Assembly election: ಚುನಾವಣೆ ವೇಳೆ ತ್ಯಾಗದ ಬಳುವಳಿ, ಟಿಪ್ಪು ತಾತನ ನೆನಪು ಬರುತ್ತದೆ: ಬಿ.ಎಲ್. ಸಂತೋಷ್

By Sathish Kumar KHFirst Published Dec 18, 2022, 2:44 PM IST
Highlights

ರಾಜ್ಯದಲ್ಲಿ ಚುನಾವಣಾ ಕಾಲ ಬಂದಾಗ ಕೆಲವರು ರಸ್ತೆಗೆ ಬಂದು ಭಾಷಣದಲ್ಲಿ ಕಣ್ಣೀರು ಹಾಕುತ್ತಾರೆ. ಇನ್ನು ಕೆಲವರು ತಮ್ಮ ತಾತನನ್ನು ನೆನಪು ಮಾಡಿಕೊಳ್ಳದಿದ್ದರೂ ಟಿಪ್ಪು ತಾತನ ಬಗ್ಗೆ ಮಾತನಾಡುತ್ತಾರೆ.

ಬೆಂಗಳೂರು (ಡಿ.18): ಗ್ರಾಮೀಣ ಭಾಗದ‌ ಜನರಿಗೆ ಮಿಂಚು ಹುಳ ಮರದ ಮೇಲೆ ಬಂದಾಗ ಮಳೆಗಾಲ ಬರುತ್ತೆ‌ ಅಂತ ಅರ್ಥವಾಗುತ್ತದೆ. ರಾಜ್ಯದಲ್ಲಿ ಕೆಲವರು ರಸ್ತೆಗೆ ಬಂದು ಭಾಷಣದಲ್ಲಿ ಕಣ್ಣೀರು ಹಾಕಿದಾಗ ಚುನಾವಣಾ ಕಾಲ ಬಂದಿದೆ ಎನ್ನುವುದು ಗೊತ್ತಾಗುತ್ತದೆ. ಇನ್ನು ಕೆಲವರು ತಮ್ಮ ತಾತನನ್ನು ನೆನಪು ಮಾಡಿಕೊಳ್ಳದಿದ್ದರೂ ಟಿಪ್ಪು ತಾತನ ಬಗ್ಗೆ ಮಾತನಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿಳಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ‌ ಜನರಿಗೆ ಮಿಂಚು ಹುಳ ಮರದ ಮೇಲೆ ಬಂದಾಗ ಮಳೆಗಾಲ ಬರುತ್ತೆ‌ ಅಂತ ಅರ್ಥವಾಗುತ್ತದೆ. ಹೀಗೆ ಕೆಲವರು ರಸ್ತೆಗೆ ಬಂದಾಗ ಚುನಾವಣೆ ಕಾಲ ಬಂದಿದೆ ಅಂತ ಅರ್ಥವಾಗುತ್ತದೆ. ಕೆಲವರು ಈಗಾಗಲೇ ಪಂಚರತ್ನ ಯಾತ್ರೆ ಮಾಡೋಕೆ ಮುಂದಾಗಿದ್ದಾರೆ. ಅವರ ಭಾಷಣ ಆರಂಭವಾಗೋದೇ ಕಣ್ಣೀರಿನಿಂದ. ತಾತ ಮಗನಿಗೆ ತ್ಯಾಗ ಮಾಡುತ್ತಾರೆ. ಮಗ ಹೆಂಡತಿಗೆ ತ್ಯಾಗ ಮಾಡ್ತಾರೆ ಹಾಗೂ ಹೆಂಡತಿ‌ ಮಗನಿಗೆ ತ್ಯಾಗ ಮಾಡ್ತಾರೆ. ಭವಿಷ್ಯದಲ್ಲಿ ಆ‌ ಮಗ ತನ್ನ ಮಗನಿಗೆ ತ್ಯಾಗ ಮಾಡ್ತಾನೆ ಎಂದು ಎಚ್.ಡೊ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ವ್ಯಂಗ್ಯವಾಡಿದರು. 

 

ಸಂಪುಟ ವಿಸ್ತರಣೆಗೆ ಮತ್ತೆ ಸಮಯ ನೀಡ್ತೇನೆಂದ ಅಮಿತ್‌ ಶಾ!

ಬಿಜೆಪಿ ಮಾದರಿಯಲ್ಲಿ ಪಕ್ಷ ಸಂಘಟನೆ ಸಾಧ್ಯವಿಲ್ಲ: ನಮಗೆಲ್ಲಾ ಗೊತ್ತಿದೆ, ಯಡಿಯೂರಪ್ಪ ಮಾತಾಡಿದ್ರೆ ವಿಧಾನಸೌಧ ಗುಡುಗುತ್ತದೆ. ವಿರೋಧ ಪಕ್ಷಗಳು ಕೂಡ ಇದನ್ನೆ ಹೇಳಿವೆ. ಪ್ರಕೋಷ್ಠಗಳ ಸಮಾವೇಶ ಮಾಡ್ತಿರೋದು ಇತಿಹಾಸದಲ್ಲೇ ಇದೇ ಮೊದಲು ಆಗಿದೆ. ಪಕ್ಷದ ಇತಿಹಾಸದಲ್ಲಿ ‌ಇದು ಮೊದಲ ಬಾರಿಗೆ ನಡೆಯುತ್ತಿರುವ ಪ್ರಕೋಷ್ಠಗಳ ಸಮಾವೇಶವಾಗಿದೆ. ಪರೋಕ್ಷವಾಗಿ ಸಿದ್ದರಾಮಯ್ಯಗೆ ತಿವಿದಿದ್ದಾರೆ. ಈ ಹಿಂದೆ ಸಿ.ಟಿ. ರವಿ ಬೂತ್ ಕಮಿಟಿ ಮಾಡೋಕೆ ಹೋದಾಗ ಆ ನಾಯಕರು ಕೇಳಿದ್ದರು. ಅದೇನ್ ಕಮಿಟಿ ಮಾಡ್ತಿರಾ ಅಂತ ಹೇಳಿದ್ದರು. ಅದಾದ ಮೇಲೆ‌ ಮೋರ್ಚಾಗಳು ಬಂದವು. ಈಗ ಪ್ರಕೋಷ್ಠಗಳನ್ನ ಮಾಡಿದ್ದೇವೆ. ಈಗಲೂ ಅವರು ಬಂದು ಕೇಳುತ್ತಾರೆ. ಪ್ರಕೋಷ್ಟ ಅಂದರೆ ಏನು ನಾವು ನಮ್ಮ ಪಾರ್ಟಿಯಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ಹೇಳುಯತ್ತಾರೆ. ಆದರೆ, ಅವರಿಗೆ ಸಾಧ್ಯವೇ ಬಿಜೆಪಿ ಮಾದರಿಯಲ್ಲಿ ಸಂಘಟನೆ ಮಾಡೋಕೆ ಸಾಧ್ಯವಿಲ್ಲ ಎಂದು ಹೇಳಿದರು.

ನೂರು ದಿನದಲ್ಲಿ ಚುನಾವಣೆ ಘೋಷಣೆ: 
ರಾಜ್ಯದಲ್ಲಿ ಮುಂದಿನ 100 ದಿನಗಳಲ್ಲಿ ಚುನಾವಣೆ ಘೋಷಣೆ ಆಗಲಿದೆ. ಅಂದರೆ, ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ಇದೆ. ವಿರೋಧ ಪಕ್ಷದವರು ಬೀದಿಗೆ ಬಂದಿದಾರೆ ಅಂದರೆ ಈಗ ಚುನಾವಣೆ ಆರಂಭವಾಗಿದೆ ಎಂದು ಅರ್ಥವಾಗುತ್ತದೆ. ಕಣ್ಣೀರಿನ ರಾಜಕಾರಣ, ಇದೇ ಕಡೇ ಚುನಾವಣೆ ಅಂತ ಹೇಳೋ ರಾಜಕಾರಣ ಮಾಡ್ಕೊಂಡು ಬರ್ತಿರೋರು ಅವರು. ಕರ್ನಾಟಕದಲ್ಲಿ ಬಾಂಬ್‌ ಬ್ಲಾಸ್ಟ್‌ ಪ್ರಕರಣ ಉಗ್ರರ ಗುರಿಯನ್ನು ತಪ್ಪಿಸಿದೆ. ಅದೇ ರೀತಿ ಈ ಹಿಂದೆ ತಮಿಳುನಾಡಿನಲ್ಲಿ ಈಶ್ವರನ ದೇವಸ್ಥಾನದ ಎದುರು ಆಟೋ ಜಂಪ್ ಆಗಿ, ನಿಗದಿತ ಗುರಿಗಿಂತಲೂ ಮೊದಲೇ ಕುಕ್ಕರ್ ಬ್ಲಾಸ್ಟ್ ಆಯ್ತು. ಇನ್ನು ಕುಕ್ಕರ್‌ ಬಾಂಬ್‌ ಸ್ಪೋಟದ ಬಗ್ಗೆ ಡಿಜಿಪಿ ಅವರು ಉಗ್ರ ಕೃತ್ಯ ಎಂದು ಹೇಳಿದರೆ ಅವರನ್ನು ಪ್ರಶ್ನೆ ಮಾಡ್ತಾರೆ. ಬಾಂಬ್ ಬ್ಲಾಸ್ಟ್ ಬಗ್ಗೆ ಡಿಜಿಪಿಗೆ ಬಿಟ್ರೆ ಇನ್ಯಾರಿಗೆ ಗೊತ್ತಾಗುತ್ತೆ? ಎಂದು ಕಾಂಗ್ರೆಸ್‌ಗೆ ಬಿ.ಎಲ್‌. ಸಂತೋಷ್‌ ತಿರುಗೇಟು ನೀಡಿದರು.

Hubli: ಎಂಇಎಸ್‌ ಪುಂಡರನ್ನು ಹದ್ದುಬಸ್ತಿನಲ್ಲಿಡುವ ತಂತ್ರ ಸಿದ್ಧವಾಗಿದೆ: ಸಿಎಂ ಬೊಮ್ಮಾಯಿ

ಕನ್ನಡದಲ್ಲಿ ಭಾಷಣ ಆರಂಭಿಸಿದ ಕೇಂದ್ರ ‌ಸಚಿವ:  ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಎಲ್ಲರೂ ಹೇಗಿದ್ದೀರಾ? ಚೆನ್ನಾಗಿದ್ದೀರಾ? ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು. ಈ ಬಾರಿ ಶೇ. 100ರಷ್ಟು ಗ್ಯಾರಂಟಿ ರಾಜ್ಯದಲ್ಲಿ‌ ಬಿಜೆಪಿ ಗೆಲ್ಲುತ್ತೆ. ಮತ್ತೊಮ್ಮೆ ಡಬ್ಬಲ್ ಎಂಜಿನ್ ಸರ್ಕಾರ ಚಾಲ್ತಿಗೆ ಬರಲಿದೆ. ಪ್ರಧಾನಿ ಮೋದಿ ದೇಶವನ್ನು ಹಲವಾರು ಆಯಾಮಗಳಲ್ಲಿ‌ ಕಟ್ಟುತ್ತಿದ್ದಾರೆ. ರೈಲ್ವೇ, ಟೆಲಿಕಾಂ, ದೇಶ, ಆಸ್ಪತ್ರೆ ಎಲ್ಲವನ್ನೂ ಕಟ್ಟುತ್ತಿದ್ದಾರೆ. ವಂಚಿತ ವರ್ಗದ ಕುರಿತು ಬಹಳಷ್ಚು ಯೋಚಿಸಿ ಯೋಜನೆಗಳನ್ನು ರೂಪಿಸಿದ್ದಾರೆ. ಯಾವ್ಯಾವ ರಾಜ್ಯದಲ್ಲಿ ಡಬ್ಬಲ್ ಎಂಜಿನ್ ಸರ್ಕಾರ ಇದ್ಯೋ, ಅಲ್ಲೆಲ್ಲಾ ಅಭಿವೃದ್ಧಿ ಹೆಚ್ಚಾಗಿದೆ. ಕೇಂದ್ರದಲ್ಲಿ ಯುಪಿಎ ಅಥವ ಕಾಂಗ್ರೆಸ್ ಸರ್ಕಾರವಿದ್ದಾಗ ಏನು ಸಿಕ್ಕಿತ್ತು ಹೇಳಿ? ಯುಪಿಎ ಸರ್ಕಾರವಿದ್ದಾಗ ಕೇವಲ 838 ಕೋಟಿ ರಾಜ್ಯಕ್ಕೆ ನೀಡುತ್ತಿದ್ದರು. ಆದರೆ, ಪ್ರಧಾನಿ ಮೋದಿ ಅವರು ಪ್ರತಿ ವರ್ಷ ನಮ್ಮ ರಾಜ್ಯಕ್ಕೆ 6091 ಕೋಟಿಯನ್ನು ಕೊಡ್ತಿದ್ದಾರೆ. ಪೂರ್ತಿ ಯುರೋಪ್‌ನಲ್ಲಿ 50 ಕ್ಕಿಂತ ಕಡಿಮೆ ಸ್ಟಾರ್ಟ್ ಅಪ್ ಯೂನಿಕಾರ್ನ್ ಇದೆ. ನಮ್ಮ ಕರ್ನಾಟಕದಲ್ಲಿ 50ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಯೂನಿಕಾರ್ನ್‌ಗಳಿವೆ ಎಂದರು.

click me!