ರಾಜ್ಯಸಭಾ ಸದಸ್ಯ ಆಫರ್‌ ತಿರಸ್ಕರಿಸಿ, ಎಂಎಲ್‌ಎ ಟಿಕೆಟ್‌ ಕೇಳಿದೆ: ಜಗದೀಶ್‌ ಶೆಟ್ಟರ್

By Sathish Kumar KH  |  First Published Apr 16, 2023, 4:50 PM IST

ಬಿಜೆಪಿಯಿಂದ ಟಿಕೆಟ್ ಕೊಡದೇ ನನಗೆ ರಾಜ್ಯಸಭಾ ಸದಸ್ಯ ಸ್ಥಾನದ ಆಫರ್ ಕೊಟ್ಟಿದ್ದರು. ಹೈಕಮಾಡ್ ಸಲಹೆಗೆ ನಾನು ಒಪ್ಪಿಲ್ಲ. ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ.


ಹುಬ್ಬಳ್ಳಿ (ಏ.16): ಬಿಜೆಪಿಯಿಂದ ಟಿಕೆಟ್ ಕೊಡದೇ ನನಗೆ ರಾಜ್ಯಸಭಾ ಸದಸ್ಯ ಸ್ಥಾನದ ಆಫರ್ ಕೊಟ್ಟಿದ್ದರು. ಹೈಕಮಾಡ್ ಸಲಹೆಗೆ ನಾನು ಒಪ್ಪಿಲ್ಲ. ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಬೆಂಗಳೂರಿನಲ್ಲಿಯೂ ಕೆಲವರ ಜೊತೆ ಮಾತನಾಡಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ತಿಳಿಸಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ನಾನು ಈಗ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಮುಂದಿನ ನಿರ್ಧಾರದ ಬಗ್ಗೆ ಬೆಂಗಳೂರಿಗೆ ಹೋಗಿ ಕೆಲವರೊಂದಿಗೆ ಚರ್ಚೆ ನಡೆಸಿ ನಂತರ ತೀರ್ಮಾನ ಕೈಗೊಳ್ಳುತ್ತೇನೆ. ಇಲ್ಲಿ ಎಂ.ಎಲ್.ಎ. ಟಿಕೆಟ್ ವಿಚಾರ ಸಣ್ಣ ವಿಷಯವಾಗಿದ್ದು, ಅದೊಂದನ್ನೇ ನಾನು ಕೇಳುತ್ತಿದ್ದೇನೆ. ಅದಕ್ಕೂ ಹೈಕಮಾಂಡ್ ಸ್ಪಂದಿಸಿಲ್ಲ. ಹೀಗಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಇನ್ನು ಪಕ್ಷ ಬಿಡದಂತೆ ಮನವೊಲಿಸಿದ ಅವರು ನನಗೆ ರಾಜ್ಯಸಭಾ ಸದಸ್ಯ ಸ್ಥಾನದ ಆಫರ್ ಕೊಟ್ಟಿದ್ದರು. ಆದರೆ ನಾನು ಹೈಕಮಾಡ್ ಸಲಹೆಗೆ ಒಪ್ಪಿಲ್ಲ ಎಂದು ಹೇಳಿದರು.

Latest Videos

undefined

ಶೆಟ್ಟರ್‌ ಬಳಿಕ ಈ ಇಬ್ಬರೂ ನಾಯಕರಿಗೆ ಬಿಜೆಪಿ ಟಿಕೆಟ್‌ ಸಿಗೋದು ಡೌಟು?

ಪಕ್ಷದ ಸ್ಥಾನಮಾನಕ್ಕೆ ತಕ್ಕಂತೆ ಕೆಲಸ ಮಾಡಿದ್ದೇನೆ: ಪಕ್ಷ ಸ್ಥಾನಮಾನ ಕೊಟ್ಟಿದೆ. ಅದಕ್ಕೆ ತಕ್ಕಂತೆ ನಾನೂ ಕೆಲಸ ಮಾಡಿದ್ದೇನೆ. ಪಕ್ಷ ಕೊಟ್ಟ ಗೌರವಕ್ಕೆ ಪ್ರತಿಯಾಗಿ ನಾನೂ ಪಕ್ಷ ಕಟ್ಟಿದ್ದೇನೆ. ಯಡಿಯೂರಪ್ಪ ಅವರನ್ನು ಕೇಳುತ್ತೇನೆ. ಪಕ್ಷ ಒಡೆದು ಕೆ.ಜೆ.ಪಿ ಕಟ್ಟಿದರು. ನನಗೇನು ಅಪಮಾನ ಆಗಿದೆ ಅನ್ನೋದನ್ನ ಅವರಿಗೂ ಹೇಳಿದ್ದೇನೆ. ಇನ್ನು ಕಾಂಗ್ರೆಸ್ ನಾಯಕರು ಹೆಲಿಕ್ಯಾಪ್ಟರ್ ಕಳಿಸಿಕೊಟ್ಟಿದ್ದಾರೆ ಎಂಬ ವಿಚಾರದ ಕುರಿತು ಮಾತನಾಡಿದ ಅವರು, ನಮ್ಮ ಬೀಗರ ಹೆಲಿಕಾಪ್ಟರ್‌ನಲ್ಲಿ ಹೋಗುತ್ತೇನೆ ಎಂದು ಹೇಳಿದ್ದಾರೆ.

ಪಾಲಿಕೆ ಸದಸ್ಯರನ್ನು ತುಂಬಾ ದಿನ ಹಿಡಿದಿಡೋಕೆ ಆಗೊಲ್ಲ: ಪ್ರಹ್ಲಾದ್‌ ಜೋಶಿ ನೇತೃತ್ವದಲ್ಲಿ ಸಭೆಯನ್ನು ನಡೆಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರು ರಾಜಿನಾಮೆ ನೀಡದಂತೆ ಒತ್ತಡ ಹೇರಲಾಗುತ್ತಿದೆ. ಆದರೆ, ಬಹಳ ದಿನ ಪಾಲಿಕೆ ಸದಸ್ಯರನ್ನು ಒತ್ತಡಿದಂದ ಹಿಡಿದಿಡಲು ಸಾಧ್ಯವಿಲ್ಲ. ಇನ್ನು ಎಲ್ಲೆಡೆ ಒತ್ತಡದ ತಂತ್ರ ರಾಜಕಾರಣದಲ್ಲಿ ಮಾಮೂಲು. ಆದರೆ, ನಮ್ಮ ಬೆಂಬಲಿಗರು ನಮ್ಮ ಜೊತೆಗೆ ಇರ್ತಾರೆ ಎಂದು ಹೇಳಿದರು.

ಬೆಂಗಳೂರತ್ತ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ: ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಶೆಟ್ಟರ್: ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಹುಬ್ಬಳ್ಳಿ ನಿವಾಸದಿಂದ ವಿಮಾನ ನಿಲ್ದಾಣದತ್ತ ಪ್ರಯಾ.ಣ ಬೆಳೆಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬೆಂಗಳೂರಿಗೆ ಆಗಮಿಸಿ ಕೆಲವು ಪ್ರಮುಖ ನಾಯಕರೊಂದಿಗೆ ಚರ್ಚೆ ಮಾಡಲಿದ್ದಾರೆ. ಇನ್ನು ಜಗದೀಶ್‌ ಶೆಟ್ಟರ್‌ಗೆ ತವನಪ್ಪ ಅಷ್ಟಗಿ ಸೇರಿ ಹಲವು ಮುಖಂಡರು ಸಾಥ್ ನೀಡಿದರು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಸಿದ್ದರಾಮಯ್ಯ ಆಪ್ತ ಗದಿಗೆಪ್ಪಗೌಡರ್, ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಸ್ವಾಗತಿಸಿದರು. ನಂತರ, ಜಗದೀಶ್ ಶೆಟ್ಟರ್ ಅವರೊಂದಿಗೆ ಮೂವರೂ ಕಾಂಗ್ರೆಸ್‌ ನಾಯಕರು ಬೆಂಗಳೂರಿಗೆ ಆಗಮಿಸಲಿದ್ದಾರೆ. 

ಕಟ್ಟಿದ ಮನೆಯಿಂದ ಹೊರಹೋಗಲು ದುಃಖವಾಗ್ತಿದೆ: ಜಗದೀಶ ಶೆಟ್ಟರ್ ಭಾವುಕ ಮಾತು

ಕಟ್ಟಿದ ಮನೆಯಿಂದ ಹೊರಬರಲು ಸಂಕಟ: ನಾನೇ ಕಟ್ಟಿದ ಮನೆಯಿಂದ ಹೊರಹೋಗುವಂತಹ ಪರಿಸ್ಥಿತಿ ಬಂದಿದೆ. ಇದು ನನಗೆ ತುಂಬಾ ದುಃಖವಾಗುತ್ತಿದೆ ಎಂದು ಭಾವನಾತ್ಮಕವಾಗಿ ನುಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ನನ್ನ ವಿರುದ್ಧ ಯಾರಾರ‍ಯರು ಷಡ್ಯಂತ್ರ ಮಾಡಿದರು. ಏನೆಲ್ಲ ಮಾಡಿದರು ಎಂಬುದನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜನರ ಮುಂದಿಡುವೆ ಎಂದು ತಿಳಿಸಿದ್ದಾರೆ ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ವಿಶ್ವದಲ್ಲೇ ಎತ್ತರದ ಸ್ಥಾನಕ್ಕೆ ಒಯ್ಯುತ್ತಿದ್ದರೆ, ಅವರಿಗೆ ಗೊತ್ತಿಲ್ಲದೇ ಕೆಲವರು ಸ್ವಹಿತಕ್ಕಾಗಿ ಪಕ್ಷವನ್ನು ಬಲಿಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.  ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!