'ಆರ್‌ ಆರ್‌ ನಗರದಲ್ಲಿ ಮುನಿರತ್ನ ರಿಸಲ್ಟ್ ಹಿಂಗೇ ಇರುತ್ತೆ'

By Suvarna News  |  First Published Oct 25, 2020, 2:20 PM IST

ನವೆಂಬರ್ ಮೂರರಂದು ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು 10ರಂದು ಫಲಿತಾಂಶ ಪ್ರಕಟವಾಗಲಿದ್ದು, ಪಲಿತಾಂಶದ ಭವಿಷ್ಯ ನುಡಿಯಲಾಗಿದೆ. 


ಶಿವಮೊಗ್ಗ (ಅ.25):  ಉತ್ತರ ಕರ್ನಾಟಕ ಜಿಲ್ಲೆಗಳು ಹಾಗೂ ಬೆಂಗಳೂರಿನಲ್ಲಿ ಕೂಡ ನೆರೆ ಹಾವಳಿ ಉಂಟಾಗಿದೆ. ಕೊರೊನಾ ಮತ್ತು ನೆರೆ ಹಾವಳಿ ಎರಡು ಸಂಕಷ್ಟದ ನಡುವೆ ಕೆಲಸ ಮಾಡ ಬೇಕಿದ್ದು  ಆದಷ್ಟು ಬೇಗ ಈ ಸಂಕಷ್ಟಗಳು ದೂರಾಗಲಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.

ಶಿವಮೊಗ್ಗದಲ್ಲಿಂದು ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ವೈ ಎರಡು ಕಡೆಗಳಲ್ಲಿ ನೆರೆ ವೀಕ್ಷಿಸಿ ಸೂಕ್ತ ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದರು. 

Tap to resize

Latest Videos

ಚುನಾವಣೆಗೆ ವಿಚಾರ ಪ್ರಸ್ತಾಪ

ಆರ್ ಆರ್ ನಗರ ಮತ್ತು ಶಿರಾ  ಚುನಾವಣೆಯಲ್ಲಿ  ಬಿಜೆಪಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದ ಬಿ ಎಸ್ ವೈ ವಿಪಕ್ಷ ನಾಯಕ ರಿಗೆ ಎಲ್ಲಾ ಉಪ ಚುನಾವಣೆಯಲ್ಲಿ ಗೆಲ್ಲುವ ಮಾತು ಹೇಳಿದ್ದೆ. ಅದರಂತೆ  ಎರಡು ಚುನಾವಣೆಯಲ್ಲಿ ಬಿಜೆಪಿ ಗೆದ್ದೆ ಗೆಲ್ಲುತ್ತದೆ ಎಂದರು.

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಬಿಜೆಪಿಯಿಂದ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ...

ಶಾಲೆ ಆರಂಭ ಯಾವಾಗ..?

ಶಾಲಾ ಕಾಲೇಜು ಆರಂಭದ ಬಗ್ಗೆ ಈಗಾಗಲೇ ಹಲವು ಚರ್ಚೆಗಳು ನಡೆದಿದ್ದು, ನ . 17 ಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಆದರದೆ ಇದು ಬಲವಂತ ಅಲ್ಲ ಎಂದರು.  ತಜ್ಞರ ಅಭಿಪ್ರಾಯ ಮೇರೆಗೆ ಕಾಲೇಜು ಆರಂಭ ಆಗಲಿದೆ ಎಂದರು. 

ನವೆಂಬರ್ ಮೂರರಂದು ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು 10ರಂದು ಫಲಿತಾಂಶ ಪ್ರಕಟವಾಗಲಿದೆ

click me!