ಅಭಿವೃದ್ಧಿ ವಿಚಾರದ ಲ್ಲಿ ಸಚಿವ ಹಾಲಪ್ಪ ಆಚಾರ ಅವರ ಟ್ರೈನ್ ಸ್ಲೋ ಇದೆ. ಹಾಗೆ ರಾಷ್ಟ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗದ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಎಂದು ಹಿಂಜರಿದ ಭಾರತದ ಏಕೈಕ ಪ್ರಥಮ ಪ್ರಧಾನಿ ನರೇಂದ್ರ ಮೋದಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಆರೋಪಿಸಿದರು.
ಕುಕನೂರು (ಮೇ.5) : ಅಭಿವೃದ್ಧಿ ವಿಚಾರದ ಲ್ಲಿ ಸಚಿವ ಹಾಲಪ್ಪ ಆಚಾರ ಅವರ ಟ್ರೈನ್ ಸ್ಲೋ ಇದೆ. ಹಾಗೆ ರಾಷ್ಟ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗದ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಎಂದು ಹಿಂಜರಿದ ಭಾರತದ ಏಕೈಕ ಪ್ರಥಮ ಪ್ರಧಾನಿ ನರೇಂದ್ರ ಮೋದಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಆರೋಪಿಸಿದರು.
ಪಟ್ಟಣದ ಮಹಾಮಾಯಾ ತೇರಿನಗಡ್ಡೆ ಹತ್ತಿರ ಬುಧವಾರ ರಾತ್ರಿ ಕಾಂಗ್ರೆಸ್‌ನ ಬಹಿರಂಗ ಪ್ರಚಾರ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬರ, ಕೋವಿಡ್, ಪ್ರವಾಹ ಬಂದಾಗ ಮೋದಿ ಕರ್ನಾಟಕಕ್ಕೆ ಬರಲಿಲ್ಲ. ಈಗ ಚುನಾವಣೆ ನಿಮಿತ್ತ ಬರ್ತಿದ್ದಾರೆ. ಮೋದಿ ಒಂದು ಪತ್ರಿಕಾಗೋಷ್ಠಿ ಸಹ ಮಾಡಿಲ್ಲ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಅವರಿಗೆ ಹೆದರಿಕೆ ಎಂದರು.
undefined
ಯಾರಿಗೂ ಬಹುಮತ ಸಿಗಬಾರದೆಂದು ಹವಣಿಸುತ್ತಿದೆ ಜೆಡಿಎಸ್: ದೇಶಪಾಂಡೆ ವಾಗ್ದಾಳಿ
ಮೋದಿ ಮಾತಿಗಿಂತ ಉಗುಳೇ ಜಾಸ್ತಿ:
ಪ್ರಧಾನಿ ಮೋದಿ(PM Narendra Modi) ಆಡಳಿತಕ್ಕೆ ಬಂದ ಒಂಬತ್ತು ವರ್ಷದಲ್ಲಿ ಭಾರತದ ಸಾಲ ಹೆಚ್ಚಿದೆ. 1950ರಿಂದ 2014ರವರೆಗೆ .52 ಸಾವಿರ ಕೋಟಿ ಇದ್ದ ಭಾರತದ ಸಾಲ, 9 ವರ್ಷದಲ್ಲಿ .1 ಲಕ್ಷದ 52 ಸಾವಿರ ಕೋಟಿ ಆಗಿದೆ. ಕಳೆದ 9 ವರ್ಷದಿಂದ ಬಿಜೆಪಿ ವೈಚಾರಿಕ ವಿಚಾರ, ನೈತಿಕತೆಯಿಂದ ದಿವಾಳಿ ಆಗಿದೆ. ಮೋದಿ ಮಾತಿಗಿಂತ ಅವರ ಉಗುಳೇ ಜಾಸ್ತಿ ಎಂಬಂತೆ ಬರೀ ಅಬ್ಬರದ ಪ್ರಚಾರ ಕಾಣುತ್ತಿದೆ. ಇದರಿಂದ ಆರ್ಥಿಕ ವ್ಯವಸ್ಥೆ ದುವ್ರ್ಯವಸ್ಥೆ ಆಗಿದೆ ಎಂದರು.
ಹಣಕಾಸಿನ ಅರಿವಿಲ್ಲ:
ನೋಟ್ ಬ್ಯಾನಿನಿಂದ ಯಾವುದೇ ಕಪ್ಪು ಹಣ ಸಿಗಲಿಲ್ಲ. ಶೇ.99.98 ಹಣ ವಾಪಸ್ ಬಂತು. ಹೊಸ ನೋಟು ಮುದ್ರಣ ಮಾಡಲು .26 ಸಾವಿರ ಕೋಟಿ ವ್ಯಯವಾಯಿತು. ವಿದೇಶದಿಂದ ಕಪ್ಪು ಹಣ ತರುತ್ತೇವೆ ಅಂದಿದ್ದ ಮೋದಿಗೆ ಹಣಕಾಸಿನ ವ್ಯವಸ್ಥೆ ಅರಿವಿಲ್ಲ. ಕಪ್ಪು ಹಣಕ್ಕೆ ಶೇ.30 ಟ್ಯಾಕ್ಸ್, ಶೇ.30 ದಂಡ ಬೀಳುತ್ತದೆ. ಉಳಿದ ಶೇ.40 ಕಪ್ಪು ಹಣ ಇಟ್ಟವರಿಗೆ ಹೋಗುತ್ತದೆ. ಮೋದಿ ಬರೀ ಸುಳ್ಳಿನ ಪರಮಾವಧಿ. ಅವರಿಗೆ ಆಡಳಿತ ಅನುಭವ ಕೊರತೆ ಇದೆ ಎಂದರು.
ಆಚಾರ್ ಟ್ರೈನ್ ಸ್ಲೋ:
ಸಚಿವ ಹಾಲಪ್ಪ ಆಚಾರ (Halappa achar) ಹೆಚ್ಚು ಕೆಲಸ ಮಾಡಬೇಕಿತ್ತು. ಅಂಗನವಾಡಿ, ವೃದ್ಧಾಶ್ರಮ ತರಬೇಕಿತ್ತು. ಆದರೆ ಕ್ಷೇತ್ರದಲ್ಲಿ ಅವರ ಟ್ರೈನ್ ಸ್ಲೋ ಆಗಿದೆ ಎಂದು ಟೀಕಿಸಿದರು.
ಪಪಂ ಸದಸ್ಯ ಗುದ್ನೇಪ್ಪ ನೋಟಗಾರ ಮಾತನಾಡಿ, ಕ್ಷೇತ್ರದಲ್ಲಿ ರಾಯರಡ್ಡಿ ಅವರಿಂದ ಸರ್ವತೋಮುಖ ಅಭಿವೃದ್ಧಿ ಆಗಿದೆ. ಪ್ರಧಾನಿ ನೆಹರು ಬಿಟ್ಟರೆ, ಐಐಟಿ ಆರಂಭಿಸಿದ್ದು ಬಸವರಾಜ ರಾಯರಡ್ಡಿ, ಆದರೆ ಅದನ್ನು ಉದ್ಘಾಟಿಸಿದ್ದು ಪ್ರಧಾನಿ ಮೋದಿ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಯಂಕಣ್ಣ ಯರಾಶಿ ಮಾತನಾಡಿ, ತಳಕಲ್ಲಿನಲ್ಲಿ ನಾಲ್ಕು ಎಕರೆಯಲ್ಲಿ ಬುದ್ದ, ಬಸವ, ಅಂಬೇಡ್ಕರ್ ಭವನಕ್ಕೆ ಬಸವರಾಜ ರಾಯರಡ್ಡಿ ಮಂತ್ರಿ ಇದ್ದಾಗ .14 ಕೋಟಿ ಅನುದಾನ ಮಂಜೂರು ಮಾಡಿಸಿದ್ದರು. ಆದರೆ ಸಚಿವ ಹಾಲಪ್ಪ ಆಚಾರ ಆ ಅನುದಾನವನ್ನು ತಾವು ಶಾಸಕರಾದ ಮೇಲೆ ನಾನಾ ಗ್ರಾಮದ ಸಿಸಿ ರಸ್ತೆಗಳಿಗೆ ಹಾಕಿದರು. ಇದು ಸರಿನಾ ಎಂದು ಪ್ರಶ್ನಿಸಿದರು.
ಮೋದಿ ನಾಗರಹಾವು ಆದ್ರೆ, ಸೋನಿಯಾ ಗಾಂಧಿ ವಿಷಕನ್ಯೆನಾ?: ಯತ್ನಾಳ್
ಸಿದ್ದಯ್ಯ ಕಳ್ಳಿಮಠ, ರಾಮಣ್ಣ ಭಜಂತ್ರಿ, ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ವೀರನಗೌಡ ಬಳೂಟಗಿ, ಖಾಸಿಂಸಾಬ್ ತಳಕಲ್, ಕುಕನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು, ನಗರ ಘಟಕ ಅಧ್ಯಕ್ಷ ರೆಹೆಮಾನಸಾಬ್ ಮಕ್ಕಪ್ಪನವರ್, ಪಪಂ ಸದಸ್ಯ ಸಿರಾಜ ಕರಮುಡಿ, ಪ್ರಮುಖರಾದ ವೀರಯ್ಯ ತೋಂಟದಾರ್ಯಮಠ, ಬಿ.ಎಂ. ಶಿರೂರ, ನಿಂಗಪ್ಪ ಗೊರ್ಲೆಕೊಪ್ಪ, ಸಂಗಮೇಶ ಗುತ್ತಿ, ರತನ ಬಾತೆ ಇತರರಿದ್ದರು.