Karnataka Politics: ಬಿಜೆಪಿಯಲ್ಲಿ ಶಕ್ತಿ ಇದ್ದರೂ ಬಳಕೆ ಮಾಡುತ್ತಿಲ್ಲ: ಜಗದೀಶ್‌ ಶೆಟ್ಟರ್‌

By Govindaraj S  |  First Published Apr 14, 2022, 1:13 PM IST

ಬಿಜೆಪಿಯಲ್ಲಿ ಶಕ್ತಿ ಇದ್ದರೂ ಬಳಕೆ ಮಾಡುತ್ತಿಲ್ಲ. ಆದ್ದರಿಂದ ಹೆಚ್ಚಿನ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಬೇಕು. ರಾಜ್ಯದಲ್ಲಿ 150 ಸ್ಥಾನ ಗೆಲ್ಲುವ ಜೊತೆಗೆ 2024ಕ್ಕೆ ಕೇಂದ್ರದಲ್ಲಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಕರೆ ನೀಡಿದರು.


ಮೈಸೂರು (ಏ.14): ಬಿಜೆಪಿಯಲ್ಲಿ (BJP) ಶಕ್ತಿ ಇದ್ದರೂ ಬಳಕೆ ಮಾಡುತ್ತಿಲ್ಲ. ಆದ್ದರಿಂದ ಹೆಚ್ಚಿನ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಬೇಕು. ರಾಜ್ಯದಲ್ಲಿ 150 ಸ್ಥಾನ ಗೆಲ್ಲುವ ಜೊತೆಗೆ 2024ಕ್ಕೆ ಕೇಂದ್ರದಲ್ಲಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ (Jagadish Shettar) ಕರೆ ನೀಡಿದರು. ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಬಿಜೆಪಿ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷಕ್ಕೆ ಶಕ್ತಿ ಇದ್ದರೂ ಬಳಕೆ ಮಾಡುತ್ತಿಲ್ಲ. ಹಾಗಾಗಿ ಹೆಚ್ಚಿನ ಶಾಸಕರನ್ನು ಆರಿಸಿ ಕಳುಹಿಸಬೇಕು. 150 ಸ್ಥಾನಗಳನ್ನು ಗೆಲ್ಲಬೇಕು. 2023ಕ್ಕೆ ರಾಜ್ಯದಲ್ಲಿ, 2024ರಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ಎಂದರು.

ಚುನಾವಣೆಗೆ ಒಂದು ವರ್ಷ ಇರುವ ಮುನ್ನವೇ ಪ್ರವಾಸ ಆರಂಭಿಸಲಾಗಿದೆ. ಮೂರು ತಿಂಗಳು ಇರುವ ಮೊದಲು ಶುರುಮಾಡಲಾಗುತ್ತಿತ್ತು. ಯಾವುದೇ ರಾಜಕೀಯ ಪಕ್ಷದಲ್ಲಿ ಕ್ಷೇತ್ರವಾರು ಸಭೆಗಳನ್ನು ನಡೆಸಿ ಪಕ್ಷದ ಸಂಘಟನೆ ಜೊತೆ ಚರ್ಚೆ ಮಾಡಿಲ್ಲ. ಬೇರೆ ಪಕ್ಷ ಮತ್ತು ನಮಗೂ ವ್ಯತ್ಯಾಸ ಇದೆ. ಬಿಜೆಪಿಗೆ ದೊಡ್ಡ ಪಕ್ಷ. ಮೈಸೂರು ಭಾಗದಲ್ಲಿ ಪ್ರಾಬಲ್ಯ ಇಲ್ಲವೆನ್ನುವ ಭಾವನೆ ಅಳಿಸಿಹಾಕಬೇಕು. 1967ರಲ್ಲಿ ಆಯ್ಕೆಯಾಗಿದ್ದ ನಾಲ್ವರು ಶಾಸಕರಲ್ಲಿ ಮೈಸೂರಿನವರೂ ಒಬ್ಬರಾಗಿದ್ದಾಗಿ ಅವರು ಹೇಳಿದರು. ನರೇಂದ್ರ ಮೋದಿ ನಾಯಕತ್ವ ಬಲಾಢ್ಯವಾಗಿದೆ. 7 ವರ್ಷಗಳ ಕಾಲದಿಂದ ಸಣ್ಣ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸುತ್ತಿದ್ದಾರೆ. ಉಕ್ರೇನ್‌- ರಷ್ಯಾದ ನಡುವಿನ ಯುದ್ದದಲ್ಲಿ ಭಾರತ ತಟಸ್ಥ ನಿಲುವು ತಾಳಿ ತನ್ನ ಗಟ್ಟಿತನ ಪ್ರದರ್ಶಿಸಿದೆ. 

Latest Videos

undefined

ಪಾಕಿಸ್ತಾನದ ಪ್ರಧಾನಮಂತ್ರಿ ಅಧಿಕಾರದಿಂದ ಕೆಳಗಿಳಿಯುವಾಗ ಭಾರತದ ನೀತಿಯನ್ನು ಹೊಗಳಿದ್ದಾರೆ.  ಜಗತ್ತಿನಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಬಿಜೆಪಿ ಆಗಿದೆ. ಅತಿ ಹೆಚ್ಚು ಲೋಕಸಭಾ ಸದಸ್ಯರು, ಶಾಸಕರನ್ನು ಹೊಂದಿರುವ ಪಕ್ಷ ಬಿಜೆಪಿ. ಮುಂದೆ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಂತೆ ಮಾಡಬೇಕು. ಕಾಂಗ್ರೆಸ್‌ (Congress) ಮತ್ತು ಜೆಡಿಎಸ್‌ಗೆ (JDS) ಹೆದರಿ ಕೂರಬಾರದು ಎಂದರು. ಕಾಂಗ್ರೆಸ್‌ ಪಕ್ಷವನ್ನು ಸಿದ್ದರಾಮಯ್ಯ ಹಾಳು ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅವನತಿಗೆ ಸಿದ್ದರಾಮಯ್ಯ ಕಾರಣವಾಗುತ್ತಾರೆ. ಈಗಾಗಲೇ ಒಳಗೊಳಗೆ ಶುರುವಾಗಿರುವ ಆಂತರಿಕ ಯುದ್ದ ಮೂರ್ನಾಲ್ಕು ತಿಂಗಳಲ್ಲಿ ಜೋರಾಗಲಿದೆ ಎಂದು ಅವರು ಹೇಳಿದರು.

Karnataka Politics: 'ಕಾಂಗ್ರೆಸ್ಸಿಗೆ ಪಂಜಾಬಲ್ಲಿ ಸಿಧು ರೀತಿ ಸಿದ್ದು ಮುಳುವು'

ಸಂಸದ ಪ್ರತಾಪ್‌ ಸಿಂಹ (Pratap Simha) ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ನೀಡಿದೆ. ವಿಮಾನ ನಿಲ್ದಾಣ ವಿಸ್ತರಣೆಗೆ . 175 ಕೋಟಿ ನೀಡಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾವು ಪ್ರಬಲರು, ಬೇರೆ ಯಾರಾದರೂ ಶಕ್ತಿ ಹೊಂದಿದ್ದೇವೆ ಎನ್ನುವ ಭ್ರಮೆ ಇದ್ದರೆ ಬಿಡಬೇಕು. ಯಾರಿಗೂ ನಾವು ತಲೆಬಾಗಬೇಕಾಗಿಲ್ಲ. ನಾವು ನಮ್ಮ ಶಕ್ತಿ ಏನುಂಬದನ್ನು ತೋರಿಸುವ ಕಾಲ ಬಂದಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಮಾತನಾಡಿ, ಪಕ್ಷದ ಆದೇಶವನ್ನು ನೂರಕ್ಕೆ ನೂರರಷ್ಟುಅನುಷ್ಠಾನಕ್ಕೆ ತರಲಾಗುತ್ತಿದೆ. ಬಹಳ ಚಟುವಟಿಕೆ ಮಾಡಲಾಗುತ್ತಿದೆ. ವ್ಯವಸ್ಥಿತವಾಗಿ ಪರಿಶೀಲನೆ ಮಾಡಿ ಸಮಗ್ರ ಚಿತ್ರಣ ಪಡೆಯಲಾಗಿದೆ. ವಿಮಾನ ನಿಲ್ದಾಣ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಒಪ್ಪಿಕೊಂಡು . 330 ಕೋಟಿ ಮಂಜೂರು ಮಾಡಲು ಒಪ್ಪಿದ್ದಾರೆ. . 378 ಕೋಟಿ ಅನುದಾನವನ್ನು ಎಂಡಿಎಗೆ ಬಿಡುಗಡೆ ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದರು.

ಗುಂಪು ಮನೆ ನಿರ್ಮಿಸಲು ಯೋಜನೆ ರೂಪಿಸಿ ಒಪ್ಪಿಗೆ ಪಡೆಯಲಾಗಿದೆ. ಎಂಡಿಎ ನಿರ್ಮಿತ ಬಡಾವಣೆಗಳಿಗೆ ಕಬಿನಿ ನೀರು ಒದಗಿಸಲು ಅನುಮೋದನೆ ನೀಡಲಾಗಿದೆ. ಕಂದಾಯ ದಾಖಲೆಗಳು ಮನೆಗೆ ತಲುಪಿಸುವಂತಹ ಯೋಜನೆ ಜಾರಿಗೆ ತರುವ ಮೂಲಕ ಅನುಕೂಲ ಕಲ್ಪಿಸಲಾಗಿದೆ. ಹದಿನೈದು ಹಾಲು ಸಹಕಾರ ಸಂಘಗಳಿಗೆ ಅನುಕೂಲ ಕಲ್ಪಿಸಲು ನಂದಿನಿ ಕ್ಷೀರ ಸಂವೃದ್ಧಿ ಭಾಗ್ಯ ತೆರೆಯಲು ಪ್ರಕಟಿಸಲಾಗಿದೆ. . 28,018 ಕೋಟಿ ಹಣವನ್ನು 33 ಲಕ್ಷ ರೈತರಿಗೆ 24,000 ಸಾವಿರ ಸಾಲ ಕೊಡಲಾಗುವುದು ಎಂದರು. ವಿಧಾನ ಪರಿಷತ್‌ ಚುನಾವಣೆಯಲ್ಲಿ ಶತಾಯಗತಾಯ ಮೈ.ವಿ. ರವಿಶಂಕರ್‌ ಅವರನ್ನು ಗೆಲ್ಲಿಸಲು ಕೆಲಸ ಮಾಡಬೇಕು. 100ಕ್ಕೆ ನೂರರಷ್ಟುಗೆಲ್ಲಲು ಬೇಕಾದ ತಂತ್ರಗಳನ್ನು ಮಾಡೋಣ ಎಂದು ಅವರು ಹೇಳಿದರು.

ಸಚಿವ ವಿ. ಸೋಮಣ್ಣ ಮಾತನಾಡಿ, ಸರ್ಕಾರ ನಿಂತ ನೀರಲ್ಲ. ಹರಿಯುವ ನೀರು ಇದ್ದಂತೆ. ಮಲೆ ಮಹದೇಶ್ವರ ಬೆಟ್ಟ, ಚಾಮುಂಡಿ ಬೆಟ್ಟದ ಜೀರ್ಣೋದ್ಧಾರ ಮಾಡಲಾಗಿದೆ. ಅಭಿವೃದ್ಧಿ ಕೆಲಸ ಮಾಡಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ 15 ರಿಂದ 20 ಸೀಟುಗಳನ್ನು ಗೆಲ್ಲಬೇಕಿದೆ. ಮಲೆ ಮಹದೇಶ್ವರ ಬೆಟ್ಟಪ್ರಾಧಿಕಾರ ಮಾಡಿದಾಗ . 20 ಕೋಟಿ ಇದ್ದ ಆದಾಯ . 120 ಕೋಟಿ ಆಗಿದೆ. ಅಂದು ಕಾಂಗ್ರೆಸ್‌ ನಾಯಕರು ವಿರೋಧ ಮಾಡಿದ್ದರು. ಆದರೆ ಇಂದು ಪ್ರಸಾದದ ವ್ಯವಸ್ಥೆ ಹೇಗಿದೆ ಎಂಬುದನ್ನು ನೋಡಬೇಕು ಎಂದು ಅವರು ತಿರುಗೇಟು ನೀಡಿದರು. ಎಲ್ಲರ ಮನಸ್ಸನ್ನು ಗೆದ್ದಿರುವ ಮುಖ್ಯಮಂತ್ರಿ ಸಾಕಷ್ಟುಯೋಜನೆಗಳನ್ನು ನೀಡಿದ್ದಾರೆ. 

ಹೀಗಿದ್ದರೂ ಚುನಾವಣೆ ಬಂದಾಗ ನಿರೀಕ್ಷಿತ ಫಲಿತಾಂಶ ಬಾರದೆ ಹಿನ್ನೆಡೆ ಅನುಭವಿಸುತ್ತಿದ್ದೇವೆ. ಹಾಗಾಗಿ, ಚುನಾವಣೆಯಲ್ಲಿ ಯಾವ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು, ಹೇಗೆ ಗೆಲ್ಲಬೇಕು ಎನ್ನುವುದನ್ನು ಗಮನಿಸಿ ನಮ್ಮಲ್ಲಿರುವ ಸಣ್ಣಪುಟ್ಟಭಿನ್ನಾಭಿಪ್ರಾಯ ಮರೆತು ನೂರಕ್ಕೆ ನೂರರಷ್ಟು ಮೈಸೂರು ಭಾಗದಲ್ಲಿ ಗೆಲ್ಲಬೇಕು ಎಂದು ಅವರು ಹೇಳಿದರು. ಶಾಸಕ ಬಿ. ಹರ್ಷವರ್ಧನ್‌ ಮಾತನಾಡಿ, ಮೂರು ವರ್ಷಗಳ ಆಡಳಿತದಲ್ಲಿ ಎರಡು ವರ್ಷ ಕೊರೋನಾ ಸಂಕಟದಲ್ಲಿ . 550 ಕೋಟಿ ನೀಡಲಾಗಿದೆ. ಬೆಳ್ಳಿಹಬ್ಬ ಮತ್ತು ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಸಂದರ್ಭದಲ್ಲಿ ಹಲವು ಕೆಲಸ ಮಾಡಲಾಗಿದೆ. ನಂಜನಗೂಡು ನಗರಸಭೆ, ಹದಿನೇಳು ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತರು ಆಡಳಿತ ಹಿಡಿದಿದ್ದಾರೆ. ನಾಯಕರನ್ನು ಮಾಡುವುದು ಕಾರ್ಯಕರ್ತರು, ಹಾಗಾಗಿ ಕಾರ್ಯಕರ್ತರು ಕೆಲಸ ಮಾಡುವುದು ಮತ್ತು ಅವರ ನಂಬಿಕೆಗೆ ಧಕ್ಕೆ ಇಲ್ಲದಂತೆ ಕೆಲಸ ಮಾಡಲಾಗುವುದು ಎಂದರು.

ವೇದಿಕೆ ಮೇಲೆಯೇ ಜಗದೀಶ್‌ ಶೆಟ್ಟರ್‌ ಅಸಮಾಧಾನ: ಸ್ಥಳದಲ್ಲೇ ಬಗೆಹರಿಸಿದ ಬೊಮ್ಮಾಯಿ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಸಚಿವರಾದ ಎಸ್‌.ಟಿ. ಸೋಮಶೇಖರ್‌, ವಿ. ಸೋಮಣ್ಣ, ಶಾಸಕ ಎಲ್. ನಾಗೇಂದ್ರ, ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್‌ ಕುಮಾರ್‌, ಎಂ. ರಾಜೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್‌. ರವಿಕುಮಾರ್‌, ಸಿದ್ದರಾಜು, ಉಸ್ತುವಾರಿ ತುಳಸಿ ಮುನಿರಾಜುಗೌಡ, ವಿಭಾಗೀಯ ಪ್ರಭಾರಿ ಮೈ.ವಿ. ರವಿಶಂಕರ್‌, ಮಾಜಿ ಶಾಸಕರಾದ ಸಿ.ಎಚ್‌. ವಿಜಯಶಂಕರ್‌, ಸಿ. ರಮೇಶ್‌, ಜಿ.ಎನ್‌. ನಂಜುಂಡಸ್ವಾಮಿ, ಎಚ್‌.ಸಿ. ಬಸವರಾಜು, ಡಾ.ಎನ್‌.ಎಲ್‌. ಭಾರತೀಶಂಕರ್‌, ನಿಗಮ- ಮಂಡಳಿ ಅಧ್ಯಕ್ಷರಾದ ಎಚ್‌.ವಿ. ರಾಜೀವ್, ಎಸ್‌. ಮಹದೇವಯ್ಯ, ಎಲ್.ಆರ್‌. ಮಹದೇವಸ್ವಾಮಿ, ಎನ್‌.ವಿ. ಫಣೀಶ್‌, ಎನ್‌.ಆರ್‌. ಕೃಷ್ಣಪ್ಪಗೌಡ, ಎ. ಹೇಮಂತ್‌ಕುಮಾರ್‌ಗೌಡ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ ಮೊದಲಾದವರು ಇದ್ದರು.

click me!