ಉತ್ತರ ಕನ್ನಡ ಜಿಲ್ಲೆಯ ಜನರ ಬಹುದಿನಗಳ ಕನಸಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ತೀರಾ ಅಗತ್ಯವಾಗಿದ್ದು, ಇದಕ್ಕೆ ಮೊದಲ ಆದ್ಯತೆ ನೀಡುತ್ತೇನೆಂದು ನೂತನ ಸಚಿವ ಮಂಕಾಳ ವೈದ್ಯ ಹೇಳಿದರು.
ಭಟ್ಕಳ (ಮೇ.28): ಉತ್ತರ ಕನ್ನಡ ಜಿಲ್ಲೆಯ ಜನರ ಬಹುದಿನಗಳ ಕನಸಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ತೀರಾ ಅಗತ್ಯವಾಗಿದ್ದು, ಇದಕ್ಕೆ ಮೊದಲ ಆದ್ಯತೆ ನೀಡುತ್ತೇನೆಂದು ನೂತನ ಸಚಿವ ಮಂಕಾಳ ವೈದ್ಯ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಕನ್ನಡ ಜಿಲ್ಲೆಗೆ ನಾವು ಈ ಹಿಂದೆ ಕಾಂಗ್ರೆಸ್ಸಿನ ಐದು ಮಂದಿ ಶಾಸಕರಿದ್ದ ಸಂದರ್ಭದಲ್ಲಿ ಆರ್.ವಿ. ದೇಶಪಾಂಡೆಯವರ ಸಹಕಾರದಿಂದ ಮೆಡಿಕಲ್ ಕಾಲೇಜನ್ನೇ ಸರ್ಕಾರದಿಂದ ಮಂಜೂರು ಮಾಡಿಸಿದ್ದೇವೆ. ಮೆಡಿಕಲ್ ಕಾಲೇಜು ಮಂಜೂರಿಸಿಕೊಂಡು ಬಂದವರಿಗೆ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡಿಸುವುದು ಕಷ್ಟದ ಕೆಲಸವೇನೂ ಅಲ್ಲ.
ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತೀರಾ ಅಗತ್ಯವಾಗಿದ್ದು, ಅದು ಎಲ್ಲಿ ಮಾಡಬೇಕೆನ್ನುವುದರ ಬಗ್ಗೆ ಸದ್ಯದಲ್ಲೇ ತೀರ್ಮಾನಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಜಿಲ್ಲೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಕೂಗು ಕೇಳಿ ಬಂದಾಗ ಆಸ್ಪತ್ರೆಯನ್ನು ಸರ್ಕಾರ ಮಾಡದಿದ್ದರೆ ನಾನೇ ಆಸ್ಪತ್ರೆ ಮಾಡುತ್ತೇನೆಂದು ಹೇಳಿದ್ದೇನೆ. ಇದೀಗ ನಮ್ಮ ಸರ್ಕಾರವೇ ಆಡಳಿತಕ್ಕೆ ಬಂದಿದ್ದು ಜನರ ಅತೀ ಅಗತ್ಯವಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮಾಡಿಯೇ ಮಾಡುತ್ತೇನೆಂದು ಹೇಳಿದರು.
undefined
ಅಭಿವೃದ್ಧಿ ಬಿಟ್ಟು ಹಿಂದೂ ಧರ್ಮ ವಿರೋಧಿಸುವ ಹೊಸ ಸರ್ಕಾರ: ಆರಗ ಜ್ಞಾನೇಂದ್ರ
ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವುದೇ ನನ್ನ ಧ್ಯೇಯ: ರಾಜ್ಯದ ಕಟ್ಟಕಡೆಯ ಬಡಜನರಿಗೂ ನ್ಯಾಯ ಒದಗಿಸುವುದರ ಜೊತೆಗೆ ಎಲ್ಲರಿಗೂ ಶಿಕ್ಷಣ ಲಭಿಸಬೇಕು ಎನ್ನುವುದು ನನ್ನ ಆಶಯ ಎಂದು ನೂತನ ಸಚಿವ ಮಂಕಾಳ ವೈದ್ಯ ಹೇಳಿದರು. ರಾಜಧಾನಿಯಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರ ಪ್ರೀತಿ, ವಿಶ್ವಾಸ ಗಳಿಸಿ ನಾನು ಕೆಲಸ ಮಾಡುತ್ತೇನೆ. ಜಿಲ್ಲೆಯ ಹಿರಿಯರಾದ ಆರ್.ವಿ. ದೇಶಪಾಂಡೆ ಸೇರಿದಂತೆ ಎಲ್ಲ ಶಾಸಕರ ಸಹಕಾರದಿಂದ ನಾನು ಸಚಿವನಾಗಿದ್ದೇನೆ. ನಾನು ಸಚಿವನಾಗಲು ಎಲ್ಲರ ಸಹಕಾರ ಇದೆ. ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ.
ಹಿರಿಯರಾದ ಆರ್.ವಿ. ದೇಶಪಾಂಡೆಯವರ ಮಾರ್ಗದರ್ಶನದಲ್ಲೇ ನಾನು ಕಾರ್ಯನಿರ್ವಹಿಸುತ್ತೇನೆ. ಜಿಲ್ಲೆಯ ಆರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟುಬಲಿಷ್ಠಗೊಳಿಸಲು ಸಹಕರಿಸುತ್ತೇನೆ. ನಾನು ಈ ಹಿಂದೆ ಶಾಸಕನಾಗಿದ್ದ ಸಂದರ್ಭದಲ್ಲಿ ಮಾಡಿದ ಕೆಲಸ ಮತ್ತು ಸಹಾಯ ಸಹಕಾರವೇ ನಾನು ಮತ್ತೊಮ್ಮೆ ದಾಖಲೆ ಮತಗಳಿಂದ ಗೆಲ್ಲಲು ಸಾಧ್ಯವಾಗಿದೆ ಎಂದರು. ನಾನು ಕಳೆದ ಬಾರಿ ಚುನಾವಣೆಯಲ್ಲಿ ಸೋತರೂ ಸಹ ಕ್ಷೇತ್ರದ ಮತದಾರರಿಂದ ದೂರ ಹೋಗದೇ ಅವರ ಜೊತೆಗಿರುವುದೇ ನಾನು ಈ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾಗಲು ಸಾಧ್ಯವಾಗಿದೆ. ನನ್ನ ಕುಟುಂಬದವರೂ ಸಹ ನನಗೆ ರಾಜಕಾರಣವನ್ನು ಸಾಮಾನ್ಯರ ಜೊತೆಗೆ ಮಾಡಿ ಅವರಿಗೆ ನೆರವಾಗಿ ಎಂದು ಹೇಳುತ್ತಾರೆ.
ಸೊರಬ ಕ್ಷೇತ್ರದಲ್ಲಿ ಸಚಿವ ಮಧು ಬಂಗಾರಪ್ಪಗೆ ಹೆಜ್ಜೆ ಹೆಜ್ಜೆಗೂ ಸವಾಲು!
ಅದರಂತೆ ನಾನು ಸಾಮಾನ್ಯ ಜನರ ಜೊತೆ ರಾಜಕಾರಣ ಮಾಡುವುದರ ಮೂಲಕ ನೆರವಾಗುತ್ತಿದ್ದೇನೆ. ಕ್ಷೇತ್ರದಲ್ಲಿ ನಾನು ಮಾಡಿಸಿದ ಅಭಿವೃದ್ಧಿ ಕೆಲಸವನ್ನು ಜನರು ಸದಾ ನೆನಪಿನಲ್ಲಿಟ್ಟುಕೊಳ್ಳುವ ರೀತಿಯಲ್ಲಿ ಮಾಡುತ್ತೇನೆ. ನಾನಿಲ್ಲದಿದ್ದರೂ ಸಹ ಜನತೆ ನನ್ನ ಅಭಿವೃದ್ಧಿ ಕಾರ್ಯವನ್ನು ಸ್ಮರಿಸಬೇಕು. ಆ ರೀತಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತೇನೆಂದ ಅವರು, ನಾನು ಮಂತ್ರಿಗಿರಿ ಪಡೆಯಲು ಯಾವುದೇ ಲಾಬಿ ಮಾಡಿಲ್ಲ. ಮಂತ್ರಿ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬಂದ ತಕ್ಷಣ ಹಿರಿಯರು, ಮಾರ್ಗದರ್ಶಕರೂ ಆದ ಆರ್.ವಿ. ದೇಶಪಾಂಡೆಯವರಿಗೆ ದೂರವಾಣಿ ಮೂಲಕ ತಿಳಿಸಿ ಅವರ ಆಶೀರ್ವಾದ ಪಡೆದಿದ್ದೇನೆ. ಹೈಕಮಾಂಡ್‌ಗೆ ಇಂತಹದ್ದೇ ಖಾತೆ ಬೇಕು ಎಂದು ಡಿಮ್ಯಾಂಡ್ ಮಾಡಿಲ್ಲ ಎಂದ ಅವರು. ನನಗೆ ಸಚಿವ ಸ್ಥಾನ ಸಿಕ್ಕಿರುವುದರಿಂದ ಜಿಲ್ಲೆ ಮತ್ತು ನನ್ನ ಕ್ಷೇತ್ರದ ಬಡವರ ಕೆಲಸ ಮಾಡಲು ಅನುಕೂಲವಾಗಿದೆ ಎಂದರು.