ಅನ್ನಭಾಗ್ಯ ಅಕ್ಕಿ ನಾಪತ್ತೆ ಕೇಸ್‌ನಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧನ ವಿಚಾರಕ್ಕೆ ಪ್ರಮೋದ್ ಮುತಾಲಿಕ್, ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಯಾದಗಿರಿ (ಜು.29): ಅನ್ನಭಾಗ್ಯ ಅಕ್ಕಿ ನಾಪತ್ತೆ ಕೇಸ್ ನಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧನವಾಗಿದೆ. ಸೋಮವಾರ ಮಣಿಕಂಠ ರಾಠೋಡ್ ಅವರ ಭೇಟಿಗೆ ಆಗಮಿಸಿದ ಶ್ರೀರಾಮಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ಶಹಾಪುರ ಪೊಲೀಸರು ಭೇಟಿ ನಿರಾಕರಿಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಗಳ ವಿರುದ್ಧ ಮುತಾಲಿಕ್ ಅಸಮಾಧಾನ ಹೊರಹಾಕಿದ್ದಾರೆ. ಪ್ರಸ್ತುತ ಮಣಿಕಂಠ ರಾಠೋಡ್ ಶಹಾಪುರ ಪೊಲೀಸ್ ಠಾಣೆಯ ಕಸ್ಟಡಿಯಲ್ಲಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಮಣಿಕಂಠ ರಾಠೋಢ್, ಪ್ರಿಯಾಂಕ್ ಖರ್ಗೆ ವಿರುದ್ಧ 68 ಸಾವಿರ ಮತ ಪಡೆದುಕೊಂಡಿದ್ದರು. 'ಶಹಾಪುರ ಪೊಲೀಸರು ಬಂಧನ ಮಾಡಿರುವ ವ್ಯಕ್ತಿಗೆ ಭೇಟಿಗೆ ಬಂದಿದ್ದೇನೆ. ಇದು ಒಂದು ಸೌರ್ಹಾದಯುತ ಭೇಟಿ, ಆರೋಗ್ಯ ಹೇಗಿದೆ ಎಂದು ಕೇಳಲು ಬಂದಿದ್ದೇನೆ. ಆದರೆ ಅದಕ್ಕೆ ಪೊಲೀಸರು ಅವಕಾಶ ಕೊಡ್ತಿಲ್ಲ. ನಾವು ರಿಕ್ವೇಸ್ಟ್ ಲೆಟರ್ ಕೊಟ್ಟರೂ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಮಣಿಕಂಠ ರಾಠೋಡ್ ಏನು ಟೆರರಿಸ್ಟ್ ಅಲ್ಲ, ಭಯೋತ್ಪಾದಕ ಅಲ್ಲ. ಯಾವುದೋ ಸುಳ್ಳು ಕೇಸ್ ನಲ್ಲಿ ಬಂಧಿಸಿ, ಕಿರುಕುಳ ನೀಡ್ತಿರುವ ಪೊಲೀಸ್, ರಾಜಕಾರಣಿಗಳ ಕೃತ್ಯದಿಂದ ಒಳಗಡೆ ಇದ್ದಾರೆ' ಎಂದು ಮುತಾಲಿಕ್ ಹೇಳಿದ್ದಾರೆ.
ಮಣಿಕಂಠ ರಾಠೋಡ್ ಭೇಟಿ ಆಗದಿರೋಕೆ ಕಾರಣ ಏನು..? ಎಷ್ಟು ಸಲ ವಿಚಾರಣೆ ಮಾಡೋದು..? ಕಸ್ಟಡಿಗೆ ಪಡೆದು ಮೂರು ಮೂರು ಸರತಿ ವಿಚಾರಣೆ ಮಾಡೋದಾ..? ಏನ್ ದೊಡ್ಡ ವಿಚಾರಣೆ ಮಾಡೋರಿದ್ದೀರಿ. ಪೊಲೀಸ್ ಡಿಪಾರ್ಟ್ಮೆಂಟ್ ಎಷ್ಟು ಚೆನ್ನಾಗಿದೆ ಅನ್ನೋದು ಇಡೀ ಜಗತ್ತಿಗೆ ಗೊತ್ತಿದೆ. ಈ ರೀತಿಯ ರಾಜಕೀಯ ದ್ವೇಷ ಸಾಧಿಸಿ, ಸೇಡು ಸಾಧಿಸುತ್ತಿದ್ದೀರಿ. ಈ ರೀತಿ ದಾದಾಗಿರಿ ತುಘಲಕ್ ದರ್ಬಾರ್ ಬಹಳ ದಿನ ನಡೆಯೋಲ್ಲ. ಮಣಿಕಂಠ ರಾಠೋಡ್ ಬಂಧನ ಅಕ್ರಮವಿದೆ, ಕಾನೂನು ಬಾಹಿರವಿದೆ. ಅವರ ಮೇಲಿನ ಆರೋಪಕ್ಕೆ ಸಂಬಂದಪಟ್ಟ ಲೆಟರ್ ನನ್ನ ಬಳಿಯಿದೆ. ಅವರ ತಮ್ಮನ್ನ ಹೆಸರಿನಲ್ಲಿರುವ ಗೋದಾಮಿನ ಹೆಸರಿದೆ. ಈಗಾಗಲೇ ಅವರ ತಮ್ಮನನ್ನ ಬಂಧಿಸಿ, ಅಕ್ಕಿ ವಶ ಪಡಿಸಿಕೊಳ್ಳಲಾಗಿದೆ. ಅದರಲ್ಲಿ ಮಣಿಕಂಠ ರಾಠೋಡ್ ಹೆಸರಿಲ್ಲ, ಯಾವುದೇ ದಾಖಲೆ ಇಲ್ಲ. ಅಯ್ಯಪ್ಪದಾಸ್ ಹೆಸರಿನ ತಮ್ಮನ ಗೋದಾಮಿನಲ್ಲೂ ಏನೂ ಹೆಸರಿಲ್ಲ. ಮುಂಬೈ ಮೂಲದ ವ್ಯಕ್ತಿಗೆ ಲೀಜ್ ಕೊಟ್ಟಿದ್ರಲ್ಲೂ ರಾಠೋಡ್ ಹೆಸರಿಲ್ಲ ಎಂದು ಹೇಳಿದ್ದಾರೆ.
ಮಣಿಕಂಠ ರಾಠೋಡ್ ಮೇಲೆ ಪೊಲೀಸ್, ರಾಜಕಾರಣಿಗಳ ಟಾರ್ಗೆಟ್ ಏಕೆ..? ಇವರ ಟಾರ್ಗೆಟ್ ಒಂದೇ ಪ್ರಿಯಾಂಕ್ ಖರ್ಗೆ. ಕಲಬುರಗಿ ಉಸ್ತುವಾರಿ ಸಚಿವರ ವಿರುದ್ದ ನಿಂತು 68 ಸಾವಿರ ಮತ ಪಡೆದಿದ್ದಾರೆ. ಚಾಲೆಂಜ್ ಹಾಕಿದ್ದಾರೆ, ಸವಾಲ್ ಹಾಕಿದ್ದಾರೆ. ನೀವು ಅಯೋಗ್ಯರಿದ್ದೀರಿ ಎನ್ನುವ ಹೇಳಿಕೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇವನೇ ನನಗೆ ಮುಳ್ಳಾಗ್ತಾನೆ, ಸೋಲಿಸ್ತಾನೆ ಅನ್ನುವ ಹೆದರಿಕೆಯಿದೆ. ಏನೇನು ಹೆಸರಿಲ್ಲದ ವ್ಯಕ್ತಿಯನ್ನ ಬಂಧನ ಮಾಡೋದು ಬಹಳ ದೊಡ್ಡ ಅಪರಾಧವಾಗುತ್ತದೆ. ನಾವು ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಿ, ಬಂಧನ ಮಾಡಿರುವ ವ್ಯಕ್ತಿಯನ್ನ ಸಸ್ಪೆಂಡ್ ಮಾಡೋವರೆಗೆ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
'ವೆದರ್ ಚೆನ್ನಾಗಿದೆ ನಡೆದುಕೊಂಡೇ ಹೋಗ್ಲಿ' ಮುಡಾ ಹಗರಣ ವಿರುದ್ಧ ಬಿಜೆಪಿ ಮೈಸೂರು ಪಾದಯಾತ್ರೆಗೆ ಪ್ರಿಯಾಂಕ್ ಖರ್ಗೆ ಲೇವಡಿ
ಟೆರರಿಸ್ಟ್ ಗಳಿಗೆ ಎಷ್ಟು ಜನರಿಗೆ ಭೇಟಿ ಕೊಟ್ಟಿದ್ದೇವೆ ದಾಖಲೆ ಬೇಕಾ ನಿಮಗೆ. ಹಿಂಸೆ ಕೊಟ್ಟು ಮಾನಸಿಕವಾಗಿ, ದೈಹಿಕವಾಗಿ ತುಳಿಯುವಂತ ಕೆಲಸ ಮಾಡ್ತಿರುವದು ನಿಮಗೆ ಶೋಭೆ ತರುವುದಿಲ್ಲ ಪ್ರಿಯಾಂಕ್ ಖರ್ಗೆ ಅವರೇ. ನೀವು ಉಸ್ತುವಾರಿ ಮಂತ್ರಿ ಇದ್ದೀರಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ. ಪ್ರಿಯಾಂಕ್ ಖರ್ಗೆ ಅವರೇ ನೀವು ಇಷ್ಟು ಚಿಲ್ಲರೆ ಕೆಲಸ ಮಾಡಬಾರದು. ಸುಪ್ರೀಂ ಕೋರ್ಟ್ ವರೆಗೆ ಹೋಗುತ್ತೇವೆ. ಯಾಕೆ ಬಂಧನ ಮಾಡಿದ್ದಾರೆ ಅನ್ನೋದು ಹೇಳೋವರೆಗೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಪಡಿತರ ಅಕ್ಕಿ ಅಕ್ರಮದಲ್ಲಿ ಪ್ರಭಾವಿ ಸಚಿವನ ಹೆಸರು ? ಬಂಧಿತ ಮಣಿಕಂಠ ರಾಥೋಡ್ ಬರೆದಿದ್ದಾರೆನ್ನಲಾದ ಪತ್ರದಲ್ಲಿ ಏನಿದೆ?