದ ಯುವಕರಾದ ವಿನೋದ್ ಯಾದವ್, ರಮೇಶ್ ರೆಡ್ಡಿ, ಷರತ್ತು ಯಾದವ್, ಶರಣು ಯಾದವ್, ಸಂತೋಷ ಯಾದವ್, ನಾಗರಾಜ್ ಟಿ ಸಚಿನ್, ಅಶೋಕ್ ರೆಡ್ಡಿ, ಸುನಿಲ್ ಪುನೀತ್ ಹಾಗೂ ಅನಂತ ರೆಡ್ಡಿ ಪಾಟೀಲ್ ಹಾಸನಪಲ್ಲಿ ಮತ್ತು ನಾಗಭೂಷಣ ರೆಡ್ಡಿ ನೇತೃತ್ವದಲ್ಲಿ ಸೇಡಂನ ಪ್ರಮುಖರಾದ ಶ್ರೀಕಾಂತ ರೆಡ್ಡಿ ವೆಂಕಟೇಶ್ ಪಾಟೀಲ್, ಭೀಮರೆಡ್ಡಿ ಮಲ್ಲಿಪಲ್ಲಿ, ವೆಂಕಟೇಶ ಪಾಟೀಲ್ ಮಾದ್ವಾರ, ಭೀಮಶೆಟ್ಟಿ ಇಮ್ಡಾಪುರ, ರಾಜ್ಯಶೇಖರ್ ಸ್ವಾಮಿ, ಸುಬ್ಬಾರೆಡ್ಡಿ, ಬಸವರಾಜ ಇಮ್ಡಾಪುರ, ಜವಾಹರ್ ನಗರದ ಲಾಲ ಅಹಮದ್, ವೆಂಕಟರೆಡ್ಡಿ ಪಾಟೀಲ್, ಭಗವಂತ ಪಾಟೀಲ್ ಇಮ್ಡಾಪುರ, ರವಿ ಸಿಂಗ್, ಆನಂದ ಸಿಂಗ್, ಭೀಮರೆಡ್ಡಿ ಸೇರಿ ವೆಂಕಟಪ್ಪ ಸೇರಿ ಮತ್ತಿತರು ಬಿಜೆಪಿಗೆ ಸೇರ್ಪಡೆಗೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ