Assembly election: ಸಿದ್ದರಾಮಯ್ಯ ಎಂದು ಹೆಸರಿಟ್ಟಿದ್ದಕ್ಕೆ ಅವರ ತಂದೆಯ ಆತ್ಮ ಒದ್ದಾಡ್ತಿರಬಹುದು: ಸಿಟಿ ರವಿ ವ್ಯಂಗ್ಯ

Published : Dec 18, 2022, 03:29 PM IST
Assembly election: ಸಿದ್ದರಾಮಯ್ಯ ಎಂದು ಹೆಸರಿಟ್ಟಿದ್ದಕ್ಕೆ ಅವರ ತಂದೆಯ ಆತ್ಮ ಒದ್ದಾಡ್ತಿರಬಹುದು: ಸಿಟಿ ರವಿ ವ್ಯಂಗ್ಯ

ಸಾರಾಂಶ

ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾ ಖಾನ್‌ ಎಂದು ನಾನು ಹೆಸರಿಟ್ಟಿಲ್ಲ. ರಾಜ್ಯದ ಜನರೇ ಹೆಸರಿಟ್ಟಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಎಂದು ಹೆಸರಿಟ್ಟಿರುವ ಅವರ ತಂದೆಯ ಆತ್ಮ ವಿಲ-ವಿಲವೆಂದು ಒದ್ದಾಡುತ್ತಿರಬಹುದು.

ಬೆಂಗಳೂರು (ಡಿ.18): ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾ ಖಾನ್‌ ಎಂದು ನಾನು ಹೆಸರಿಟ್ಟಿಲ್ಲ. ರಾಜ್ಯದ ಜನರೇ ಹೆಸರಿಟ್ಟಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಎಂದು ಹೆಸರಿಟ್ಟಿರುವ ಅವರ ತಂದೆಯ ಆತ್ಮ ವಿಲ-ವಿಲವೆಂದು ಒದ್ದಾಡುತ್ತಿರಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಮಾಡಿದ್ದು ಜಾತಿವಾದದ ರಾಜಕಾರಣ ಅಲ್ಲ. ಹಿಂದುತ್ವದ ಮತ್ತು ವಿಕಾಸದ ರಾಜಕಾರಣ ಮಾಡಿದೆ. ನಮ್ಮದು ಅಭಿವೃದ್ಧಿ ರಾಜಕಾರಣವಾಗಿದೆ. ನಮ್ಮ ತಾಕತ್ ಇರೋದೇ ಹಿಂದುತ್ವ, ಅಭಿವೃದ್ಧಿ ರಾಜಕಾರಣದಲ್ಲಿ. ಮನೆ ಒಡೆಯುವ ಜಾತಿ ರಾಜಕಾರಣ ನಮ್ಮದಲ್ಲ. ಆದರೆ, ಟಿಪ್ಪು ಜಯಂತಿ ಆಚರಣೆಗೆ ತಂದು ಮತಾಂಧ ರಾಜಕಾರಣ ಮಾಡಿರುವ ಸಿದ್ಧರಾಮಯ್ಯ ಅವರ ತಂದೆಗೆ ಯಾಕಾದರೂ ಸಿದ್ದರಾಮಯ್ಯ ಅಂತ ಹೆಸರಿಟ್ಟೆನೋ ಎಂದು ಅವರ ಆತ್ಮ ವಿಲ ವಿಲ ಒದ್ದಾಡುತ್ತಿರಬಹುದು. ನಾನು ಶುದ್ಧ ಅಂತ ಹೇಳಿಕೊಳ್ಳಲೂ ಶುದ್ಧತೆ ಇರಬೇಕು ಸಿದ್ದರಾಮಯ್ಯ ಅವರೇ. ಶುದ್ಧತೆ ಇಲ್ಲದವರು ಬೆರಕೆಯ ರಾಜಕಾರಣಿ ಆಗ್ತಾರೆ ಹೊರತು, ಶುದ್ಧ ಆಗೋದಕ್ಕೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಬೆರಕೆ ರಾಜಕಾರಣಿ ಎಂದು ಹೇಳಿದರು. 

Assembly election: ಚುನಾವಣೆ ವೇಳೆ ತ್ಯಾಗದ ಬಳುವಳಿ, ಟಿಪ್ಪು ತಾತನ ನೆನಪು ಬರುತ್ತದೆ: ಬಿ.ಎಲ್. ಸಂತೋಷ್

ಡಿಕೆಶಿಗೆ ಕುಕ್ಕರ್‌ ಮೇಲೆ ಪ್ರೀತಿ ಬಂದಿದೆ: ಕೆಲವು ದಿನಗಳ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದ ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆಯ ಆರೋಪಗಳನ್ನು ಡಿ.ಕೆ. ಶಿವಕುಮಾರ್‌ ಅವರು ಅವರೆಲ್ಲಾ ನಮ್ಮ ಸಹೋದದರು ಎಂದು ಹೇಳಿದ್ದರು.  ಈಗ ಡಿಕೆಶಿ ಅಣ್ಣನಿಗೆ ಕುಕ್ಕರ್ ಮೇಲೆ ಪ್ರೀತಿ ಬಂದಿದೆ. ಇನ್ನು ಉಗ್ರ ಶಾರೀಕ್ ಕುಕ್ಕರ್ ಅನ್ನು ಬಿರಿಯಾನಿ ಮಾಡುವುದಕ್ಕೆ ತೆಗೆದುಕೊಂಡು ಹೋಗುತ್ತಿರಲಿಲ್ಲ. ಅದನ್ನು ಕೊಂಡೊಯ್ದು ಬ್ಲಾಸ್ಟ್ ಮಾಡಲು ಹೋಗುತ್ತಿದ್ದನು. ಮನೆಹಾಳು ರಾಜಕಾರಣ ಮಾಡಿದ್ದು ಕಾಂಗ್ರೆಸ್ ಆಗಿದೆ. ಜಾತಿ ರಾಜಕಾರಣ ಮಾಡಿದ್ದು ಕೂಡ ಕಾಂಗ್ರೆಸ್‌ ಆಗಿದೆ ಎಂದು ವಾಗ್ದಾಳಿ ನಡೆಸಿದರು. 

ನೂರು ಜನ್ಮ ಎತ್ತಿದರೂ ಬಳಗ ಕಟ್ಟಲು ಸಾಧ್ಯವಿಲ್ಲ: ಒಂದು ಕಾಲದಲ್ಲಿ ನಾವು ಬಿಜೆಪಿಯ ಸಭೆಗಳನ್ನು ಚಾಮರಾಜಪೇಟೆಯ ಕಲ್ಯಾಣ ಮಂಟಪದಲ್ಲಿ ಮಾಡುತ್ತಿದ್ದೆವು. ಈಗ ಪ್ರಕೋಷ್ಠಗಳ ಸಮಾವೇಶವನ್ನ ಇಷ್ಟು ದೊಡ್ಡದಾಗಿ ಮಾಡ್ತಿದ್ದೇವೆ. ಇಂತಹ ದೊಡ್ಡ ಕಾರ್ಯಕರ್ತ ಬಳಗ ಹೊಂದಿರುವ ಪಕ್ಷವನ್ನ ನೂರು ಜನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಂದರೂ ಕಟ್ಟುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.

ಸಿದ್ರಾಮುಲ್ಲಾಖಾನ್‌ ಅಂದರೆ ಬೇಜಾರಿಲ್ಲ: ಸಿದ್ದರಾಮಯ್ಯ

ಜ್ಞಾನ ಇದ್ದವರೇ ಶಕ್ತಿಶಾಲಿಗಳು- ಸಿಎಂ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜಕೀಯಕ್ಕಾಗಿ, ಅಧಿಕಾರಕ್ಕಾಗಿ, ಚುನಾವಣೆಗಾಗಿಯೇ ಇರುವ ಹಲವು ಪಕ್ಷಗಳು ನಮ್ಮ ದೇಶದಲ್ಲಿವೆ. ಜ್ಞಾನ ಇದ್ದವರು ಈ ಶತಮಾನದಲ್ಲಿ ಶಕ್ತಿಶಾಲಿಗಳಾಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಅಂತಾ ಹೇಳಿ ಸುಮ್ಮನಾಗದೇ ಅದಕ್ಕೆ ಯೋಜನೆಗಳನ್ನು ರೂಪಿಸಿದರು. ರಾಜ್ಯದಲ್ಲಿ ಬಿಜೆಪಿ ಪ್ರಕೋಷ್ಠಗಳು ತಳ ಹಂತದ ಸಂಘಟನೆಯಲ್ಲಿ ತೊಡಗಿವೆ. ನಮ್ಮ ಕಾಯಕದ ಜೊತೆಗೆ ದೇಶ ಕಟ್ಟುವ ಕೆಲಸಕ್ಕೂ ಬಿಜೆಪಿಯಲ್ಲಿ ನಾವು ಸಮರ್ಪಣೆ ಮಾಡಿಕೊಳ್ಳಬೇಕು. ಪೀಪಲ್ಸ್ ಪೊಲಿಟಿಕ್ಸ್ ಮಾಡುವ ಪಕ್ಷ ಅಧಿಕಾರಕ್ಕೆ ಬರುವುದು ಬಹಳ ಮುಖ್ಯವಾಗಿದೆ. ದೇಶವನ್ನು ದುಡಿಯುವ ವರ್ಗಗಳ ಪರವಾಗಿ ಬಿಜೆಪಿ ಕಟ್ಟುತ್ತದೆ. ದುಡ್ಡೇ ದೊಡ್ಡಪ್ಪ ಎಂಬ ಜಾಗದಲ್ಲಿ ದುಡಿಮೆಯೇ ದೊಡ್ಡಪ್ಪ ಎಂಬ ದೇಶವನ್ನು ಕಟ್ಟೋಣ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ