ಸಿದ್ದರಾಮಯ್ಯ ನಡೆ ಮನೆಯ ಕಡೆ: ಸಂಸದ ಮುನಿಸ್ವಾಮಿ ಭವಿಷ್ಯ

By Kannadaprabha NewsFirst Published Feb 9, 2023, 1:00 AM IST
Highlights

ಕಾಂಗ್ರೆಸ್‌ 60 ವರ್ಷಗಳಿಂದ ದಲಿತರನ್ನು ತುಳಿಯುತ್ತಾ ಬಂದಿದೆ. ಇತ್ತೀಚೆಗೆ ಮುಸ್ಲಿಮರನ್ನು ಸಹ ತುಳಿಯುತ್ತಿದೆ. ಕಳ್ಳಾಟದ ಕಾಂಗ್ರೆಸ್‌ ಚಟುವಟಿಕೆಗಳು ದೇಶದ ಜನಕ್ಕೆ, ರಾಜ್ಯದ ಜನಕ್ಕೆ ಗೊತ್ತಿದೆ ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು. 

ಕೋಲಾರ (ಫೆ.09): ಕಾಂಗ್ರೆಸ್‌ 60 ವರ್ಷಗಳಿಂದ ದಲಿತರನ್ನು ತುಳಿಯುತ್ತಾ ಬಂದಿದೆ. ಇತ್ತೀಚೆಗೆ ಮುಸ್ಲಿಮರನ್ನು ಸಹ ತುಳಿಯುತ್ತಿದೆ. ಕಳ್ಳಾಟದ ಕಾಂಗ್ರೆಸ್‌ ಚಟುವಟಿಕೆಗಳು ದೇಶದ ಜನಕ್ಕೆ, ರಾಜ್ಯದ ಜನಕ್ಕೆ ಗೊತ್ತಿದೆ ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು. ಬುಧವಾರ ತಾಲೂಕಿನ ಕೋಗಿಲಹಳ್ಳಿಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್‌ ನಿವಾಸದ ಬಳಿ ಫೆ.9ರಂದು ಸಿ.ಬೈರೇಗೌಡ ಬಡಾವಣೆಯ ಬಳಿ ನಡೆಯಲಿರುವ ಬಿಜೆಪಿ ಎಸ್‌ಸಿ ಸಮಾವೇಶದ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ನಡೆ ಮನೆಯ ಕಡೆ: ಕೋಲಾರಕ್ಕೆ ಸಿದ್ದರಾಮಯ್ಯ ಬರುತ್ತಿದ್ದಾರೆ, ಬನ್ನಿ. ನೀವು ಏನೇ ಮಾಡಿದರು ಕೋಲಾರ ಜನತೆ ನಿಮ್ಮನ್ನ ಮನೆಗೆ ಕಳುಹಿಸುತ್ತಾರೆ. ಅವರು ತಮ್ಮ ಮನೆಯಲ್ಲೇ ಸೋತು ಹೋಗಿದ್ದಾರೆ, ಇನ್ನು ನಮ್ಮ ಮನೆಗೆ ಬಂದರೆ ಗೆಲ್ಲಲು ಸಾಧ್ಯವೇ. ಸಿದ್ದರಾಮಯ್ಯ ನಡೆ ಮನೆಯ ಕಡೆ, ವರ್ತೂರ್‌ ಪ್ರಕಾಶ್‌ ಗೆಲ್ಲುವುದು ಖಚಿತ ಸಚಿವರಾಗುವುದು ಖಚಿತ. ಕೋಲಾರ ಜಿಲ್ಲೆಯ ದಲಿತರನ್ನು 60 ವರ್ಷಗಳಿಂದ ಯಾಮಾರಿಸಿದ್ದು ಸಾಕು, ಈಗ ನಾವು ಬಂದಿದ್ದೇವೆ ನಾವು ಅವರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನ ರೂಪಿಸಿದ್ದೇವೆ. ಅದನ್ನು ಕಾರ್ಯರೂಪಕ್ಕೆ ತಂದು ಅಭಿವೃದ್ಧಿಪಡಿಸುವುದು ನಮ್ಮ ಗುರಿ ಎಂದು ತಿಳಿಸಿದರು

ಭ್ರಷ್ಟಾಚಾರ ಆರೋಪ ಬೆನ್ನಲ್ಲೇ ಮಂಗಳೂರಿಗೆ ಎಡಿಜಿಪಿ: ಸಾರ್ವಜನಿಕರ ಕುಂದುಕೊರತೆ ಆಲಿಸಲಿರುವ ಅಲೋಕ್ ಕುಮಾರ್!

ಮಾಜಿ ಸಚಿವ ವರ್ತೂರು ಪ್ರಕಾಶ್‌ ಮಾತನಾಡಿ, ಕೋಲಾರದಲ್ಲಿ ಕೆಲ ಮುಖಂಡರು, ಬಿಜೆಪಿ ದಲಿತರಿಗೆ ದ್ರೋಹ ಬಗೆಯುತ್ತಿದೆ ಎಂದು ಸುಳ್ಳು ಹೇಳಿ ದಲಿತರನ್ನು ದಾರಿ ತಪ್ಪಿಸುತ್ತಾ, ಅವರು ಮಾತ್ರ ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಆ ಪಕ್ಷದ ಹತ್ತಿರ ಶ್ಯಾಮಿಲಾಗಿ ಆರ್ಥಿಕವಾಗಿ ಮುಂದೆ ಬರುತ್ತಿದ್ದಾರೆ. ಅಂತಹ ನಾಯಕರ ಮಾತನ್ನ ನಂಬಬೇಡಿ ಎಂದರು.

ಕೇಂದ್ರದಲ್ಲಿ ಮುನಿಸ್ವಾಮಿ ಮಂತ್ರಿ: ಜಿಲ್ಲೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದರೆ ಕೇಂದ್ರದಲ್ಲಿ ಸಂಸದ ಮುನಿಸ್ವಾಮಿ ಮಂತ್ರಿ ಆಗುವ ಸಾಧ್ಯತೆಗಳು ಇವೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ದಲಿತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದಾರೆ. ಈ ಯೋಜನೆಗಳನ್ನು ಉಪಯೋಗಿಸಿಕೊಂಡು ಆರ್ಥಿಕತೆಯಲ್ಲಿ ಮುಂದೆ ಬರುವಾಗ ಕಾಂಗ್ರೆಸ್‌ ಪಕ್ಷದವರು ದಲಿತರಿಗೆ ಸುಳ್ಳು ಹೇಳಿ ದಿಕ್ಕು ತಪ್ಪಿಸುತ್ತಿದ್ದಾರೆ ಕಾಂಗ್ರೆಸ್‌ಗೆ ದಲಿತರು ಮುಂದೆ ಬರುವುದು ಇಷ್ಟವಿಲ್ಲ ನಿಮ್ಮನ್ನು ಮತ ಬ್ಯಾಂಕ್‌ ಆಗಿ ಉಪಯೋಗಿಸಿಕೊಳ್ಳುತ್ತಿದ್ದಾರೆಯೇ ಹೊರತು ಅಭಿವೃದ್ಧಿಗೆ ಏನೂ ಮಾಡಿಲ್ಲ, ಮುಂದೆಯೂ ಮಾಡುವುದು ಇಲ್ಲ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್‌ ಮಾತನಾಡಿ, ಎಸ್‌ಸಿ ಸಮಾವೇಶಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಉಸ್ತುವಾರಿ ಸಿ.ಟಿ.ರವಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ, ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಜಿಲ್ಲೆಯ ಮಾಜಿ ಶಾಸಕರು ಆಗಮಿಸಲಿದ್ದಾರೆ ಎಂದರು.

ರಾಜಕೀಯಕ್ಕೆ ಬಂದಿರುವುದು ಜನ ಸೇವೆ ಮಾಡಲಿಕ್ಕೆ: ಸಚಿವ ಎಂಟಿಬಿ ನಾಗರಾಜ್‌

ಸಮಾವೇಶಕ್ಕೆ ಸುಮಾರು 50 ಸಾವಿರ ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಪ್ರಾರಂಭಗೊಳ್ಳಿದೆ, ಇದಕ್ಕೂ ಮುನ್ನ ಬೆಳಗ್ಗೆ 10.30ಕ್ಕೆ ಚನ್ನಯ್ಯ ರಂಗಮಂದಿರದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಚಿಂತನಾ ವೇದಿಕೆಯಿಂದ ಅಂತ್ಯೋದಯದಿಂದ ಸರ್ವೋದಯ ಎಂಬ ಚಿಂತನ ಮಂಥನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ಜಿಪಂ ಮಾಜಿ ಸದಸ್ಯ ಅರುಣ್‌ ಪ್ರಸಾದ್‌, ತಾ.ಪಂ ಮಾಜಿ ಅಧ್ಯಕ್ಷ ಸೂಲೂರು ಆಂಜನಪ್ಪ, ಸಿ.ಡಿ.ರಾಮಚಂದ್ರಗೌಡ, ಕ್ಯಾಲನೂರು ಜಿಪಂ ಮಾಜಿ ಸದಸ್ಯ ವೆಂಕಟೇಶ್‌ ಗೌಡ, ನಗರಸಭಾ ಸದಸ್ಯ ಪ್ರವೀಣ್‌ ಗೌಡ, ಮುಖಂಡರಾದ ಜನಾರ್ದನ್‌, ಇದ್ದರು.

click me!