ಸಾರಾ ಮಹೇಶ್‌ಗೆ ಕಾನೂನು ಸಂಕಷ್ಟ, ದೂರುದಾರ ಜೆಡಿಎಸ್ MLAಗೆಯೇ ಜಾಮೀನು ರಹಿತ ವಾರಂಟ್

Published : Oct 04, 2021, 04:53 PM IST
ಸಾರಾ ಮಹೇಶ್‌ಗೆ ಕಾನೂನು ಸಂಕಷ್ಟ, ದೂರುದಾರ  ಜೆಡಿಎಸ್ MLAಗೆಯೇ ಜಾಮೀನು ರಹಿತ ವಾರಂಟ್

ಸಾರಾಂಶ

* ಜೆಡಿಎಸ್ ಶಾಸಕ ಸಾ.ರಾ.ಮಹೇಶ್​ಗೆ ಕಾನೂನು ಸಂಕಷ್ಟ * ಸಾ.ರಾ.ಮಹೇಶ್​ಗೆ  8ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಸಮನ್ಸ್  * ಅಕ್ಟೋಬರ್ 27ರಂದು ನಡೆಯುವ ವಿಚಾರಣೆಗೆ ಸೂಚನೆ

ಮೈಸೂರು, (ಅ.04): ಜೆಡಿಎಸ್ ಶಾಸಕ ಸಾ.ರಾ.ಮಹೇಶ್​ಗೆ ಕಾನೂನು ಸಂಕಷ್ಟ ಎದುರಾಗಿದ್ದು ಮೈಸೂರಿನ (Mysuru) 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್​ಸಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ಹುಣಸೂರು ತಾಲೂಕಿನ ಗ್ರಾಮದ ಹೊಸ ರಾಮೇನಹಳ್ಳಿಯ ಲೋಕೇಶ್ ಎಂಬ ವ್ಯಕ್ತಿಯ ವಿರುದ್ಧ ಕೊಲೆ ಬೆದರಿಕೆ, ಸಮಾಜದ ಶಾಂತಿ ಕದಡಿದ ಆರೋಪದಡಿ ಶಾಸಕ ಸಾ.ರಾ.ಮಹೇಶ್‌ (Sa Ra Mahesh) ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಗೆ ಸಾರಾ ಮಹೇಶ್ ಪದೇ ಪದೇ ಗೈರಾಗಿದ್ದರು. 

ಐಎಎಸ್‌ ಅಧಿಕಾರಿಗಳ ವಿರುದ್ಧ ದಾಳಿ ನಡೆಸುವ ತಾಕತ್ತಿದೆಯೇ?: ಸರ್ಕಾರಕ್ಕೆ ಸಾ.ರಾ. ಮಹೇಶ್‌ ಪ್ರಶ್ನೆ

ವಿಚಾರಣೆಗೆ ಆರೋಪಿ ಹಾಜರಾದರೂ ದೂರುದಾರರಾದ ಶಾಸಕ ಮಹೇಶ್​ ಹಾಜರಾಗುತ್ತಿರಲಿಲ್ಲ. ಹೀಗಾಗಿ ನ್ಯಾಯಾಲಯ ಅಕ್ಟೋಬರ್ 27ರಂದು ನಡೆಯುವ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಲು ಸೂಚನೆ ನೀಡಿ ಇಂದು (ಅ.4) ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ.

ಎಚ್.ವಿಶ್ವನಾಥ್ ಆಪ್ತನಾಗಿರುವ ಲೋಕೇಶ್ ಕರೆ ಮಾಡಿ ಕೊಲೆ ಬೆದರಿಕೆ ಹಾಕುತ್ತಿರುವುದಾಗಿ ಶಾಸಕ ಮಹೇಶ್​ ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ವಿಚಾರಣೆ ಭಾಗವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಶಾಸಕ ಪದೇ ಪದೇ ವಿಚಾರಣೆಗೆ ಗೈರಾಗಿದ್ದರಿಂದ ನ್ಯಾಯಾಲಯ ಸಾ.ರಾ.ಮಹೇಶ್​ಗೆ  8ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಸಮನ್ಸ್ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ