Family Politics: ನನ್ನ ಕುಟುಂಬ ಇನ್ಮುಂದೆ ರಾಜಕೀಯಕ್ಕೆ ಬರಲ್ಲ: ಬಿಜೆಪಿ ಸಂಸದ ಜಿಗಜಿಣಗಿ

Kannadaprabha News   | Asianet News
Published : Jan 02, 2022, 12:26 PM ISTUpdated : Jan 02, 2022, 12:28 PM IST
Family Politics: ನನ್ನ ಕುಟುಂಬ ಇನ್ಮುಂದೆ ರಾಜಕೀಯಕ್ಕೆ ಬರಲ್ಲ: ಬಿಜೆಪಿ ಸಂಸದ ಜಿಗಜಿಣಗಿ

ಸಾರಾಂಶ

*  ನನ್ನಿಂದ ಆರಂಭ, ನನ್ನಿಂದಲೇ ಕೊನೆ: ಸಂಸದ ರಮೇಶ ಜಿಗಜಿಣಗಿ *  ದನ ಕಾಯುವವನನ್ನು ಕರೆ ತಂದು ಬೆಳೆಸಿದ್ರು *  ಸಮಾಜದ ನಡತೆಯೇ ನನ್ನ ಜೀವನದ ಪತ್ರಿಕೆ ಆಗಿದೆ   

ಇಂಡಿ(ಜ.02): ನನ್ನಿಂದಲೆ ನನ್ನ ಕುಟುಂಬದ ರಾಜಕಾರಣ(Family Politics) ಆರಂಭ. ನನ್ನಿಂದಲೆ ಕೊನೆ, ನನ್ನ ಕುಟುಂಬದವರನ್ನು ರಾಜಕಾರಣಕ್ಕೆ ತರುವುದಿಲ್ಲ. ನನ್ನ ಬದುಕಿನ ಅಂತ್ಯದ ದಿನದಲ್ಲಿ ನನ್ನ ಬದುಕಿನ ಬಗ್ಗೆ ಒಂದು ಗ್ರಂಥ ಬರೆಸುವ ಆಸೆ ಇದೆ. ಅದನ್ನು ನಾನೇ ಬರೆದು ಬಿಡುಗಡೆ ಮಾಡಿಸುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ(Ramesh Jigajinagi) ಹೇಳಿದ್ದಾರೆ.

ಶನಿವಾರ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನ್ಯಾಯ, ನೀತಿ, ಧರ್ಮದ ಆಧಾರದ ಮೇಲೆ ಬದುಕು ನಡೆಸಿದವನು. ಬಸವಣ್ಣನವರ(Basavanna) ತತ್ವದ ಮೇಲೆ ನಂಬಿಕೆ ಇಟ್ಟವನು. ಸಮಾಜದ ನಡತೆಯೇ ನನ್ನ ಜೀವನದ ಪತ್ರಿಕೆ ಆಗಿದೆ. ನನ್ನೂರ ಅಥರ್ಗಾ ಗ್ರಾಮ ಇನ್ನೂ ಅಭಿವೃದ್ಧಿ ಆಗಬೇಕಿತ್ತು. ಆ ನೋವು ನನಗೆ ಇನ್ನೂ ಕಾಡುತ್ತಿದೆ. ನಿಮ್ಮ ಊರು ಯಾವುದು ಎಂದು ಕೆಲವರು ಕೇಳಿದರೆ, ನಾನು ಎಂದೂ ವಿಜಯಪುರ ಎಂದು ಹೇಳಿರುವುದಿಲ್ಲ. ನಾನು ಹುಟ್ಟಿದ ಊರು ಹತ್ತರಕಿ ಎಂದು ಅಭಿಮಾನದಿಂದ ಹೇಳುತ್ತೇನೆ ಎಂದು ಹೇಳಿದರು.

BJP Politics: ಸಂಕ್ರಾಂತಿವರೆಗೂ ವೇಟ್‌ ಮಾಡಿ ರಾಜ್ಯದಲ್ಲಿ ಬದಲಾವಣೆ: ಸ್ಫೋಟಕ ಹೇಳಿಕೆ ಕೊಟ್ಟ ಯತ್ನಾಳ್‌

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ(Yashavantaraya Patil), ಎಲ್ಲಿ ಶೈಕ್ಷಣಿಕ ಪ್ರಗತಿ ಇದೆಯೋ ಆ ದೇಶ ಮುಂದುವರಿದ ದೇಶದ ಸಾಲಿನಲ್ಲಿ ನಿಲ್ಲುತ್ತದೆ. ಯೋಜನೆಗಳು ಸರ್ಕಾರದ್ದು ಇದ್ದರೂ ಅದನ್ನು ನಾಗರಿಕರು ನಿಗಾವಹಿಸಿ ಅದನ್ನು ಗುಣಮಟ್ಟದಿಂದ ನಡೆಯುವಂತೆ, ಅದು ತಮ್ಮ ಮನೆಯ ಕೆಲಸ ಎಂದು ತಿಳಿದು ನಿಗಾ ವಹಿಸಿದಾಗ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

ಗಾಂಧೀಜಿ(Mahatma Gandhi) ಅವರ ಗ್ರಾಮ ಸ್ವರಾಜ್ಯದ ಕನಸು, ಅಂಬೇಡ್ಕರ್‌(BR Ambedkar) ಅವರ ಸರ್ವರಿಗೂ ಸಮಪಾಲಿ, ಸಮಬಾಳು ಚಿಂತನೆ ನಮ್ಮಲ್ಲಿ ಇರಬೇಕು. ಶಾಂತಿ, ಸಹಬಾಳ್ವೆಯ ವಿಭಿನ್ನ ಸಂಸ್ಕೃತಿಯ ನಾಡು ಕನ್ನಡನಾಡು. ರಾಜಕಾರಣವನ್ನು ಕ್ರೀಡೆಯಾಗಿ ಸ್ವೀಕರಿಸಬೇಕು. ಧ್ವೇಷ ಭಾವನೆಯಿಂದ ಕಾಣಬಾರದು. ಚುನಾವಣೆ ಬಂದಾಗ ಮಾತ್ರ ರಾಜಕಾರಣ ಮಾಡಬೇಕು.ಚುನಾವಣೆ(Election) ಮುಗಿದ ಮೇಲೆ ಜನರ ಆಶೋತ್ತರಗಳ ಈಡೇರಿಸುವ ಕನಸು ಕಾಣಬೇಕು. ಮೇಲ್ಪಂಕ್ತಿ ರಾಜಕಾರಣ ಮಾಡಬೇಕು ವಿನಾ ದ್ವೇಷ ರಾಜಕಾರಣ ಮಾಡಬಾರದು.ಸಂಸದ ರಮೇಶ ಜಿಗಜಿಣಗಿ ಅವರು ಅಜಾತಶತ್ರುಗಳಾಗಿ ರಾಜಕಾರಣ ಮಾಡುತ್ತಾರೆ.ಅವರ ರಾಜಕಾರಣ ಇಂದಿನ ಯುವ ರಾಜಕಾರಣಿಗಳು(Politicians) ಮಾದರಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

Belagavi Violence: ನನಗೆ ಗೃಹ ಖಾತೆ ಕೊಡಿ, ಒಬ್ಬರೆ ಮಗಾ ಸದ್ದು ಮಾಡಿದರೆ ನೋಡಿ: ಯತ್ನಾಳ್‌

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಮುರುಘೆಂದ್ರ ಶಿವಾಚಾರ್ಯರು ದಿವ್ಯ ಸಾನಿಧ್ಯವಹಿಸಿದರು. ಗ್ರಾ.ಪಂ ಅಧ್ಯಕ್ಷೆ ಸುವರ್ಣಾ ಶಿವೂರ, ಅಶೋಕಗೌಡ ಬಿರಾದಾರ, ತಾ.ಪಂ ಇಒ ಸುನೀಲ ಮದ್ದಿನ, ಬಿಇಒ ವಸಂತ ರಾಠೋಡ, ಎಂ.ಸಿ ಮತ್ತಿಕಟ್ಟಿ,ಎಇಇ ದಯಾನಂದ ಮಠ, ರಾಜಕುಮಾರ ತೋರವಿ,ಜೆಇ ರಾಜೇಶ ವೇದಿಕೆ ಮೇಲೆ ಇದ್ದರು.

ವಿದ್ಯಾಧರ ನಾಗುಗೌಡ ಪಾಟೀಲ, ಜೇವೂರ, ಈಶ್ವರಪ್ಪ ರವುಳಿ, ಜೆಟ್ಟೆಪ್ಪ ಲೋಣಿ, ಶ್ರೀಶೈಲ ನಾಗಣಸೂರ,ಪ್ರಕಾಶ ನಾಯಕ, ಸಲೀಮ ನಧಾಫ್‌, ಹಣಮಂತರಾಯಗೌಡ ಬಿರಾದಾರ,ಸವಾಯಿ ಚವ್ಹಾಣ,ಅಶೋಕ ತಡ್ಲಗಿ,ಜಯರಾಮ ರಾಠೋಡ,ಸಿದರಾಯ ಲೋಣಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು. ತಾಪಂ ಸದಸ್ಯ ಗಣಪತಿ ಬಾಣಿಕೋಲ ಸ್ವಾಗತಿಸಿದರು.ಬಿ.ಕೆ.ಗೊಟ್ಯಾಳ,ರಮೇಶ ಗೊಟ್ಯಾಳ ನಿರೂಪಿಸಿದರು. ಸಿ.ಎಸ್‌.ಮೇತ್ರಿ ವಂದಿಸಿದರು.

ದನ ಕಾಯುವವನನ್ನು ಕರೆ ತಂದು ಬೆಳೆಸಿದ್ರು

ಗ್ರಾಮದಲ್ಲಿ ದನ ಕಾಯುತ್ತಿದ್ದ ನನಗೆ ಪಡನೂರಿನ ವಿಠ್ಠಲಗೌಡ ಪಾಟೀಲ ಇಂಡಿ(Indi) ಪಟ್ಟಣಕ್ಕೆ ಕರೆತಂದು ಬೆಳೆಸಿದ್ದಾರೆ. ಅಂತವರನ್ನು ಸ್ಮರಿಸಲೇಬೇಕು. ಅಥರ್ಗಾ ಗ್ರಾಮಕ್ಕೆ 11.50 ಕೋಟಿ ಖರ್ಚು ಮಾಡಿ ಸಿಂದಗಿ ಕೆರೆಯಿಂದ ನೀರು ಒದಗಿಸಲು ಪ್ರಯತ್ನಿಸಿದ್ದೇನೆ. ಹಿಂದೆ ನಮ್ಮ ಸರ್ಕಾರ ಇಲ್ಲದಿದ್ದರೂ, ಅಂದಿನ ಕಾಂಗ್ರೆಸ್‌ ಸರ್ಕಾರದ ಪ್ರಧಾನಮಂತ್ರಿ ಮನಮೋಹನ ಸಿಂಗ್‌(Manmohan Singh) ಅವರಿಂದ ಇಂಡಿ ನಗರಕ್ಕೆ 110 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗೆ ಅನುದಾನ ಬಿಡುಗಡೆಗೊಳಿಸಿದ್ದೇನೆ. ಕೆಲಸ ಮಾಡುವ ಅಪೇಕ್ಷೆ, ಜನರ ಭಾವನೆ ಅರ್ಥ ಮಾಡಿಕೊಂಡು ಕೆಲಸ ಮಾಡುವವರಿಗೆ ಯಾವ ಸರ್ಕಾರವಿದ್ದರೂ ಸರಿ ಎಂದು ಮನ ಬಿಚ್ಚಿ ಮಾತನಾಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು
ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ