ಶಿವಸೇನೆ ಸೇರ್ಪಡೆಯಾಗಿದ್ದ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಾಂಗರ್ಕರ್‌ಗೆ ನೀಡಲಾಗಿದ್ದ ಹುದ್ದೆಯನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ರದ್ದುಗೊಳಿಸಿದ್ದಾರೆ.
ಮುಂಬೈ (ಸೆ.21): ಶಿವಸೇನೆ ಸೇರ್ಪಡೆಯಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಾಂಗರ್ಕರ್‌ಗೆ ನೀಡಲಾಗಿದ್ದ ಹುದ್ದೆಯನ್ನು ಪಕ್ಷದ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಾನುವಾರ ರದ್ದುಗೊಳಿಸಿದ್ದಾರೆ.
ಪಾಂಗರ್ಕರ್ ಶನಿವಾರ ಶಿವಸೇನೆ (ಶಿಂದೆ ಬಣ) ಸೇರಿದ್ದ. ಬಳಿಕ ಈತನಿಗೆ ಜಲ್ನಾ ವಿಧಾನಸಭಾ ಚುನಾವಣೆಯ ಪ್ರಚಾರ ಸಮಿತಿ ಮುಖ್ಯಸ್ಥರಾಗಿ ಮಾಡಲಾಗಿತ್ತು. ಕೊಲೆ ಕೇಸಿನ ಆರೋಪಿಗೆ ಉತ್ತಮ ಸ್ಥಾನ ನೀಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ನೇಮಕ ರದ್ದತಿಗೆ ಶಿಂಧೆ ಆದೇಶಿಸಿದ್ದಾರೆ.
2017 ಸೆ.5ರಂದು ನಡೆದಿದ್ದ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ 2018ರಲ್ಲಿ ಶ್ರೀಕಾಂತ್‌ನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದರು. ಕಳೆದ ಸೆ.4ರಂದಷ್ಟೇ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿತ್ತು.
ಅತಿ ಹೆಚ್ಚು ಪ್ಲಾಟ್‌ಫಾರ್ಮ್‌ಗಳಿರುವ ಭಾರತದ ಟಾಪ್ 10 ರೈಲು ನಿಲ್ದಾಣಗಳಿವು
ಅದರ ಬೆನ್ನಲ್ಲೇ ಈತ ಜಲ್ನಾ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯಲು ಸಜ್ಜಾಗಿದ್ದ. ಆದರೆ ಶಿವಸೇನೆ (ಶಿಂಧೆ ಬಣ)- ಬಿಜೆಪಿ- ಎನ್‌ಸಿಪಿ (ಅಜಿತ್ ಪವಾರ್ ಬಣ) ನಡುವೆ ಇನ್ನೂ ಟಿಕೆಟ್ ಹಂಚಿಕೆ ಅಂತಿಮವಾಗದ ಕಾರಣ, ಆತನನ್ನು ಪ್ರಚಾರ ಸಮಿತಿ ಮುಖ್ಯಸ್ಥರಾಗಿ ನೇಮಿಸಲಾಗಿತ್ತು. ಆದರೆ ಈ ನೇಮಕಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ನೇಮಕಕ್ಕೆ ತಡೆ ನೀಡಲಾಗಿದೆ.
2001ರಿಂದ 2006ರವೆಗೆ ಅವಿಭಜಿತ ಶಿವಸೇನೆಯಿಂದ ಜಲ್ನಾ ಮುನ್ಸಿಪಲ್ ಕೌನ್ಸಿಲರ್ ಆಗಿದ್ದ ಶ್ರೀಕಾಂತ್, 2011ರಲ್ಲಿ ಪಕ್ಷ ಟಿಕೆಟ್ ನಿರಾಕರಿಸಿದ ಬಳಿಕ ಹಿಂದೂ ಜನಜಾಗೃತಿ ಸಮಿತಿ ಸೇರ್ಪಡೆಯಾಗಿದ್ದ.
ಇನ್ಫೋಸಿಸ್, ರಿಲಾಯನ್ಸ್ ಸೇರಿ 6 ಕಂಪೆನಿಗೆ ಷೇರುಪೇಟೆಯಲ್ಲಿ ನಷ್ಟ, ಯಾರು ಎಷ್ಟು ಸಾವಿರ ಕೋಟಿ ಕಳಕೊಂಡ್ರು?
2011ರಲ್ಲಿ ಪಾಂಗರ್ಕರ್‌ಗೆ ಶಿವಸೇನೆ ಟಿಕೆಟ್ ನೀಡಲು ನಿರಾಕರಿಸಿದ ಕಾರಣ ಪಕ್ಷ ತೊರೆದು ಬಲಪಂಥೀಯ ಹಿಂದೂ ಜನಜಾಗೃತಿ ಸಮಿತಿ ಸೇರಿದ್ದ. ನ.20ರಂದು ನಡೆಯಲಿರುವ ರಾಜ್ಯದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿವಸೇನೆಗೆ ಸೇರ್ಪಡೆಗೊಂಡಿದ್ದ. ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ಅವರ ನಿವಾಸದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪೊಲೀಸರು 25 ಮಂದಿಯನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದುವರೆಗೆ ಒಟ್ಟು 18 ಮಂದಿಗೆ ಜಾಮೀನು ಸಿಕ್ಕಿದೆ.
ತಾನು ಎಂದಿಗೂ ಪಕ್ಷವನ್ನು ತೊರೆದಿಲ್ಲ ಮತ್ತು ಶಿವಸೇನೆಯಲ್ಲಿ ಹಲವು ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದು ಪಂಗರ್ಕರ್ ಹೇಳಿದ್ದಾನೆ. 2014 ರಿಂದ, ಈಗ ನನಗೆ ನಿಯೋಜಿಸಲಾದ ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ. 2011 ಮತ್ತು 2018 ರ ನಡುವೆ ಪಂಗರ್ಕರ್ ಅಧಿಕೃತವಾಗಿ ಸಕ್ರಿಯವಾಗಿಲ್ಲದಿದ್ದರೂ, ತನ್ನ ರಾಜಕೀಯ ಗುರು , ಮಾಜಿ ಸಚಿವ ಅರ್ಜುನ್ ಖೋಟ್ಕರ್ ಮತ್ತು ಜಲ್ನಾ ಅಸೆಂಬ್ಲಿ ಸ್ಥಾನಕ್ಕೆ ಪಕ್ಷದ ಚುನಾವಣಾ ಪ್ರಚಾರ ಉಸ್ತುವಾರಿಯಾಗಿರುವವರ ಅನುಯಾಯಿಯಾಗಿದ್ದಾನೆ.
ಪಕ್ಷದ ಮೂಲಗಳ ಪ್ರಕಾರ, ಕರ್ನಾಟಕ ಎಸ್‌ಐಟಿ 2018 ರ ಆಗಸ್ಟ್‌ನಲ್ಲಿ ಪಂಗರ್ಕರ್ ಅವರನ್ನು ಬಂಧಿಸಿದ ನಂತರ ಖೋಟ್ಕರ್ ಅವರಿಂದ ದೂರವಾಗಿದ್ದರು . ಶಸ್ತ್ರಾಸ್ತ್ರ ಸಾಗಣೆ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದೇನೆ. ಈಗ ಛತ್ರಪತಿ ಸಂಭಾಜಿನಗರದಲ್ಲಿ ನೆಲೆಸಿದ್ದಾನೆ, ಅಲ್ಲಿ ಹೋಟೆಲ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾನೆ ಮತ್ತು ಪಡಿತರ ಅಂಗಡಿಯನ್ನು ಸಹ ನಡೆಸುತ್ತಿದ್ದಾನೆ.