ಚಾಮರಾಜನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗಶ್ರೀ ಬಂಡಾಯ ಶಮನವಾಗಿದೆ. ಟಿಕೆಟ್ ಕೈತಪ್ಪಿರುವುದಕ್ಕೆ ಅಸಮಾಧಾನಗೊಂಡಿದ್ದ ನಾಗಶ್ರೀ ಅವರನ್ನು ಸೋಮಣ್ಣ ಅವರ ಪತ್ನಿ ಮುಖಂಡರ ಜತೆ ಸಭೆ ನಡೆಸಿದರು.
ಚಾಮರಾಜನಗರ (ಏ.16): ಚಾಮರಾಜನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗಶ್ರೀ ಬಂಡಾಯ ಶಮನವಾಗಿದೆ. ಟಿಕೆಟ್ ಕೈತಪ್ಪಿರುವುದಕ್ಕೆ ಅಸಮಾಧಾನಗೊಂಡಿದ್ದ ನಾಗಶ್ರೀ ಕಣ್ಣೀರು ಹಾಕಿದ್ದರು. ಸೋಮಣ್ಣಗೆ ಟಿಕೆಟ್ ಕೊಟ್ಟ ನಂತರ ಬೆಂಬಲಿಗರ ಸಭೆ ನಡೆಸಿ ಎರಡು ದಿನ ಸಮಯ ಕೇಳಿದ್ದ ನಾಗಶ್ರೀ ಪ್ರತಾಪ್ ಸದ್ಯ ತಮ್ಮ ಬಂಡಾಯದಿಂದ ಹಿಂದಕ್ಕೆ ಸರಿದಿದ್ದು, ಪಕ್ಷಕ್ಕಾಗಿ ದುಡಿಯಲು ನಿರ್ಧಾರ ಮಾಡಿದ್ದಾರೆ. ಸೋಮಣ್ಣ ಅವರ ಪತ್ನಿ ಶೈಲಜಾ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರು ಕರೆದು ಮಾತನಾಡಿದ ಹಿನ್ನೆಲೆಯಲ್ಲಿ ಪಕ್ಷದ ಗೆಲುವಿಗೆ ದುಡಿಯಲು ನಿರ್ಧಾರ ಮಾಡಿದ್ದಾರೆ.
ಪಕ್ಷದ ಹಿರಿಯ ಮುಖಂಡರು ಭರವಸೆ ನೀಡಿರುವ ಕಾರಣ ಸೋಮಣ್ಣ ಗೆಲುವಿಗೆ ದುಡಿಯುವ ನಿರ್ಧಾರ ಮಾಡಿದ್ದು, ಬಿಜೆಪಿ ಪಕ್ಷಕ್ಕೆ ಹಾಗೂ ಸೋಮಣ್ಣ ಪರ ಕೆಲಸ ಮಾಡ್ತೇನೆ. ಅಭಿಮಾನಿಗಳು, ಬೆಂಬಲಿಗರು ಕೂಡ ಪಕ್ಷದ ಗೆಲುವಿಗಾಗಿ ಶ್ರಮಿಸುವಂತೆ ಮನವಿ ಮಾಡಿದ್ದಾರೆ. ನಾಗಶ್ರೀ ಮನೆಯಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಘೋಷಣೆ ಮಾಡಿದ್ದಾರೆ.
undefined
ಕೈ ತಪ್ಪಿದ ಬಿಜೆಪಿ ಚನ್ನಗಿರಿ ಟಿಕೆಟ್, ಪಕ್ಷೇತರವಾಗಿ ಸ್ಪರ್ಧಿಸುವ ಘೊಷಣೆ ಮಾಡಿದ ಮಾಡಾಳ್!
ಮತ್ತೊಬ್ಬ ಟಿಕೆಟ್ ವಂಚಿತ ಸೋಮಣ್ಣಗೆ ಬೆಂಬಲ:
ನಾಗಶ್ರೀ ಪ್ರತಾಪ್ ಬಳಿಕ ಮತ್ತೊಬ್ಬ ಟಿಕೆಟ್ ವಂಚಿತ ಡಾ.ಎ.ಆರ್. ಬಾಬು ಅವರಿಂದಲೂ ವಿ.ಸೋಮಣ್ಣಗೆ ಬೆಂಬಲ ಘೋಷಣೆಯಾಗಿದೆ. ಚಾಮರಾಜನಗರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಡಾ.ಎ.ಆರ್. ಬಾಬು ಅವರು ನನಗೆ ಟಿಕೆಟ್ ಸಿಗುವ ಸಂಭವ ಇತ್ತು. ಆದರೆ ಪಕ್ಷ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ. ವರಿಷ್ಠರ ನಿರ್ಧಾರ ಸ್ವಾಗತಿಸುತ್ತೇನೆ. ಪಕ್ಷದ ನಿಲುವಿಗೆ ಬದ್ಧನಾಗಿ ಅವರ ಪರ ಕೆಲಸ ಮಾಡ್ತೀನಿ. ನನ್ನನ್ನು ಸೇರಿಂದಂತೆ ಯಾರೂ ಸಹ ಪಕ್ಷ ಅಥವಾ ದೇಶಕ್ಕಿಂತ ದೊಡ್ಡವರಲ್ಲ. ಬಿಜೆಪಿಯ ಒಬ್ಬ ಸಕ್ರಿಯ ಕಾರ್ಯಕರ್ತನಾಗಿ ಪಕ್ಷದ ಅಭ್ಯರ್ಥಿ ಪರ ದುಡಿಯುವೆ ಎಂದು ಡಾ.ಎ.ಆರ್. ಬಾಬು ಹೇಳಿಕೆ ನೀಡಿದ್ದಾರೆ.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರೋದು ಪಕ್ಕಾ ಎಂದ ಶಾಮನೂರು ಶಿವಶಂಕರಪ್ಪ!
ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.