'ಬಿಜೆಪಿ ಕಲ್ಯಾಣ ಕರ್ನಾಟಕದ ವಿರೋಧಿ, 371 ಅಡಿಯಲ್ಲಿ ನೇಮಕಾತಿಯೂ ಸಹ ಮಾಡ್ತಿಲ್ಲ'

By Suvarna NewsFirst Published Aug 17, 2021, 9:46 PM IST
Highlights

* ರಾಯಚೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ
* ಬಿಜೆಪಿ ವಿರುದ್ಧ   ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಾಗ್ದಾಳಿ
* ಬಿಜೆಪಿ ಕೊಡುಗೆ ಏನೆಂದು ಜನರಿಗೆ ತಿಳಿಸಲಿ ಎಂದು ಸವಾಲು
 

ರಾಯಚೂರು, (ಆ.17): ಬಿಜೆಪಿ ಕಲ್ಯಾಣ ಕರ್ನಾಟಕದ ವಿರೋಧಿ ಪಕ್ಷವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ ವಿಭಾಗ ಮಟ್ಟದ ಸಭೆ ಹಿನ್ನೆಲೆಯಲ್ಲಿ ಇಂದು ಆ.17) ರಾಯಚೂರಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಲ್ಯಾಣ ಕರ್ನಾಟಕದ ವಿರೋಧಿ ಪಕ್ಷವಾಗಿದೆ. ಬಿಜೆಪಿ ಸದಾಕಾಲವೂ ಕಲ್ಯಾಣ ‌ಕರ್ನಾಟಕವನ್ನ ಕಡೆಗಣನೆ‌ ಮಾಡುತ್ತಲೇ ಬಂದಿದೆ. 15 ನೂರು ಕೋಟಿಯಲ್ಲಿ 630 ಕೋಟಿ‌ ಮಾತ್ರ ಬಿಡುಗಡೆ ‌ಮಾಡಿದೆ. ಕೊರೋನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.

ಸಚಿವರು ಸರ್ಕಾರದಲ್ಲಿ ಚೀಯರ್ ಗರ್ಲ್ಸ್ ರೀತಿ ಆಗ್ತಿದ್ದಾರೆ: ಹರಿಪ್ರಸಾದ್ ಕಿಡಿ

ಕೊರೋನಾದಿಂದ ಮೃತರ ಪ್ರಮಾಣ ಪತ್ರ ಸಹ ಸಿಗುತ್ತಿಲ್ಲ. 371(ಜೆ) ವಿಶೇಷ ಸ್ಥಾನಮಾನ ಈ ಪ್ರದೇಶಕ್ಕೆ ನೀಡಿದ್ದಾರೆ. 371(ಜೆ ) ಅಡಿಯಲ್ಲಿ ನೇಮಕಾತಿಯೂ ಸಹ ಮಾಡುತ್ತಿಲ್ಲ. ಕಳೆದ ವರ್ಷದಿಂದ ಬೆಳೆ ವಿಮೆ ಕೂಡ ಸಹ ರೈತರಿಗೆ ಸಿಕ್ಕಿಲ್ಲ. ಯಡಿಯೂರಪ್ಪಗೆ ಮೋದಿ ಅವಮಾನಿಸಿ ಅಧಿಕಾರದಿಂದ ಕೆಳಗೆ ಇಳಿಸಿದ್ದಾರೆ ಎಂದರು.

ಯಡಿಯೂರಪ್ಪ ಏಕೆ ಅಧಿಕಾರದಿಂದ ಇಳಿಸಿದ್ರೂ ಎಂಬುವುದು ಮೋದಿ ಹೇಳಲಿ. ಕೇವಲ ಕರ್ನಾಟಕದಲ್ಲಿ ಮಂತ್ರಿಗಾಗಿ ನಾಯಕರ ಕಿತ್ತಾಟವೇ ನಡೆದಿದೆ. ರಾಜ್ಯದ ಜನರಿಗೆ ಬಿಜೆಪಿ ಕೊಡುಗೆ ಏನು ಎಂಬುವುದು ಹೇಳಲಿ ಎಂದು ಹಾಕಿದರು. 

click me!