'ಮೋದಿ ಸರ್ಕಾರ ಕಾಂಗ್ರೆಸ್‌ ನಾಯಕರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳುತ್ತಿದೆ'

By BK Ashwin  |  First Published Aug 3, 2022, 10:41 PM IST

ನ್ಯಾಷನಲ್‌ ಹೆರಾಲ್ಡ್‌ ಕಚೇರಿಯಲ್ಲಿರುವ ಯಂಗ್ ಇಂಡಿಯನ್‌ ಆವರಣವನ್ನು ಇಡಿ ಸೀಲ್‌ ಮಾಡಿದ ನಂತರ ಕಾಂಗ್ರೆಸ್‌ ಪ್ರಧಾನ ಕಚೇರಿ ಹಾಗೂ ಸುತ್ತಮುತ್ತಲೂ ಭಾರಿ ಪೊಲೀಸ್‌ ಭದ್ರತೆಯನ್ನು ನಿಯೋಜಿಸಿದೆ. 


ಕೇಂದ್ರ ಸರ್ಕಾರವು ಕಾಂಗ್ರೆಸ್‌ ಪಕ್ಷವನ್ನು ದಿಗ್ಭಂಧನ ಹಾಕಿದೆ (Seige) ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ. ಅಲ್ಲದೆ, ತನ್ನ ಪ್ರಧಾನ ಕಚೇರಿ ಮತ್ತು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಿವಾಸಗಳನ್ನು "ಭಯೋತ್ಪಾದಕರು" (Terrorists) ಎಂದು ಸುತ್ತುವರೆದಿದೆ ಎಂದೂ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಹೋಗುವ ರಸ್ತೆಗಳಿಗೆ ಬ್ಯಾರಿಕೇಡ್‌ ಹಾಕಿ ಸಮೀಪದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. 

ಈ ಬೆಳವಣಿಗೆಯ ನಂತರ ಬುಧವಾರ ಸಂಜೆ ಪಕ್ಷದ ಕಚೇರಿಯಲ್ಲಿ ತರಾತುರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಜೈರಾಮ್ ರಮೇಶ್, ಅಜಯ್ ಮಾಕೆನ್ ಮತ್ತು ಅಭಿಷೇಕ್ ಸಿಂಘ್ವಿ, ಈ ರೀತಿಯ “ಅಗ್ಗದ ಮತ್ತು ಕ್ಷುಲ್ಲಕ ರಾಜಕೀಯ’’ ಕ್ಕೆ ಹೆದರುವುದಿಲ್ಲ ಮತ್ತು ಜನರ ಸಮಸ್ಯೆಗಳನ್ನು ಎತ್ತುವುದನ್ನು ಮುಂದುವರಿಸುತ್ತೇವೆ ಎಂದು ಕೈ ಪಕ್ಷ ಹೇಳಿಕೊಂಡಿದೆ.

Tap to resize

Latest Videos

ನ್ಯಾಷನಲ್‌ ಹೆರಾಲ್ಡ್‌ ಕೇಸ್‌: ಯಂಗ್ ಇಂಡಿಯನ್ ಕಚೇರಿ ಸೀಲ್‌ ಮಾಡಿದ ಇಡಿ

ರಾಷ್ಟ್ರ ರಾಜಧಾನಿಯಲ್ಲಿರುವ ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್ (National Herald) ಕಚೇರಿಯಲ್ಲಿರುವ ಯಂಗ್ ಇಂಡಿಯನ್ (Young Indian) ಆವರಣವನ್ನು ಜಾರಿ ನಿರ್ದೇಶನಾಲಯ (Enforcement Directorate) ತಾತ್ಕಾಲಿಕವಾಗಿ ಸೀಲ್ ಮಾಡಿದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭಾರಿ ಬೆಳವಣಿಗೆಗಳು ನಡೆದಿವೆ. ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕೆಲವು ಪ್ರತಿಭಟನಾಕಾರರು ಜಮಾಯಿಸಬಹುದು ಎಂಬ ಮಾಹಿತಿಯಿರುವುದರಿಂದ ಯಾವುದೇ ಅಹಿತಕರ ಪರಿಸ್ಥಿತಿಯನ್ನು ತಪ್ಪಿಸಲು ಇದು ಮುಂಜಾಗ್ರತಾ ಕ್ರಮವಾಗಿದೆ ಎಂದು ಪೊಲೀಸರು ಹೆಚ್ಚುವರಿ ಭದ್ರತೆ ನಿಯೋಜಿಸದ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ, ಬಳಿಕ ಬ್ಯಾರಿಕೇಡ್‌ಗಳನ್ನು ತೆಗೆಯಲಾಯಿತು ಎಂದು ತಿಳಿದುಬಂದಿದೆ.

ನರೇಂದ್ರ ಮೋದಿ ಆಡಳಿತದ ಈ "ಮುತ್ತಿಗೆ ಮನಸ್ಥಿತಿ"ಯ ಏಕೈಕ ಉದ್ದೇಶವೆಂದರೆ ಒಂದು ಹಂತದಲ್ಲಿ ಅವಮಾನ, ಮತ್ತು ಬೆದರಿಕೆ ಹಾಗೂ ಇನ್ನೊಂದು ಹಂತದಲ್ಲಿ ದಿಕ್ಕು ತಪ್ಪಿಸುವುದು ಮತ್ತು ಸಂವೇದನಾಶೀಲತೆ ಎಂದು ಕಾಂಗ್ರೆಸ್ ಹೇಳಿದೆ. "ಇಂದು ನೀವು ಮುತ್ತಿಗೆಯ ಮನಸ್ಥಿತಿಯನ್ನು, ಭಯದ ವಾತಾವರಣವನ್ನು ಸೃಷ್ಟಿಸಿದ್ದೀರಿ. ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷದ ನಾಯಕತ್ವದ ವಿರುದ್ಧ ತನಿಖಾ ಸಂಸ್ಥೆಗಳು ಬುದ್ದಿಹೀನವಾಗಿ ನಿಯೋಜಿಸಲ್ಪಟ್ಟಿರುವುದನ್ನು ಇಡೀ ದೇಶವು ನೋಡುತ್ತಿದೆ. "ನೀವು ಈ ಸಂಸ್ಥೆ, ಈ ಪಕ್ಷ, ಈ ನಾಯಕರನ್ನು ಭಯೋತ್ಪಾದಕರಂತೆ ಪರಿಗಣಿಸುತ್ತಿದ್ದೀರಿ. ಇದು ಕ್ಷುಲ್ಲಕ ರಾಜಕೀಯದ ಅತ್ಯಂತ ಕೆಟ್ಟ ರೂಪವಾಗಿದೆ ಮತ್ತು ಇದಕ್ಕೆ ವಿರುದ್ಧವಾಗಿ ನೀವು ನಮ್ಮನ್ನು ದೂಷಿಸುತ್ತೀರಿ" ಎಂದು ಸಿಂಘ್ವಿ ಸುದ್ದಿಗಾರರಿಗೆ ತಿಳಿಸಿದರು. ಅಲ್ಲದೆ, ಕಾಂಗ್ರೆಸ್ ಕಚೇರಿಗಳಾದ್ಯಂತ ಪೊಲೀಸರ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಆರೋಪಿಸಿದರು. 

ಇಂದು ನಾವು ನೋಡುತ್ತಿರುವುದು ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿ ಮುತ್ತಿಗೆ ಹಾಕುವ ಮನಸ್ಥಿತಿಯಾಗಿದೆ ಎಂದು ಅವರು ಹೇಳಿದ್ದು, ವಿಶ್ವದ ಹೆಮ್ಮೆಯ ಪ್ರಜಾಪ್ರಭುತ್ವವಾಗಿರುವ ಭಾರತದಲ್ಲಿ ಈ ದುರದೃಷ್ಟಕರ ಪರಿಸ್ಥಿತಿಯನ್ನು ಜಗತ್ತು ಗಮನಿಸುತ್ತಿದೆ ಎಂದೂ ಕಾಂಗ್ರೆಸ್‌ ಆರೋಪಿಸಿದೆ. ಮಾಧ್ಯಮಗಳಲ್ಲಿ ಬೆಲೆ ಏರಿಕೆ, ನಿರುದ್ಯೋಗ ಮತ್ತು ಜಿಎಸ್‌ಟಿಯ ಸಮಸ್ಯೆಗಳನ್ನು ಪ್ರಸ್ತಾಪಿಸಲು ಬಯಸುವುದಿಲ್ಲ. ಈ ಹಿನ್ನೆಲೆ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಸಿಂಘ್ವಿ ಹೇಳಿದರು.  

ನ್ಯಾಷನಲ್‌ ಹೆರಾಲ್ಡ್‌ ಕಚೇರಿ ಮೇಲೆ ಇಡಿ ರೇಡ್‌; ದಾಖಲೆಗಳ ಪರಿಶೀಲನೆ

ಇದು ಸೇಡಿನ ರಾಜಕಾರಣ ಎಂದ ಜೈರಾಮ್‌ ರಮೇಶ್, ಇದು ಹಿಂದೆಂದೂ ನಡೆದಿರಲಿಲ್ಲ ಮತ್ತು ಮೊದಲ ಬಾರಿಗೆ ಸಾಕ್ಷಿಯಾಗುತ್ತಿದೆ. ಆದರೂ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಜಿಎಸ್‌ಟಿ ಹೆಚ್ಚಳದ ಕುರಿತು ಸಂಸತ್ತಿನ ಒಳಗೆ ಮತ್ತು ಹೊರಗೆ ನಾವು ಧ್ವನಿ ಎತ್ತಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು. ಎಐಸಿಸಿ ಕಚೇರಿಯ ಹೊರಗೆ ಭಾರಿ ಪೊಲೀಸ್ ಉಪಸ್ಥಿತಿ ಮತ್ತು ರಸ್ತೆಯನ್ನು ಸಂಚಾರಕ್ಕೆ ಮುಚ್ಚಿರುವ ವಿಡಿಯೋವನ್ನು ಜೈರಾಮ್‌ ರಮೇಶ್ ಹಂಚಿಕೊಂಡಿದ್ದರು. 

click me!