ಯಾವ ಸರ್ಕಾರ ಬೀಳುತ್ತಂತೆ? ಮುಡಾ ಹಗರಣ ವಿಚಾರದಲ್ಲಿ ಸಿಎಂ ಪಾತ್ರ ಏನಿದೆ? ತಪ್ಪೇನಿದೆ? ಆಲ್ಟರ್ನೇಟ್ ಸೈಟ್ ಕೊಟ್ಟಿರೋದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಈಗಲೂ ಸಿದ್ದರಾಮಯ್ಯಗೆ ಕಪ್ಪು ಚುಕ್ಕಿ ಇಲ್ಲ. ಏನಿದೆ ಕಪ್ಪು ಚುಕ್ಕೆ? ಎಂದು ಬಿಜೆಪಿ ನಾಯಕರ ಆರೋಪಗಳಿಗೆ ಸಚಿವ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದರು
ಬೆಂಗಳೂರು (ಜು.29): ಯಾವ ಸರ್ಕಾರ ಬೀಳುತ್ತಂತೆ? ಮುಡಾ ಹಗರಣ ವಿಚಾರದಲ್ಲಿ ಸಿಎಂ ಪಾತ್ರ ಏನಿದೆ? ತಪ್ಪೇನಿದೆ? ಆಲ್ಟರ್ನೇಟ್ ಸೈಟ್ ಕೊಟ್ಟಿರೋದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಈಗಲೂ ಸಿದ್ದರಾಮಯ್ಯಗೆ ಕಪ್ಪು ಚುಕ್ಕಿ ಇಲ್ಲ. ಏನಿದೆ ಕಪ್ಪು ಚುಕ್ಕೆ? ಎಂದು ಬಿಜೆಪಿ ನಾಯಕರ ಆರೋಪಗಳಿಗೆ ಸಚಿವ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದರು.
ಇಂದು ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು ಎಂದು ಹೇಳಲಿ? ಯಾವುದೋ ದೇವರಾಜ್ ಕಡೆಯಿಂದ ಬಾಮೈದ ಕೊಂಡುಕೊಂಡಿದ್ದಾರೆ. ಬಾಮೈದ ಅವರ ಅಕ್ಕನಿಗೆ ಗಿಫ್ಟ್ ಮಾಡಿದ್ದಾರೆ. ಅವರದೇ ಸೈಟಿನಲ್ಲಿ ಮುಡಾ ಲೇಔಟ್ ಮಾಡಿದೆ. ಸಿದ್ದರಾಮಯ್ಯನವರು ಸೈಟ್ ಹಂಚಿಕೆ ಮಾಡಿದ್ದಾರಾ? ಮುಖ್ಯಮಂತ್ರಿ ಇರುವಾಗ ಕೊಟ್ರ? ಬಿಜೆಪಿ ಸರ್ಕಾರ ಇರುವಾಗ ಕೊಟ್ಟಿದ್ದೇ ಹೊರತು ಸಿಎಂ ಸಿದ್ದರಾಮಯ್ಯ ಆಗಿದ್ದಾಗ ಕೊಟ್ಟಿದ್ದಲ್ಲ. ಬಿಜೆಪಿಯವರ ಇಶ್ಯು ಏನಿಲ್ಲ ಅದಕ್ಕೆ ಇದನ್ನೇ ಇಶ್ಯು ಮಾಡಿದ್ದಾರೆ. ಕುಮಾರಸ್ವಾಮಿಯವರು ಅವರ ಬೆನ್ನಹಿಂದೆ ನಿಂತಿದ್ದಾರೆ. ಕುಮಾರಸ್ವಾಮಿಯವರಿಗೆ ಸಿದ್ದರಾಮಯ್ಯ ಸಿಎಂ ಆಗಿರುವುದು ಸಹಿಸುವುದಕ್ಕೆ ಆಗುತ್ತಿಲ್ಲ ಹೀಗಾಗಿ ಸಿಎಂ ಟಾರ್ಗೆಟ್ ಆಗಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೆ ತಾವು ಯಾವತ್ತೂ ಸಿಎಂ ಆಗುವ ಅವಕಾಶ ಸಿಗಲ್ಲ ಅಂತ ಬಿಜೆಪಿಗೂ ಕುಮಾರಸ್ವಾಮಿಗೂ ಗೊತ್ತು. ಹೀಗಾಗಿ ಏನೋ ಅವಕಾಶ ಸಿಕ್ಕಿದೆ, ಕೆಣಕಬೇಕು ಅಂತಾ ಕೆಣಕುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿರೋವರೆಗೂ ಅವರಿಗೆ ಮುಂದೆ ಬರೋಕೆ ಅವಕಾಶ ಇರೊಲ್ಲ ಅಂತಾ ಹೀಗೆ ಮಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಬೆಂಗಳೂರಿಗೆ ತಂದಿರೋದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ: ಗೃಹ ಸಚಿವ ಪರಮೇಶ್ವರ ಸ್ಪಷ್ಟನೆ
ನಾವು ಎಷ್ಟು ದಿವಸ ಇರುತ್ತೇವೋ ಗೊತ್ತಿಲ್ಲ. ನಮ್ಮ ಹಣೆಬರಹವನ್ನ ದೇವರು ಬರೆದಿರುತ್ತಾನೆ ಈ ಅರ್ಥದಲ್ಲಿ ಎಷ್ಟು ದಿನ ಇರುತ್ತೇವೋ ಗೊತ್ತಿಲ್ಲ ಅಂತಾ ಹೇಳಿದ್ದೇನೆ ನಾವು ಮಾಡುವ ಕೆಲಸ ಶಾಶ್ವತವಾಗಿ ಉಳಿಯಬೇಕು. ಇರುವಷ್ಟು ದಿನ ಜನರಿಗಾಗಿ ಕೆಲಸ ಮಾಡಬೇಕು. ನಾಳೆ ನಾವು ಇಲ್ಲದಿದ್ದರೂ ನಾಲ್ಕು ಜನ ನೆನಪಿಸಿಕೊಳ್ಳುವಂತೆ ಬದುಕಬೇಕು ಹಾಗಾಗಿ ಇದನ್ನ ಹೇಳಿದ್ದೇನೆ ಎಂದರು. \
ನಮ್ಮ ಪಕ್ಷ, ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ನಾವು ಬದ್ಧರಾಗಿರುತ್ತೇವೆ. ಕೇಂದ್ರ ಸರ್ಕಾರದವರು ನಮಗೆ ಏನು ದುಡ್ಡು ಕೊಡಬೇಕು ಮೊದಲು ಕೊಡ್ಲಿ. ಅದು ಕೊಟ್ಟು ಬಿಡ್ಲಿ ಎಲ್ಲ ಸರಿಹೋಗಿಬಿಡುತ್ತೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಈಗ ಮುಖ್ಯಮಂತ್ರಿ ಯಾವುದೂ ಖಾಲಿ ಇಲ್ಲ. ಮುಖ್ಯಮಂತ್ರಿ ಕುರ್ಚಿ ಖಾಲಿ ಇದ್ದರೆ ತಾನೆ ಚರ್ಚೆ ಮಾಡಬೇಕಾಗಿರೋದು? ನಮ್ಮ ಪಕ್ಷ ಹೈಕಮಾಂಡ್ ಗೆರೆ ಹಾಕಿದರೆ ಆ ಗೆರೆ ನಾವೆಲ್ಲ ದಾಟು ಹಾಗಿಲ್ಲ ಎಂದರು.