Karnataka Politics: ಸಿದ್ದರಾಮಯ್ಯ ನರಹಂತಕ ಹುಲಿ: ನಳೀನ್‌ ಕುಮಾರ್‌ ಕಟೀಲ್‌ ಟೀಕೆ

By Govindaraj S  |  First Published Apr 14, 2022, 2:37 PM IST

ರಾಜ್ಯದ ನರಹಂತಕ ಹುಲಿ ಇದ್ದರೆ ಅದು ಸಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದರು. ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಮೈಸೂರು ವಿಭಾಗ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.


ಮೈಸೂರು (ಏ.14): ರಾಜ್ಯದ ನರಹಂತಕ ಹುಲಿ ಇದ್ದರೆ ಅದು ಸಿದ್ದರಾಮಯ್ಯ (Siddaramaiah) ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ (Nalin Kumar Kateel) ವ್ಯಂಗ್ಯವಾಡಿದರು. ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ (BJP) ಮೈಸೂರು ವಿಭಾಗ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಆಡಳಿತ ಮಹಿಷಾಸುರನ ಆಡಳಿತ. ರಾಜು, ಕುಟ್ಟಪ್ಪ, ಶರತ್‌ ಹತ್ಯೆಯಾದಾಗ ಸಿದ್ದರಾಮಯ್ಯ ಯಾರ ಮನೆಗೂ ಹೋಗಲಿಲ್ಲ. 24 ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು. ಆದರೂ ಯಾರಿಗೂ ಪರಿಹಾರ ನೀಡಲಿಲ್ಲ. ಸಿದ್ದರಾಮಯ್ಯ ಆಡಳಿತದಲ್ಲಿ ಮೂರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು.

 ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿದ್ದರು. ಸೋನಿಯಾ, ರಾಹುಲ್‌, ವಾದ್ರಾ, ಡಿ.ಕೆ. ಶಿವಕುಮಾರ್‌ ಜಾಮೀನಿನ ಮೇಲೆ ಇದ್ದಾರೆ. ಅವರೇನು ಸ್ವಾತಂತ್ರ್ಯ ಹೋರಾಟಗಾರರು ಅಂತ ಜಾಮೀನಿನ ಮೇಲೆ ಇದ್ದಾರೆಯೇ? ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನಲ್ಲಿ ಪರಿವಾರದ ಕಲ್ಪನೆ ಇಲ್ಲ ಬರೀ ಕುಟುಂಬದ ಚಿಂತನೆ ಅಡಗಿದೆ. ಕಲ್ಯಾಣ ಕರ್ನಾಟಕ ಮಾಡಿದವರು ನಾವು. ಈಗ ಪರಿವರ್ತನೆ ಯುಗ ಆರಂಭವಾಗಿದೆ. ನೀವು ನೀಡಿರುವ ಅನುದಾನಕ್ಕೆ ಶ್ವೇತ ಪತ್ರ ತನ್ನಿ. ನಿಮ್ಮೊಂದಿಗೆ ಬಹಿರಂಗ ಚರ್ಚೆಗೆ ನಾವು ಸಿದ್ದರಿದ್ದೇವೆ. ಕಾಂಗ್ರೆಸ್‌ ಮನೆ ಖಾಲಿ ಆಗುತ್ತಿದ್ದು, ಬಿಜೆಪಿ ಮನೆ ತುಂಬುತ್ತಿದೆ. ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿಯೇ ಕಿತ್ತಾಟ ಆರಂಭವಾಗಿದೆ ಎಂದು ಅವರು ದೂರಿದರು.

Latest Videos

undefined

Karanataka Politics: ರಾಜ್ಯದಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವ ವಿಶ್ವಾಸವಿದೆ: ನಳಿನ್‌ ಕುಮಾರ್‌ ಕಟೀಲ್‌

ಚಾಮುಂಡೇಶ್ವರಿ ದೇವಿಯ ಆಶೀರ್ವಾದ, ವರುಣನ ವರ ಮೈಸೂರು ನಗರದಿಂದ ನಾವು ಸಭೆ ಮತ್ತು ಸಂಘಟನೆಯನ್ನು ಆರಂಭಿಸಿದ್ದೇವೆ. 150ಕ್ಕೂ ಹೆಚ್ಚು ಸ್ಥಾನಗಳಿಸುವುದು ಮೈಸೂರು ನಗರದಿಂದ ಆರಂಭವಾಗಲಿದೆ. ಅತಿ ಹೆಚ್ಚಿನ ಅನುದಾನವನ್ನು ತಂದ ಖ್ಯಾತಿಗೆ ಸಂಸದ ಪ್ರತಾಪಸಿಂಹ ಪಾತ್ರರಾಗಿದ್ದಾರೆ. ಅತಿ ಹೆಚ್ಚು ರಾಷ್ಟ್ರೀಯ ಹೆದ್ದಾರಿ, ಯೋಜನೆಗಳನ್ನು ತಂದಿದ್ದಾರೆ. ಮೈಸೂರು ಬಹಳ ಸುಂದರವಾದ ನಗರ, ಚಾಮುಂಡೇಶ್ವರಿ ಆಶೀರ್ವಾದದಿಂದ ಬೆಳೆದಿರುವ ಮತ್ತು ರಾಜರ ಕಾಲದಲ್ಲಿ ಆಳ್ವಿಕೆಯ ಅಭಿವೃದ್ಧಿ ಹೊಂದಿದ ನಗರ ಎಂದರು.

ಒಡೆಯರ್‌ ಅವರನ್ನು ನಿಂದಿಸಿದ ಮತ್ತು ಏಕವಚನದಲ್ಲಿ ಮಾತನಾಡಿದ ಮಹಿಷಾಸುರನನ್ನು ಚುನಾವಣೆಯಲ್ಲಿ ಓಡಿಸಿ. ಜಿಲ್ಲೆಯ ಹನ್ನೊಂದು ಸ್ಥಾನಗಳಲ್ಲಿ ಹತ್ತು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಸಂಕಲ್ಪ ಮಾಡಿದ್ದಾರೆ. ಸರ್ವ ವ್ಯಾಪಿ, ಸರ್ವ ಶ್ರೇಷ್ಠಿಯಾಗಿ ಮಾಡಿದೆ. ಪೇಜ್‌ ಕಮಿಟಿ, ವಿಸ್ತಾರ್‌ ಕಮಿಟಿ ಯಶಸ್ವಿಯಾಗಿದೆ. ಪೇಜ್‌ ಕಮಿಟಿಗೆ ಆರು ಸದಸ್ಯರನ್ನು ನಿಯೋಜಿಸಲಾಗಿದೆ. ನೇಪಾಳದಲ್ಲಿ ಹೆಣ್ಣು ಮಗುವಿಗೆ ಜನನವಾದರೆ ಭಾರತಿ ಅಂತ ಹೆಸರಿಟ್ಟರು. ದೇಶದಲ್ಲಿ ಈಗ ಪರಿವರ್ತನೆ ಯುಗ ಪ್ರಾರಂಭವಾಗಿದೆ. ಉಕ್ರೇನ್‌ ನಿಂದ ನಮ್ಮ ಮಗಳನ್ನು ಸುರಕ್ಷಿತವಾಗಿ ಕರೆತಂದಿದ್ದರಿಂದ ಮಂಗಳೂರಿನ ಒಂದು ವಿದ್ಯಾರ್ಥಿ ಮನೆಯಲ್ಲಿ ಮೋದಿ ಅವರ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಲಾಗಿತ್ತು. ಜಗತ್ತು ಭಾರತದ ಕಡೆಗೆ ನೋಡುತ್ತಿದೆ. ಧೈರ್ಯ ಮತ್ತು ಶಕ್ತಿಯುತವಾಗಿ ಭಾರತ ನಿಂತಿದೆ ಎಂದರು.

Karnataka Politics: ಹೊರಟ್ಟಿ ಬಿಜೆಪಿ ಸೇರ್ಪಡೆ: ಬೊಮ್ಮಾಯಿ, ಕಟೀಲ್‌ ಹೆಗಲಿಗೆ ಹಾಕಿದ ಜೋಶಿ

ಸ್ವಾತಂತ್ರ್ಯ ನಂತರದ ದಿನಗಳಲ್ಲಿ ದೇಶವ್ಯಾಪಿ ಕರೆ ಕೊಟ್ಟರೆ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ನಂತರ ಪ್ರಧಾನಿ ನರೇಂದ್ರ ಮೋದಿ ಕರೆಗೆ ಸ್ಪಂದಿಸಿದರು. ಕೋವಿಡ್‌ ಸಮಯದಲ್ಲಿ ಕಾಂಗ್ರೆಸ್‌ ತನ್ನ ಚಾಳಿ ಬಿಡದೆ ಅಪಹಾಸ್ಯ ಮಾಡಿದರು. ಅಮೇಲೆ ಕೋವಿಡ್‌ ಬಂದ ಮೇಲೆ ಓಡಿ ಹೋದರು. ಒಂದೇ ಒಂದು ವೆಂಟಿಲೇಟರ್‌ ಕೊಡಲಿಲ್ಲ. ಆಸ್ಪತ್ರೆಗಳನ್ನು ತೆರೆಯುವಂತೆ ಮಾಡಿದರು. ಲಸಿಕೆ ಬಂದಾಗ ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಅನೇಕರು ಟೀಕೆ ಮಾಡಿದರು. ಮಲೇರಿಯಾ ಬಂದಾಗ ಲಸಿಕೆ ಕಂಡುಹಿಡಿಯಲು 60 ವರ್ಷ ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ ಕದ್ದು ಮುಚ್ಚಿ ಲಸಿಕೆ ಪಡೆದುಕೊಂಡರು. ಹಗಲು ಹೊತ್ತು ಟೀಕಿಸಿ, ರಾತ್ರಿ ಹೊತ್ತು ಕಾಲು ಹಿಡಿಯುತ್ತಾರೆ ಎಂದು ಅವರು ಟೀಕಿಸಿದರು.

click me!