* ಉತ್ತರಪ್ರದೇಶದಲ್ಲಿ ಹೋರಾಟನಿರತ ರೈತರ ಹತ್ಯೆ ಪ್ರಕರಣ
* ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ಆಕ್ರೋಶ
* ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ
ಬೆಂಗಳೂರು, (ಅ.04): ಉತ್ತರಪ್ರದೇಶದಲ್ಲಿ ಹೋರಾಟನಿರತ ರೈತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು ಕಿಡಿಕಾರಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರೈತರು ತನ್ನ ಶತ್ರುಗಳೆಂದು ತಿಳಿದುಕೊಂಡಿರುವ ಬಿಜೆಪಿಯು, ಅವರನ್ನು ಪೊಲೀಸರ ಮೂಲಕ ದಮನಿಸಲು ಪ್ರಯತ್ನಿಸಿ ವಿಫಲವಾದ ನಂತರ ಈಗ ನೇರವಾಗಿ ಹತ್ಯೆ ನಡೆಸಲು ಹೊರಟಿದೆ., ಉತ್ತರ ಪ್ರದೇಶದಲ್ಲಿ ಸಚಿವರ ಮಗನ ಕಾರಿನಡಿಗೆ ಸಿಕ್ಕಿ ರೈತರು ಸಾವಿಗೀಡಾದ ಪ್ರಕರಣ ಬಿಜೆಪಿಯ ಕೊಲೆಗಡುಕ ಮನಸ್ಸಿಗೆ ಸಾಕ್ಷಿ ಎಂದಿದ್ದಾರೆ.
ಲಖೀಂಪುರ ಹಿಂಸಾಚಾರ: ಕೇಂದ್ರ ಸಚಿವರ ಮಗ ಸೇರಿ 14 ಮಂದಿ ವಿರುದ್ಧ ಕೇಸ್!
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಗೂಂಡಾ ರಾಜ್ಯದಲ್ಲಿ ದಲಿತರು, ರೈತರು, ಮಹಿಳೆಯರು ಮತ್ತು ಬಡವರ ಮಾನ-ಪ್ರಾಣ ಯಾವುದೂ ಸುರಕ್ಷಿತ ಅಲ್ಲ. ಸಂವಿಧಾನವೇ ಕುಸಿದು ಬಿದ್ದಿರುವ ಸ್ಥಿತಿಯಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಅಲ್ಲಿನ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿರೋಧ- ಭಿನ್ನಾಭಿಪ್ರಾಯವನ್ನು ಸಹಿಸದ ಬಿಜೆಪಿ ತನ್ನ ತಾಲಿಬಾನಿ ಮನಸ್ಥಿತಿಯನ್ನು ಬೆತ್ತಲು ಮಾಡಿಕೊಳ್ಳುತ್ತಿದೆ. ರೈತರ ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಲು ಹೊರಟ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವ ಯೋಗಿ ಆದಿತ್ಯನಾಥ್ ಸರ್ಕಾರದ ಕೃತ್ಯ ಖಂಡನೀಯ ಎಂದು ವಾಗ್ದಾಳಿ ನಡೆಸಿದರು.
ಉತ್ತರಪ್ರದೇಶದ ಗೂಂಡಾ ರಾಜ್ಯದಲ್ಲಿ ದಲಿತರು,ರೈತರು,
ಮಹಿಳೆಯರು ಮತ್ತು ಬಡವರ ಮಾನ-ಪ್ರಾಣ ಯಾವುದೂ ಸುರಕ್ಷಿತ ಅಲ್ಲ.
ಸಂವಿಧಾನವೇ ಕುಸಿದುಬಿದ್ದಿರುವ
ಸ್ಥಿತಿಯಲ್ಲಿ
ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ
ಅಲ್ಲಿನ ಸರ್ಕಾರವನ್ನು ವಜಾಗೊಳಿಸಬೇಕು.
2/3