
ಶಿರಸಿ (ಮೇ.5) : ಜೆಡಿಎಸ್ ಒಂದು ಕುಟುಂಬದ ಪಕ್ಷ. ಅವರ ಬಲ ದಕ್ಷಿಣ ಕರ್ನಾಟಕದಲ್ಲಿ ಕೆಲ ಕ್ಷೇತ್ರಗಳಿಗಷ್ಟೇ ಸೀಮಿತವಾಗಿದೆ. ಯಾರಿಗೂ ಬಹುಮತ ಸಿಗಬಾರದು, ನಮ್ಮ ಆಟ ನಡೆಯಬೇಕು ಎಂದು ಜೆಡಿಎಸ್ ಹವಣಿಸುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಪಕ್ಷ(JDS Party) 25 ಸ್ಥಾನಗಳನ್ನು ದಾಟುವುದಿಲ್ಲ. 2013-18ರ ಅವಧಿಯ ಕಾಂಗ್ರೆಸ್ ಆಡಳಿತಕ್ಕೂ, ಬಿಜೆಪಿ ಆಡಳಿತಕ್ಕೂ ಸಾಕಷ್ಟುಅಂತರವಿದೆ. ಸ್ಥಿರ ಸರ್ಕಾರ ಕರ್ನಾಟಕಕ್ಕೆ ಅವಶ್ಯಕತೆ ಇದೆ. ಈ ಶಕ್ತಿ ಕಾಂಗ್ರೆಸ್‌ಗೆ ಮಾತ್ರವಿದೆ ಎಂದರು.
ನನ್ನ ಅವಧಿಯಲ್ಲಿ ಹಿಂದೆಂದೂ ಕಾಣದಷ್ಟುಅಭಿವೃದ್ಧಿ ಆಗಿದೆ: ಸಚಿವ ಹೆಬ್ಬಾರ್
ಅಂಕೋಲಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಮಾಡಿದ ಭಾಷಣದಲ್ಲಿ ಏನು ವಿಶೇಷ ಇರಲಿಲ್ಲ. ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದರೂ ಅವರು ಪ್ರಸ್ತಾಪಿಸಿಲ್ಲ. ರಾಜ್ಯದಲ್ಲಿ ಏನಾಗುತ್ತಿದೆ ಎಂದು ಪ್ರಧಾನ ಮಂತ್ರಿ ಅವರಿಗೆ ಲಕ್ಷ್ಯವಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಜಾಸ್ತಿ ಇದ್ದಾಗ ಪ್ರಧಾನಿ ಹೇಗೆ ಮತ ಕೇಳುತ್ತಾರೆ? ಗುತ್ತಿಗೆದಾರರು ನೇರ ಪತ್ರ ಬರೆದಾಗ ಕನಿಷ್ಠ ತನಿಖೆ ಸಹ ಮಾಡಿಲ್ಲ. ಜಿಲ್ಲೆಯಲ್ಲಿ ನಮ್ಮ ಅಭ್ಯರ್ಥಿಗಳು ಆರೂ ಕ್ಷೇತ್ರದಲ್ಳಿ ಗೆಲ್ಲುವ ಲಕ್ಷಣ ಕಾಣುತ್ತಿದೆ. ಕಳೆದ ಚುನಾವಣೆಯಲ್ಲಿ ಯುವಕರ ಒಲವು ಬಿಜೆಪಿ ಕಡೆ ಇತ್ತಾದರೂ ಈ ಬಾರಿ ಅದು ಕಾಣುತ್ತಿಲ್ಲ. ಬೆಲೆ ಏರಿಕೆಯಿಂದ ಬಡವರಿಗೆ ಮಾತ್ರವಲ್ಲ, ಮಧ್ಯಮ ವರ್ಗಕ್ಕೂ ತೊಂದರೆ ಆಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ 5 ಗ್ಯಾರಂಟಿಯನ್ನು ಜಾರಿ ಮಾಡಲಾಗುವುದು ಎಂದರು.
ಮೋದಿಯವರು ಹೇಳಿದಂತೆ ನಡೆದಿದ್ದರೆ ಇಷ್ಟರೊಳಗೆ 18 ಕೋಟಿ ಉದ್ಯೋಗ ಸೃಷ್ಟಿಆಗಬೇಕಿತ್ತು. ಯುವ ಶಕ್ತಿ ಪ್ರಧಾನಿಯವರಿಗೆ ಬೆಂಬಲ ನೀಡಿದ್ದರೂ ಅವರು ಏಕೆ ಉದ್ಯೋಗ ಸೃಷ್ಟಿಗೆ ಕಾಳಜಿ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಭಜರಂಗಿ ಹನುಮಾನ ಬಗ್ಗೆ ನಮಗೆಲ್ಲ ಗೌರವ, ಶ್ರದ್ಧೆ ಇದೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಬೇಕು. ಅಶಾಂತಿಗೆ ಕಾರಣವಾದರೆ ಬ್ಯಾನ್ ಮಾಡುತ್ತೇವೆ ಎಂದಿದ್ದೇವೆ. ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
'ಗೌಡ್ರ ಚಿಂತಿ ಬಿಡ್ರಿ, ಈ ಸಲಾ ನಿಮ್ಮನ್ ಗೆಲ್ಸತೀವಿ' : ಎಂಆರ್ ಪಾಟೀಲ್‌ಗೆ ಮತದಾರರ ಅಭಯ
ಚುನಾವಣೆ ವೇಳೆ ಟೀಕಿಸಲು ಬಳಸುವ ಪದಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ನರೇಂದ್ರ ಮೋದಿ, ಮನಮೋಹನ ಸಿಂಗ್, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಯಾರೇ ಇರಲಿ. ಅವರ ಬಗ್ಗೆ ಟೀಕೆ ಟಿಪ್ಪಣಿಗೆ ಅಧಿಕಾರ ಇದ್ದರೂ ಹಗುರವಾಗಿ ಮಾತನಾಡಬಾರದು. ಪ್ರಧಾನಿ ಸ್ಥಾನಕ್ಕೆ ಕೆಟ್ಟಶಬ್ದದಿಂದ ಸಂಬೋಧಿಸಬಾರದು ಎಂಬುದು ನನ್ನ ವ್ಯಕ್ತಿಗತ ಅಭಿಪ್ರಾಯ ಎಂದರು.
ಈ ವೇಳೆ ಅಭ್ಯರ್ಥಿ ಭೀಮಣ್ಣ ನಾಯ್ಕ, ರವೀಂದ್ರನಾಥ ನಾಯ್ಕ, ವೆಂಕಟೇಶ ಹೆಗಡೆ ಹೊಸಬಾಳೆ, ಶ್ರೀಪಾದ ಹೆಗಡೆ ಕಡವೆ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.