ಜಾಪ್ರಭುತ್ವಕ್ಕೆ ಪ್ರಧಾನಿ ಮೋದಿ(PM Narendra Modi) ಹಾಗೂ ಅಮಿತ್ ಶಾ(Amit shah) ದೊಡ್ಡ ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ. ಎಂದು ಪಿ.ಎಚ್ ನೀರಲಕೇರಿ ಗಂಭೀರ ಆರೋಪವನ್ನ ಮಾಡಿದರು..
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಫೆ.16) : ಮತಪಟ್ಟಿಯ ಮೇಲೆ ಪ್ರಭಾವ ಬೀರುವ ಕೆಲಸವನ್ನು ಶಾಸಕ ಬೆಲ್ಲದ ನಿಲ್ಲಿಸಿಲ್ಲ ಎಂದು ಪಿ.ಎಚ್ ನೀರಲಕೇರಿ ಗಂಭೀರ ಆರೋಪವನ್ನ ಮಾಡಿದರು..
ಧಾರವಾಡ(Dharwad)ದಲ್ಲಿ ಖಾಸಗಿಯಾಗಿ ಮತದಾರರ ನೋಂದಣಿ ಮಾಡಿಸುವುದು ಕಾಯ್ದೆ ಪ್ರಕಾರ ಅಪರಾಧವಾಗಿದ್ದರೂ ಹುಬ್ಬಳ್ಳಿ ಧಾರವಾಡ(Hubballi-Dharwad) ಪಶ್ಚಿಮ ವಿಧಾನಸಭಾ ಕ್ಷೇತ್ರ(Assembly Constituency)ದಲ್ಲಿ ಶಾಸಕ ಅರವಿಂದ್ ಬೆಲ್ಲದ (MLA Arvind Bellad) ಅವರು ಈ ಕೆಲಸ ಮಾಡಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಕಾಂಗ್ರೆಸ್ ಮುಖಂಡ ಪಿ.ಎಚ್.ನೀರಲಕೇರಿ(PH Niralakeri) ಅವರು ಆರೋಪಿಸಿದರು.
Assembly election: ಫೈರ್‌ಬ್ರಾಂಡ್ ಯತ್ನಾಳ್ ಎದುರು ನಿಲ್ಲುವವರು ಯಾರು?
ಮಾಧ್ಯಮಗಳೋಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಮ್ಮ ಮನೆಗೆ ಬಂದಿದ್ದ ಅರವಿಂದ್ ಬೆಲ್ಲದ ಅವರಿಂದ ನಿಯೋಜನೆಯಾಗಿದ್ದ ಕಾರ್ಯಕರ್ತರು ಮತದಾರರ ಪಟ್ಟಿಗೆ ಮತದಾರರನ್ನು ಸೇರಿಸುವುದು ಅಭಿಪ್ರಾಯ ದಾಖಲಿಸುವ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂತು. ಈ ಮೂಲಕ ಅವರು ಮತಪಟ್ಟಿ ಮೇಲೆ ತಮ್ಮ ಪರವಾಗಿ ಪ್ರಭಾವ ಬೀರುತ್ತಿರುವುದು ಸ್ಪಷ್ಟವಾಗಿದೆ. ಆ್ಯಪ್ ಮೂಲಕ ಈ ಕೆಲಸ ಮಾಡುತ್ತಿದ್ದಾರೆ. ಆ ಆ್ಯಪ್ ಅನ್ನು ನಿಯಂತ್ರಣ ಮಾಡುವುದು ಶಾಸಕ ಅರವಿಂದ್ ಬೆಲ್ಲದ ಅವರ ಕೈಯಲ್ಲಿದೆ. ಮತದಾರರ ಪಟ್ಟಿ ಮೇಲೆ ಒಬ್ಬ ಆಡಳಿತಾರೂಢ ಪಕ್ಷದ ಶಾಸಕರು ಯಾವ ರೀತಿ ಪ್ರಭಾವ ಬೀರುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.
ಚುನಾವಣಾ ಆಯೋಗಕ್ಕೂ(Election commission) ನಾವು ಈ ಬಗ್ಗೆ ದೂರು ನೀಡಲಿದ್ದು ಚುನಾವಣಾ ಆಯೋಗ ಈ ಬಗ್ಗೆ ಸ್ವಯಂ ಪ್ರೇರಿತ ದೂರುದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಚುನಾವಣೆಗೆ ಹಣ ಸಂಗ್ರಹಿಸಲು ಬಿಜೆಪಿ(BJP) ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದು ಅದಕ್ಕಾಗಿ ಕಾಮಗಾರಿಗಳ ಹೆಸರಿನಲ್ಲಿ ಗುತ್ತಿಗೆದಾರರನ್ನು ಹುಡುಕುತ್ತಿದೆ. ಶೇ ,40 ಕಮೀಷನ್ ಕೊಡುವ ಗುತ್ತಿಗೆದಾರರಿಗೆ ಟೆಂಡರ್ ಕೊಡುತ್ತಿದೆ. ಚುನಾವಣಾ ಸಮಯದಲ್ಲಿ 18 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳನ್ನು ಟೆಂಡರ್ ಕರೆದಿರುವುದು ಇದರಿಂದ ಗೊತ್ತಾಗುತ್ತದೆ ಎಂದು ಹೇಳಿದರು.
ಧಾರವಾಡ(Dharwad) ಜಿಲ್ಲೆಯಲ್ಲಿ ಕೂಡ ಬೋಗಸ್ ಟೆಂಡರ್ ಹೆಸರಿನಲ್ಲಿ 240 ಕೋಟಿ ರೂಪಾಯಿಗೂ ಹೆಚ್ಚು ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು ಭಯೋತ್ಪಾದಕರ ರೀತಿ ವರ್ತನೆ ಆಗುತ್ತಿದೆ.
ಅತ್ಯಂತ ನಿಷ್ಪಕ್ಷಪಾತ ವರದಿ, ತನಿಖೆಗಳಿಗೆ ಹೆಸರಾದ ಬಿಬಿಸಿ ವಾಹಿನಿ(BBC Channel) ಮೇಲೆ ಕೇಂದ್ರ ಸರ್ಕಾರ ಐಟಿ ದಾಳಿ ನಡೆಸಿದ್ದು ಅತ್ಯಂತ ಖಂಡನೀಯ ಎಂದು ಇದೇ ವೇಳೆ ನೀರಲಕೇರಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರಳ ಸಜ್ಜನಿಕೆಯ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ: ಸಿಎಂ ಬೊಮ್ಮಾಯಿ ಸಂತಾಪ
ಪ್ರಜಾಪ್ರಭುತ್ವಕ್ಕೆ ಪ್ರಧಾನಿ ಮೋದಿ(PM Narendra Modi) ಹಾಗೂ ಅಮಿತ್ ಶಾ(Amit shah) ದೊಡ್ಡ ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು...ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ದಾನಪ್ಪ ಕಬ್ಬೇರ ಸೇರಿದಂತೆ ಇತರರು ಹಾಜರಿದ್ದರು...