ರಾಹುಲ್‌ ಗಾಂಧಿ ಕಾಲಿಟ್ಟ ಕಡೆಯಲ್ಲ ಕಾಂಗ್ರೆಸ್‌ಗೆ ಸೋಲು: ನಳಿನ್‌ ಕುಮಾರ್‌ ಕಟೀಲ್‌

By Girish GoudarFirst Published Oct 30, 2022, 2:58 PM IST
Highlights

ಗಾಂಧಿ ಕುಟುಂಬದ ಹೆಸರಿನಲ್ಲಿ ಕಾಂಗ್ರೆಸ್‌ ಬದುಕಿತ್ತು. ಆದರೆ, ಇದೀಗ ಪರಿವರ್ತನೆ ಯುಗ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ನಾಯಕರಾಗಿದ್ದಾರೆ ಎಂದ ಕಟೀಲ್‌  

ಗುಂಡ್ಲುಪೇಟೆ(ಅ.30): ರಾಹುಲ್‌ ಗಾಂಧಿ ಕಾಲಿಟ್ಟ ಕಡೆಯಲ್ಲೆಲ್ಲ ಕಾಂಗ್ರೆಸ್‌ ಸೋತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗುಂಡ್ಲುಪೇಟೇಲಿ ಕಾಂಗ್ರೆಸ್‌ ಸೋಲುತ್ತೆ, ಬಿಜೆಪಿ ಗೆಲ್ಲುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದರು. ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ಗಾಂಧಿ ಕುಟುಂಬದ ಹೆಸರಿನಲ್ಲಿ ಕಾಂಗ್ರೆಸ್‌ ಬದುಕಿತ್ತು. ಆದರೆ, ಇದೀಗ ಪರಿವರ್ತನೆ ಯುಗ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ನಾಯಕರಾಗಿದ್ದಾರೆ ಎಂದರು.

ಚಾ.ನಗರ, ಕಾಂಗ್ರೆಸ್‌ಗೆ ಶಾಪಗ್ರಸ್ಥ ಜಿಲ್ಲೆ:

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆ ಶಾಪಗ್ರಸ್ತ ಜಿಲ್ಲೆಯಲ್ಲ ಎಂದು ಬಿಜೆಪಿ ವಿಮೋಚನೆ ಮಾಡಿದೆ. ಕಾಂಗ್ರೆಸ್‌ಗೆ ಮಾತ್ರ ಚಾಮರಾಜನಗರ ಶಾಪಗ್ರಸ್ತ ಜಿಲ್ಲೆಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಟೀಕಿಸಿದರು.

ಬಿಜೆಪಿ 150 ಸ್ಥಾನ ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ

ಅಂಬೇಡ್ಕರ್‌ ಭವನದಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯ ಸಮಾರಂಭ ಉದ್ಘಾಟಿಸಿ, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು. ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡಬೇಕು ಎಂಬುದು ಬಿಜೆಪಿಯ ಗುರಿ. ಬಿಜೆಪಿಯ ಗುರಿ ಅಧಿಕಾರ ಹಿಡಿಯುವುದಲ್ಲ, ಬದಲಾಗಿ ಬಲಿಷ್ಠ ಹಾಗೂ ಶ್ರೇಷ್ಠ ಭಾರತ ನಿರ್ಮಾಣ ಬಿಜೆಪಿ ಸಂಕಲ್ಪ ಎಂದರು. ದೇಶದಲ್ಲಿ ಕಾಂಗ್ರೆಸ್‌ ಮನೆ ಖಾಲಿಯಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದರು.

ಕಾಂಗ್ರೆಸ್‌ ಬ್ರಹ್ಮಾಂಡ ಭ್ರಷ್ಟಚಾರದ ಪಿತಾಮಹ ಗಾಳಿ, ನೀರಿನ ಹೆಸರಿನಲ್ಲೂ ಭ್ರಷ್ಟಾಚಾರ ಮಾಡಿದೆ. ಭ್ರಷ್ಟಚಾರದ ಕಾರಣದಿಂದಲೇ ಡಿ.ಕೆ.ಶಿವಕುಮಾರ್‌ ಜೈಲಿಗೆ ಹೋದರು ಎಂದು ಟೀಕಿಸಿದರು.

ಕ್ಷೇತ್ರ ಹುಡುಕಾಟ?:

ಜೋಡೋ ಯಾತ್ರೆ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟದ ಯಾತ್ರೆ ಮಾಡುತ್ತಿದ್ದಾರೆ. ಭಾರತ್‌ ಜೋಡೋ ಅಲ್ಲ, ಓಡೋ ಯಾತ್ರೆ. ಹಿಂದೆ ಕಾಂಗ್ರೆಸ್‌ನಲ್ಲಿ ಯಾರೇ ನಿಂತರೂ ಕಾಂಗ್ರೆಸ್‌ ಗೆಲ್ಲುತ್ತದೆ ಎನ್ನುತ್ತಿದ್ದರು. ರಾಹುಲ್‌ ಗಾಂಧಿ ನಿಂತರು ಸೋಲುತ್ತಾರೆ ಎಂದು ವ್ಯಂಗವಾಡಿದರು. ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್‌ ತೆಂಗಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಸುಂದರ್‌ ಮಾತನಾಡಿದರು.

ಸಿದ್ದರಾಮಯ್ಯ ಖಳನಾಯಕ, ನರಹಂತಕ: ನಳಿನ್‌ಕುಮಾರ್‌ ಕಟೀಲ್‌ ಟೀಕೆ

ಸಭೆಯಲ್ಲಿ ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ವಿಧಾನ ಪರಿಷತ್‌ ಮಾಜಿ ಸದಸ್ಯ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಪುರಸಭೆ ಅಧ್ಯಕ್ಷ ಪಿ.ಗಿರೀಶ್‌, ಮಂಡಲ ಅಧ್ಯಕ್ಷ ಡಿ.ಪಿ.ಜಗದೀಶ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಾರಾಯಣ ಪ್ರಸಾದ್‌,ನಾಗಶ್ರೀಪ್ರತಾಪ್‌, ರಾಜ್ಯ ಎಸ್ಟಿಮೋರ್ಚ ಉಪಾಧ್ಯಕ್ಷ ಎನ್‌.ಮಲ್ಲೇಶ್‌ ಹಾಜರಿದ್ದರು.

ಸುನೀಲ್‌, ಮನು ಗೈರು: 

ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ ಉಪಾಧ್ಯಕ್ಷ ಎಂ.ಪಿ.ಸುನೀಲ್‌, ಜಿಲ್ಲಾ ಬಿಜೆಪಿ ಮಾಜಿ ವಕ್ತಾರ ಮನುಶ್ಯಾನ್‌ ಭೋಗ್‌ ಮತ್ತವರ ಬೆಂಬಲಿಗರು ಸಭೆಗೆ ಗೈರು ಹಾಜರಾಗಿದ್ದರು.
 

click me!