ನಮ್ದು ಬಿಜೆಪಿ- ಜೆಡಿಎಸ್ ಅಲ್ಲ, ಎಲ್ಲಾ ಹೈಕಮಾಂಡ್‌ಗೆ ಬಿಟ್ಟದ್ದು: ಸಚಿವ ಚಲುವರಾಯಸ್ವಾಮಿ ಹೇಳಿದ್ದೇನು?

Published : Nov 07, 2025, 10:51 PM IST
N Chaluvarayaswamy

ಸಾರಾಂಶ

ನವೆಂಬರ್‌ ಕ್ರಾಂತಿ ಚರ್ಚೆ ಜೋರಾಗಿದೆ. ಆದರೆ, ಯಾವ ಕ್ರಾಂತಿಯೂ ಇಲ್ಲ. ಏನೂ ಇಲ್ಲ. ಎಲ್ಲಾ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಂ ಮೇಲೆ ಡಿಪೆಂಡ್ ಎಂದು ಸಚಿವ ಚಲುವರಾಯಸ್ವಾಮಿ ನವೆಂಬರ್ ಕ್ರಾಂತಿಯನ್ನ ತಳ್ಳಿ ಹಾಕಿದ್ದಾರೆ.

ಚಿಕ್ಕಮಗಳೂರು (ನ.07): ರಾಜ್ಯ ರಾಜಕೀಯ ವಲಯದಲ್ಲಿ ನವೆಂಬರ್‌ ಕ್ರಾಂತಿ ಚರ್ಚೆ ಜೋರಾಗಿದೆ. ಆದರೆ, ಯಾವ ಕ್ರಾಂತಿಯೂ ಇಲ್ಲ. ಏನೂ ಇಲ್ಲ. ಎಲ್ಲಾ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಂ ಮೇಲೆ ಡಿಪೆಂಡ್ ಎಂದು ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ನವೆಂಬರ್ ಕ್ರಾಂತಿಯನ್ನ ತಳ್ಳಿ ಹಾಕಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಆಂತರಿಕ ಬಿಕ್ಕಟ್ಟು ಅಥವಾ ನಾಯಕತ್ವ ಬದಲಾವಣೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದು ಬಿಜೆಪಿ - ಜೆಡಿಎಸ್ ಅಲ್ಲ. ಕಾಂಗ್ರೆಸ್ ಪಕ್ಷ. ನಮ್ಮಲ್ಲಿ ಹೈಕಮಾಂಡ್ ಆದೇಶವೇ ಅಂತಿಮ. ಇಲ್ಲಿ ಯಾವುದೇ ಅನಗತ್ಯ ಚರ್ಚೆಗೆ ಆಸ್ಪದವಿಲ್ಲ ಎಂದು ಹೇಳುವ ಮೂಲಕ ಪ್ರತಿಪಕ್ಷ ಹಾಗೂ ಸ್ವಪಕ್ಷೀಯರಿಗೂ ತಿರುಗೇಟು ನೀಡಿದರು.

ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಉತ್ತಮ ಅನ್ಯೋನ್ಯತೆ ಇದೆ. ನಾಯಕತ್ವ ಬದಲಾವಣೆ ಅಥವಾ ಖಾತೆ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಗಳು ಊಹಾಪೋಹ ಮಾತ್ರ ಎಂದರು. ನಮ್ಮ ಪಕ್ಷದಲ್ಲಿ ಏನೇ ತೀರ್ಮಾನವಿದ್ದರೂ ಅದನ್ನು ಹೈಕಮಾಂಡ್ ಮಾಡುತ್ತದೆ. ಯಾವಾಗ, ಏನು ತೀರ್ಮಾನ ಮಾಡಬೇಕು ಎಂಬುದು ಹೈಕಮಾಂಡ್‌ಗೆ ಬಿಟ್ಟ ವಿಷಯ. ಅಂತಿಮವಾಗಿ, ಏನಾಗುತ್ತೆ, ಏನು ಬಿಡುತ್ತೆ, ಮಂತ್ರಿ, ಖಾತೆ ಬದಲಾವಣೆ ಮಾಡ್ತಾರಾ ಎಂಬ ಬಗ್ಗೆ ಕೆಪಿಸಿಸಿ ಅಧ್ಯಕ್ಷರು, ಸಿಎಂ, ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಅದನ್ನ ಬಿಟ್ಟು ಬೇರೆ ಯಾವ ಕ್ರಾಂತಿಯೂ ಇಲ್ಲ ಎಂದರು.

ದರ ನಿಗದಿ ಕೇಂದ್ರದ ಕೆಲಸ: ಕಬ್ಬಿನ ದರ ಪರಿಷ್ಕರಣೆ ಮಾಡುವುದು ಕೇಂದ್ರ ಸರ್ಕಾರ, ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ ಆದಾಗ ಪೆಟ್ರೋಲ್ ಗೆ ಒಂದು ಲಕ್ಷ ಕೋಟಿ ಸಬ್ಸಿಡಿ ಕೊಟ್ಟಿದ್ದರು. ರೈತರ ಸಾಲ ಮನ್ನಾ ಮಾಡಲು ಆದೇಶ ಕೊಟ್ಟಿದ್ದರು. ಇವರು ಮಾಡಲು ಬೇಕಾ ದಷ್ಟು ಅವಕಾಶವಿದೆ. ಕರ್ನಾಟಕ, ಮಹಾರಾಷ್ಟ್ರದಲ್ಲಿ ಕಬ್ಬು ಬೆಳೆಯುವ ರೈತರಿದ್ದಾರೆ ರೇಟ್ ಫಿಕ್ಸ್ ಮಾಡುವುದನ್ನ ನಿರ್ಧಾರ ಮಾಡಲಿ, ಬೇರೆ ಏನೂ ಮಾಡಲಿಕ್ಕೆ ಸಾಧ್ಯ ಅನ್ನೋದನ್ನ ಎಚ್.ಕೆ.ಪಾಟೀಲ್ ಚರ್ಚೆ ಮಾಡಿ ಬಂದಿದ್ದಾರೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ ಯಾವುದು ಆಗಲ್ಲ, ಗೊಬ್ಬರಕ್ಕೂ ಭಾಗಿಯಾಗಿದ್ರು ಕೊನೆಗೆ ಎಕ್ಸ್ ಪೋಸ್ ಅದ್ರು ಅಸೆಂಬ್ಲಿಯಲ್ಲಿ ಒಂದು ಗಂಟೆ ಉತ್ತರ ಕೊಟ್ಟೆ. ಸಪ್ಲೈ ಮಾಡೋರು ಅವ್ರು, ಇಂಪೋರ್ಟ್ ಮಾಡೋರು ಅವ್ರು, ರೇಟ್ ಫಿಕ್ಸ್ ಮಾಡೋರು ಅವ್ರು, ಗೊತ್ತಿದ್ದು, ಗೊತ್ತಿಲ್ಲದೆ ವಿರೋಧ ಪಕ್ಷ ಅಂದಾಗ ಎಲ್ಲದಕ್ಕೂ ಹೋಗಬೇಕು ಯಾರದ್ದು ಜವಾಬ್ದಾರಿ, ಯಾರು ಏನೂ ಮಾಡಬೇಕು. ತಿಳಿದೋ ತಿಳಿಯದೋ ಅವ್ರು, ಅಶೋಕ್ ಕುಸ್ತಿಗೆ ಬಿದ್ದು ಬಿಡ್ತಾರೆ ಅವ್ರಿಗೆ ನಾನು ಏನೂ ಹೇಳೋದು, ಅವರಿಗೆ ಅನುಭವ ಇಲ್ಲದಿದ್ರು ತಂದೆ ಬಳಿ ಅನುಭವ ತೆಗೆದುಕೊಳ್ಳಬೇಕಲ್ಲ. ಈಗ ಆಶೋಕ್ ಗೆ ಅನುಭವ ಇಲ್ಲ ಅಂತಾ ಹೇಳೊಕಾಗುತ್ತಾ ಎಂದರು.

ಎಚ್‌ಡಿಕೆ ವಿರುದ್ಧ ವಾಗ್ದಾಳಿ

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಚಲುವರಾಯಸ್ವಾಮಿ ಮೊದಲು ಅವರು ನಾಲಿಗೆ ಸರಿಯಾಗಿ ಇಟ್ಟು ಕೊಳ್ಳಲಿ. ಹೇಗೆ ಸಂಬಳ ಕೊಡುತ್ತೇನೆ ಎಂದರು, ಸಿಎಸ್.ಆರ್.ಫಂಡ್ ನಲ್ಲಿ ₹15 ಕೋಟಿ ಡಿಪಾಜಿಟ್ ಮಾಡ್ತೀನಿ ಅಂತ ನಾನಾ ಹೇಳಿದ್ದು, ಅವರು ಯಾರ ಹತ್ತಿರ ಮಾತಾಡ್ತಾರೆ, ಇಡೀ ರಾಷ್ಟ್ರದಲ್ಲಿ ಕಮಿಷನ್ ತೆಗೆದುಕೊಳ್ಳುತ್ತಾರಾ, ಎಷ್ಟು ಫ್ಯಾಕ್ಟರಿ ಹತ್ತಿರ ಅವರು ಕಮಿಷನ್ ತೆಗೆದುಕೊಂಡಿದ್ದಾರೆ. ಎದುರಿಗೆ ಬಂದು ಮಾತನಾಡಲು ಹೇಳಿ, ಯಾರೋ ಸಿಕ್ಕಾಗ ಹೇಳಿ ಹಿಟ್ ಅಂಡ್ ರನ್ ಮಾಡುವುದಲ್ಲ ಎಂದರು.

ನಾನು ಅವರ ಜೊತೆಯೇ ಇದ್ದವನು, ನನಗೆ ಗೊತ್ತಿಲ್ವಾ ಏನೇನು ಮಾಡಿದ್ದಾರೆಂದು, ರಾಜಕಾರಣದಲ್ಲಿ ಎಲ್ಲರೂ ಗಾಜಿನ ಮನೆಯಲ್ಲಿ ಇದ್ದೇವೆ, ಕಲ್ಲು ಹೊಡೆಯುವುದು ಏಕೆಂದು ಹೇಳಲ್ಲ ಅಷ್ಟೆ, ದೇವೇಗೌಡರು ಹೇಳ್ತಿದ್ರು, ಅವರ ಬಳಿ ಕಲಿತಿದ್ದೇನೆ, ದೇವೇಗೌಡರ ಮಗ ಎಂದು ಸುಮ್ಮನಿದ್ದೇನೆ. ಅವರು ಹೇಳಲು ಹತ್ತು ಇದ್ದರೆ ನನ್ನ ಬಳಿ ಸಾವಿರ ಇದೆ. ಮಾತನಾಡಬಾರದು ಮಾತಾಡಲ್ಲ. ಅವರಿಗೆ ಸುಮ್ಮನೆ ಕೆಲಸ ನೋಡುವುದಕ್ಕೆ ಹೇಳಿ, ₹25 ಕೋಟಿ ಕೊಡುತ್ತೇನೆ ಎಂದು ಯಾವ ನಾಲಿಗೆಯಲ್ಲಿ ಹೇಳಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ