ಸರ್ಕಾರ ರಚನೆಯಾಗಿ 24 ಗಂಟೆ ಅವಧಿ ನೀಡಿ ಐದು ಉಚಿತ ಗ್ಯಾರಂಟಿಯನ್ನು ಸರ್ಕಾರ ಘೋಷಣೆ ಮಾಡಿತ್ತು. ಆದರೆ ಅದು ಅನುಷ್ಠಾನವಾಗದೆ ಸರ್ಕಾರಿ ನೌಕರರಿಗೆ ಉಚಿತ ಏಟಿನ ಭಾಗ್ಯ ಸಿಗುತ್ತಾ ಇದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.
ಮಂಗಳೂರು (ಮೇ.28) : ಸರ್ಕಾರ ರಚನೆಯಾಗಿ 24 ಗಂಟೆ ಅವಧಿ ನೀಡಿ ಐದು ಉಚಿತ ಗ್ಯಾರಂಟಿಯನ್ನು ಸರ್ಕಾರ ಘೋಷಣೆ ಮಾಡಿತ್ತು. ಆದರೆ ಅದು ಅನುಷ್ಠಾನವಾಗದೆ ಸರ್ಕಾರಿ ನೌಕರರಿಗೆ ಉಚಿತ ಏಟಿನ ಭಾಗ್ಯ ಸಿಗುತ್ತಾ ಇದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.
ದ.ಕ. ಜಿಲ್ಲೆ(Dakshina kannada)ಯ ಆರು ಮಂದಿ ಬಿಜೆಪಿ ಶಾಸಕರ(BP MLAs) ಜತೆ ಶನಿವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು. ಪರಿಸ್ಥಿತಿ ಒಂದು ತಿಂಗಳಲ್ಲಿ ಸರಿಹೋಗದಿದ್ದರೆ ಜುಲೈನಲ್ಲಿ ಬಿಜೆಪಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕಾರ್ಯಕರ್ತರಿಗೆ ಹೊಡೆಸಿದ್ದು ನಳಿನ್, ಕಲ್ಲಡ್ಕ: ಅಭಯಚಂದ್ರ ಜೈನ್ ಆರೋಪ
ಪ್ರವೀಣ್ ಪತ್ನಿಗೆ ತಕ್ಷಣ ಉದ್ಯೋಗ ನೀಡಿ:
ಪ್ರವೀಣ್ ನೆಟ್ಟಾರು(Praveen net) ಕುಟುಂಬಕ್ಕೆ ಪರಿಹಾರ ನೀಡಿ, ಮನೆ ನಿರ್ಮಿಸಿಕೊಟ್ಟು ನಮ್ಮ ಸರ್ಕಾರ ಪತ್ನಿಗೆ ಉದ್ಯೋಗ ನೀಡಿತ್ತು. ಪ್ರವೀಣ್ ನೆಟ್ಟಾರು ಪತ್ನಿ ಕೆಲಸದ ವಿಚಾರದಲ್ಲಿ ನಮ್ಮ ಸರ್ಕಾರವೇ ಮುಂದೆಯೂ ಬರುತ್ತದೆ ಎಂದು ತಾಂತ್ರಿಕ ಕಾರಣದಿಂದ ಹೊರಗುತ್ತಿಗೆ ಆದೇಶ ಮಾಡಿದ್ದೆವು. ಆದರೆ ಸರ್ಕಾರ ಬದಲಾಗಿದೆ. ಅನುಕಂಪದ ಆಧಾರದಲ್ಲಿ ಕೊಟ್ಟಉದ್ಯೋಗವನ್ನು ಈಗ ತೆಗೆಯಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಅವರಿಗೆ ಮತ್ತೆ ಉದ್ಯೋಗ ನೀಡಬೇಕು. ಒಂದು ವೇಳೆ ನೀವು ಕೊಡದೇ ಇದ್ದರೂ ಎನ್‌ಎಂಪಿಎ ಮುಂತಾದ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಉದ್ಯೋಗ ಕೊಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜಾ, ರಾಜೇಶ್ ನಾೖಕ್, ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಇದ್ದರು.
ಬ್ಯಾನರ್ ಆರೋಪಿಗಳಿಗೆ ಹೊಡೆಯಲು ಬಿಜೆಪಿ ಒತ್ತಡ ಹಾಕಿಲ್ಲ
ಪುತ್ತೂರಿನ ಬಗ್ಗೆ ಅವಲೋಕನ ಸಭೆ ನಡೆಯುತ್ತಿದೆ. ಅದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಅರುಣ್ ಕುಮಾರ್ ಪುತ್ತಿಲ ಬಗ್ಗೆ ಅಪಾರ ಗೌರವ ಇದೆ, ಪ್ರಜಾಪ್ರಭುತ್ವದಲ್ಲಿ ಯಾರೂ ಚುನಾವಣೆಗೆ ನಿಲ್ಲಬಹುದು. ಸಂಘದ ಮತ್ತು ಪಕ್ಷದ ಒಳಗಿನ ಎಲ್ಲವನ್ನೂ ಸರಿ ಮಾಡುತ್ತೇವೆ ಎಂದು ಪುತ್ತಿಲ ಲೋಕಸಭೆಗೆ ಸ್ಪರ್ಧಿಸುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.
ಗ್ಯಾರಂಟಿಗಳನ್ನು ಯಥಾವತ್ತಾಗಿ ನೀಡದಿದ್ರೆ ಬಿಜೆಪಿಯಿಂದ ಹೋರಾಟ: ಕುಯಿಲಾಡಿ
ಪುತ್ತೂರಿನಲ್ಲಿ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ನಾನು ಖಂಡಿಸಿದ್ದೆ, ಮತ್ತೆ ಖಂಡಿಸುತ್ತೇನೆ. ಬಿಜೆಪಿ ವಿರುದ್ಧ ಬ್ಯಾನರ್ ಹಾಕಿದವರ ಮೇಲೆ ಬಿಜೆಪಿ ದೂರು ನೀಡಿಲ್ಲ. ಕಾರ್ಯಕರ್ತರು ತಪ್ಪು ಕಲ್ಪನೆಯಿಂದ ಫೇಸ್‌ಬುಕ್‌ನಲ್ಲಿ ಹಾಕಿರಬಹುದು. ನಾವು ಈ ಬಗ್ಗೆ ಪೊಲೀಸರಿಗೆ ಒತ್ತಡ ಹಾಕಿಲ್ಲ ಎಂದರು.