ಶಮನವಾಯ್ತಾ ಆನಂದ್ ಸಿಂಗ್ ಅಸಮಾಧಾನ : ಕೊಠಡಿ ಮುಂದೆ ನಾಮಫಲಕ

By Kannadaprabha News  |  First Published Aug 18, 2021, 1:53 PM IST
  • ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಳಿಕ ಖಾತೆ ಬಗ್ಗೆ ಅಸಮಾಧಾನ ಹೊಂದಿದ್ದ ಸಚಿವ ಆನಂದ್ ಸಿಂಗ್
  •  ವಿಕಾಸಸೌಧ ಕೊಠಡಿ ಬಾಗಿಲಿಗೆ ನಾಮಫಲಕ ಅಳವಡಿಸಿಕೊಂಡ ಸಚಿವ

ಬೆಂಗಳೂರು (ಅ.18): ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಳಿಕ ಖಾತೆ ಬಗ್ಗೆ ಅಸಮಾಧಾನ ಹೊಂದಿದ್ದ ಸಚಿವ ಆನಂದ್ ಸಿಂಗ್ ಇದೀಗ ವಿಕಾಸಸೌಧ ಕೊಠಡಿ ಬಾಗಿಲಿಗೆ ನಾಮಫಲಕ ಅಳವಡಿಸಿಕೊಂಡಿದ್ದಾರೆ.  

ಇದರಿಂದ ತಮ್ಮ ಖಾತೆ ಬಗ್ಗೆ ತೀವ್ರ ಅಸಮಾದಾನ ಹೊಂದಿದ್ದ ಸಚಿವರು ಖಾತೆ ಹಂಚಿಕೆಯಾಗಿ ಬರೋಬ್ಬರಿ 12 ದಿನಗಳ ಬಳಿಕ ಖಾತೆಗಳ ಹೆಸರೊಂದಿಗೆ ತಮ್ಮ ನಾಮಫಲಕ ಹಾಕಿಸಿಕೊಂಡಿದ್ದಾರೆ. 

Tap to resize

Latest Videos

ಖಾತೆ ಕ್ಯಾತೆ: 'ಅಭಿ ಪಿಕ್ಚರ್ ಬಾಕಿ ಹೈ' ಎಂದ ಆನಂದ್ ಸಿಂಗ್

ಆದರೆ ಒಲ್ಲದ ಮನಸಿಂದಲೇ ನಾಮಫಲಕ ಹಾಕಿಸಿಕೊಂಡಿದ್ದಾರೆನ್ನಲಾಗಿದ್ದು, ತಮ್ಮ ಖಾತೆ ಬದಲಾವಣೆಗೆ ಪಟ್ಟು ಮುಂದುವರಿಸಿದ್ದಾರೆ. 

 ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟ ರಚನೆ ಆಗಿ ಹನ್ನೆರಡು ದಿನಗಳು ಕಳೆದರೂ  ಖಾತೆ ಬಗ್ಗೆ ಅಸಮಾಧಾನ ಹೊಂದಿದ್ದ ಆನಂದ್ ಸಿಂಗ್ ವಿಧಾನಸೌಧಕ್ಕೆ ಕಾಲಿಟ್ಟಿರಲಿಲ್ಲ.

 ಒಂದು ಹಂತದಲ್ಲಿ ತಮಗೆ ನೀಡಿದ್ದ ಖಾತೆ ಬದಲಾವಣೆ ಮಾಡಿಕೊಡದೇ ಇದ್ದರೆ ರಾಜೀನಾಮೆ ನೀಡುವುದಾಗಿ ಕೂಡಾ ಹೇಳಿದ್ದರು. ಇದೀಗ ನಾಮಫಲಕ ಹಾಕಿಸಿಕೊಂಡಿದ್ದರಿಂದ ಕೊಂಚವಾದರು ಸಮಾಧಾನವಾದರಾ ಎನ್ನುವ ಪ್ರಶ್ನೆಯೂ ಮೂಡಿದೆ.  

click me!