ತಮ್ಮ ನಿರ್ಭೀತ ಮಾತಿನ ಮೂಲಕವೇ ರಾಜ್ಯದ ಗಮನ ಸೆಳೆದಿರುವ ಶಾಸಕ ಬಸನಗೌಡ ಯತ್ನಾಳ ಪಾಟೀಲ ಅವರು ಪ್ರತಿನಿಧಿಸುವ ಗುಮ್ಮಟನಗರಿ ವಿಜಯಪುರ ನಗರ ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ
ರುದ್ರಪ್ಪ ಆಸಂಗಿ
ವಿಜಯಪುರ (ಫೆ.16) : ತಮ್ಮ ನಿರ್ಭೀತ ಮಾತಿನ ಮೂಲಕವೇ ರಾಜ್ಯದ ಗಮನ ಸೆಳೆದಿರುವ ಶಾಸಕ ಬಸನಗೌಡ ಯತ್ನಾಳ ಪಾಟೀಲ ಅವರು ಪ್ರತಿನಿಧಿಸುವ ಗುಮ್ಮಟನಗರಿ ವಿಜಯಪುರ ನಗರ ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಹಾಲಿ ಶಾಸಕ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರು 1994, 2018ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈಗ ಮತ್ತೊಮ್ಮೆ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ. ಆದರೆ, ಯತ್ನಾಳ ಕಳೆದ ಕೆಲ ಸಮಯದಿಂದ ಬಿಜೆಪಿ ನಾಯಕರ ವಿರುದ್ಧವೇ ಬಹಿರಂಗ ವಾಗ್ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ತುಸು ಮುನಿಸಿಕೊಂಡಿದೆ ಎಂಬ ಮಾತುಗಳೂ ಕೇಳಿಬರುತ್ತಿದೆ. ಹೀಗಾಗಿ ಅದು ಅವರ ಟಿಕೆಟ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆದರೂ ಮತ್ತೆ ಚುನಾವಣೆ ಅಖಾಡಕ್ಕೆ ಧುಮುಕಲು ಮುಂದಾಗಿರುವ ಯತ್ನಾಳ ಅವರು, ಮರು ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಸದ್ಯ ಇವರ ಟಿಕೆಟ್ ಹೈಕಮಾಂಡ್ ಅಂಗಳದಲ್ಲಿದೆ.
ಹಲವರ ಪೈಪೋಟಿ: ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(MLA Basanagowda Patil yatnal) ಅವರ ಜತೆಗೆ ಬಿಜೆಪಿ(BJP)ಯಿಂದ ಇನ್ನೂ ಹಲವರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಈ ಪೈಕಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ(Appasaheb pattanashettty)ಕೂಡ ಒಬ್ಬರು. ಅಪ್ಪಾಸಾಹೇಬ ಪಟ್ಟಣಶೆಟ್ಟಿಅವರು 2004 ಹಾಗೂ 2008ರಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದವರು. ಯತ್ನಾಳ ಅವರನ್ನು ಹೊರತುಪಡಿಸಿ ಸುರೇಶ್ ಬಿರಾದರ್, ರಾಜು ಮಗಿಮಠ, ಲಿಂಬೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂದ್ರಶೇಖರ ಕವಟಗಿ ಸೇರಿ ಇನ್ನೂ ಅನೇಕರು ಬಿಜೆಪಿ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ.
ಬಿಜೆಪಿ ನೋಟಿಸ್ ತೋರಿಸಿದ್ರೆ 10 ಲಕ್ಷ ಕೊಡುವೆ: ಯತ್ನಾಳ್
ಕಾಂಗ್ರೆಸ್‌ನಲ್ಲೂ ಡಿಮ್ಯಾಂಡ್: ಇನ್ನು ಕಾಂಗ್ರೆಸ್‌ನಲ್ಲಿ ಈ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಬೇಕೆಂಬ ಕುರಿತು ಚಿಂತನೆ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಸುಳಿವು ಕೂಡ ನೀಡಿದ್ದಾರೆ. ಮಾಜಿ ಶಾಸಕ ಡಾ.ಮಕ್ಬುಲ್ ಬಾಗವಾನ್, ಅಬ್ದುಲ್ ಹಮೀದ್ ಮುಶ್ರೀಫ್, ಬಸವನಬಾಗೇವಾಡಿ ಹಾಲಿ ಶಾಸಕ ಶಿವಾನಂದ ಪಾಟೀಲ ಹಾಗೂ ಅವರ ಪುತ್ರಿ ಸಂಯುಕ್ತಾ ಪಾಟೀಲ್, ಮಾಜಿ ಸಚಿವ ದಿ.ಎಂ.ಎಲ್.ಉಸ್ತಾದ್ ಪುತ್ರಿ ರುಕ್ಸಾನಾ ಉಸ್ತಾದ್ ಆಕಾಂಕ್ಷಿಗಳ ಪಟ್ಟಿಯಲ್ಲಿದೆ.
ಜೆಡಿಎಸ್(JDS)ನಲ್ಲಿ ಅಲ್ಪಸಂಖ್ಯಾತ ಸಮುದಾಯದ ದಿಲಾವರ್ ಖಾಜಿ, ಬಿ.ಎಚ್.ಮಹಾಬರಿ ಅವರ ಹೆಸರು ಕೇಳಿಬರುತ್ತಿವೆ. ಆದರೆ, ವರಿಷ್ಠರು ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಲು ಚಿಂತನೆ ನಡೆಸಿದ್ದಾರೆ.
ಕ್ಷೇತ್ರದ ಹಿನ್ನೆಲೆ: ಗುಮ್ಮಟ ನಗರಿ ವಿಜಯಪುರ ಕ್ಷೇತ್ರದಲ್ಲಿ 1957ರಿಂದ 2013ರವರೆಗೆ ನಡೆದ 14 ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-7, ಬಿಜೆಪಿ-5, ಬಿಜೆಪಿ ಹಾಗೂ ಪಕ್ಷೇತರರು ತಲಾ ಒಂದು ಬಾರಿ ಜಯ ಗಳಿಸಿದ್ದಾರೆ. 1957ರಲ್ಲಿ ಪ್ರಪ್ರಥಮ ಬಾರಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಡಾ.ಸರದಾರ್ ಬಸವರಾಜ ನಾಗೂರರÜನ್ನು ಮತದಾರರು ಗೆಲ್ಲಿಸಿದ್ದರು. 1967ರಲ್ಲಿ ಬಿ.ಎಂ.ಪಾಟೀಲ, 1972ರಲ್ಲಿ ಕೆ.ಟಿ.ರಾಠೋಡ್, 1994, 2018ರಲ್ಲಿ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಅವರು 2004, 2008ರಲ್ಲಿ ಎರಡು ಅವಧಿಗೆ ಆಯ್ಕೆಯಾಗಿದ್ದರು.
ನಾನು ಬಿಎಸ್‌ವೈ ವಿರುದ್ಧ ಮಾತನಾಡಲ್ಲ ಎಂದ ಯತ್ನಾಳ್: ನಸು ನಕ್ಕು ಕೈ ಮುಗಿದ ಯಡಿಯೂರಪ್ಪ..!
ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಒಟ್ಟು 2,64,714 ಮತದಾರರಿದ್ದಾರೆ. ಪಂಚಮಸಾಲಿ, ಗಾಣಿಗ, ಬಣಜಿಗ, ಲಿಂಗಾಯತರು ಸುಮಾರು 1.45 ಲಕ್ಷ ಇದ್ದಾರೆ. ಎಸ್ಸಿ, ಎಸ್ಟಿ40 ಸಾವಿರ ಹಾಗೂ ಮುಸ್ಲಿಂ ಮತದಾರರು ಸುಮಾರು 79,000ದÜಷ್ಟಿದ್ದಾರೆ. ಕ್ಷೇತ್ರದಲ್ಲಿ ಹಿಂದೂಗಳ ಮತಗಳೇ ಹೆಚ್ಚಿದ್ದರೂ 2ನೇ ಅತಿ ದೊಡ್ಡ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರ ಮತಗಳೇ ಅಭ್ಯರ್ಥಿಗಳ ಸೋಲು-ಗೆಲುವಿನಲ್ಲಿ ನಿರ್ಣಾಯಕ.
07ವಿಜೆಪಿ01
ಬಸನಗೌಡ ಪಾಟೀಲ ಯತ್ನಾಳ (ಬಿಜೆಪಿ ಟಿಕೆಟ್ ಆಕಾಂಕ್ಷಿ)