ಕಾಂಗ್ರೆಸ್‌ನಿಂದ ಮುಸ್ಲಿಂ ಮಹಿಳೆಯರ ಶೋಷಣೆ: ಸಂಸದ ಮುನಿಸ್ವಾಮಿ ಆರೋಪ

Published : Mar 06, 2023, 10:22 PM IST
ಕಾಂಗ್ರೆಸ್‌ನಿಂದ ಮುಸ್ಲಿಂ ಮಹಿಳೆಯರ ಶೋಷಣೆ: ಸಂಸದ ಮುನಿಸ್ವಾಮಿ ಆರೋಪ

ಸಾರಾಂಶ

ಅಧಿಕಾರಕ್ಕಾಗಿ ದೇಶ ವಿಭಜನೆಗೆ ಕಾರಣವಾದ ಕಾಂಗ್ರೆಸ್‌ ಓಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಾ ಕಳೆದ 60 ವರ್ಷಗಳಲ್ಲಿ ಮುಸ್ಲಿಂ ಮಹಿಳೆಯರ ನಿರಂತರ ಶೋಷಣೆಗೆ ಸಾಥ್‌ ನೀಡುತ್ತಲೇ ಬಂದಿದೆ ಎಂದು ಸಂಸದ ಎಸ್‌.ಮುನಿಸ್ವಾಮಿ ಆರೋಪ ಮಾಡಿದರು. 

ಕೋಲಾರ (ಮಾ.06): ಅಧಿಕಾರಕ್ಕಾಗಿ ದೇಶ ವಿಭಜನೆಗೆ ಕಾರಣವಾದ ಕಾಂಗ್ರೆಸ್‌ ಓಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಾ ಕಳೆದ 60 ವರ್ಷಗಳಲ್ಲಿ ಮುಸ್ಲಿಂ ಮಹಿಳೆಯರ ನಿರಂತರ ಶೋಷಣೆಗೆ ಸಾಥ್‌ ನೀಡುತ್ತಲೇ ಬಂದಿದೆ ಎಂದು ಸಂಸದ ಎಸ್‌.ಮುನಿಸ್ವಾಮಿ ಆರೋಪ ಮಾಡಿದರು. ನಗರದ ಎಂಡಿಕೆ ಪ್ಲಾಜಾದಲ್ಲಿ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ನೆಹರು, ಜಿನ್ನಾ ಪ್ರಧಾನಿಯಾಗಿ ದೇಶವನ್ನು ಲೂಟಿ ಮಾಡಲು ಅಖಂಡ ಭಾರತವನ್ನು ಛಿದ್ರ ಮಾಡಿದರು. ಇಂದು ಪಾಕಿಸ್ತಾನ ದಿವಾಳಿಯಾಗಿದ್ದು, ಅಲ್ಲಿನ ಜನ ಮೋದಿಯಂತಹ ಪ್ರಧಾನಿ ಬೇಕು ಎಂದು ಕೂಗುತ್ತಿದ್ದಾರೆ ಎಂದರು.

ತಾಕತ್ತಿದ್ದರೆ ಎಸ್‌ಡಿಪಿಐ ಸ್ಪರ್ಧಿಸಲಿ: ಮುಸ್ಲಿಂ ಹೆಣ್ಣು ಮಕ್ಕಳು ಓದಬಾರದು, ಉದ್ಯೋಗ ಮಾಡಬಾರದು ಎಂದು ಶೋಷಿಸುತ್ತಲೇ ಬಂದ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿರುವ ಎಸ್‌ಡಿಪಿಐ ತಾಕತ್ತಿದ್ದರೆ ಕೋಲಾರದಲ್ಲಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯನ್ನು ಹಾಕಲಿ ಎಂದು ಸವಾಲು ಹಾಕಿದರು. ಹೊತ್ತು, ಹೆತ್ತು ಸಾಕಿದ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟರೆ ಒಂದೆರಡು ಮಕ್ಕಳಾಗುತ್ತಲೇ ಆಕೆಗೆ ತ್ರಿಬಲ್‌ ತಲಾಕ್‌ ನೀಡಿ ಬೀದಿಗೆ ತಳ್ಳುವ ಮೂಲಕ ತಂದೆ ತಾಯಿಯನ್ನು ದುಃಖಕ್ಕೆ ತಳ್ಳುವ ಸಂಸ್ಕೃತಿಯನ್ನು ಬೆಂಬಲಿಸುವ ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ಒಂದೇ ನಾಣ್ಯದ ಎರಡು ಮುಖಗಳಂತಿವೆ ಎಂದು ಟೀಕಿಸಿದರು. ಮುಸ್ಲಿಂ ಹೆಣ್ಣು ಮಕ್ಕಳನ್ನು ಶೋಷಣೆಯಿಂದ ಪಾರು ಮಾಡಲು ತ್ರಿಬಲ್‌ ತಲಾಕ್‌ ರದ್ದುಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡ ಪ್ರಧಾನಿ ಮೋದಿಯವರನ್ನು ಇಂದು ಮುಸ್ಲಿಂ ಮಹಿಳೆಯರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಸರ್ಕಾರ ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯ ದಿವಾಳಿ: ರಣದೀಪ್‌ ಸಿಂಗ್‌ ವಾಗ್ದಾಳಿ

ಸಿದ್ದರಾಮಯ್ಯರನ್ನು ಸೋಲಿಸಿಯೇ ಸಿದ್ಧ: ತಾನು ಒಂದು ಸಾರಿ ಪ್ರತಿನಿಧಿಸಿದ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಲು ಭಯಪಡುವ ಸಿದ್ದರಾಮಯ್ಯ ಯಾವ ಸೀಮೆಯ ನಾಯಕ. ಅಲ್ಲಿ ಜನರಿಗಾಗಿ ಕೆಲಸ ಮಾಡದ ಅವರು ಇದೀಗ ಕೋಲಾರಕ್ಕೆ ಬರುವ ತವಕದಲ್ಲಿದ್ದಾರೆ, ಅವರನ್ನು ಇಲ್ಲಿ ಸೋಲಿಸದಿದ್ದರೆ ನಾವು ಕೋಲಾರದ ಮಕ್ಕಳೇ ಅಲ್ಲ ಎಂದು ಘೋಷಿಸಿದರು. ಕೇಂದ್ರ ಸರ್ಕಾರ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 1,400 ಕೋಟಿ ವೆಚ್ಚದಲ್ಲಿ ಶುದ್ಧ ನೀರಿನ ಘಟಕಗಳನ್ನು ನೀಡಿದ್ದು, ಬೀದಿಬದಿ ವ್ಯಾಪಾರಿಗಳಿಗೆ 50 ಸಾವಿರ ಸಾಲ ನೀಡಿದೆ ಎಂದರು.

ಮುಸಲ್ಮಾನರ ಮತ ಬೇಡ ಎಂದಿಲ್ಲ: ಮಾಜಿ ಸಚಿವ ವರ್ತೂರು ಪ್ರಕಾಶ್‌ ಮಾತನಾಡಿ, ಇದೊಂದು ಐತಿಹಾಸಿಕ ಸಮಾವೇಶವಾಗಿದೆ, ಉಚಿತ ಅಕ್ಕಿ ಕೊಟ್ಟಿದ್ದು ನಾನು ಎನ್ನುವ ಸಿದ್ದರಾಮಯ್ಯಗೆ ಗೊತ್ತಿರಲಿ ಅಕ್ಕಿಗೆ 28 ರು.ಗಳನ್ನು ಕೊಟ್ಟಿದ್ದು ಮೋದಿ ಸರ್ಕಾರ, ನೀವು ಕೊಟ್ಟಿದ್ದ ಕೇವಲ ಚೀಲವಷ್ಟೆಎಂದು ವ್ಯಂಗ್ಯವಾಡಿದರು. ನಾನೆಂದೂ ಮುಸ್ಲಿಮರ ಮತ ಬೇಡ ಎಂದು ಹೇಳಿಲ್ಲ, ಕೆಲವರು ನನ್ನ ವಿರುದ್ದ ಅಪಪ್ರಚಾರ ನಡೆಸಿದ್ದಾರೆ, ನನ್ನನ್ನು ಮೊದಲ ಬಾರಿ ಗೆಲ್ಲಿಸಿದ್ದೇ ಮುಸ್ಲಿಮರು. ನಿಮ್ಮ ಮತವಿಲ್ಲದೇ ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿಸಿ, ಕೋಲಾರ ಕ್ಲಾಕ್‌ಟವರ್‌ನಲ್ಲಿ ಸಂಸದರು ಹಾರಿಸದ್ದು ಭಾರತದ ಬಾವುಟವೇ ಹೊರತು ಪಾಕ್‌ದ್ದಲ್ಲ ಎಂದರು.

ಬಿಜೆಪಿ ಅಧಿ​ಕಾ​ರ​ಕ್ಕೆ ಕನ​ಕ​ಪುರ ಮತ​ದಾ​ರರು ಮುನ್ನುಡಿ ಬರೆ​ಯಿರಿ: ಸಚಿವ ಅಶೋಕ್‌

ಏಪ್ರಿಲ್‌ ತಿಂಗಳಲ್ಲಿ ಕೋಲಾರದಲ್ಲಿ 10 ಸಾವಿರ ಮಂದಿ ಅಲ್ಪಸಂಖ್ಯಾತರನ್ನು ಸೇರಿಸಿ ಬೃಹತ್‌ ಸಮಾವೇಶ ಮಾಡುವುದಾಗಿ ತಿಳಿಸಿದ ವರ್ತೂರು ಪ್ರಕಾಶ್‌, ಕೋಲಾರಕ್ಕೆ ಸಿದ್ದರಾಮಯ್ಯ ಬರಲ್ಲ, ಮೈಸೂರಿಗೆ ಹೋಗ್ತಾರೆ ಎಂದರು. ಇದೇ ಸಂದರ್ಭದಲ್ಲಿ ಸುಲ್ತಾನ್‌ ತಿಪ್ಪಸಂದ್ರದ ಮುಸ್ಲಿಂ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್‌, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಅಲ್ಪಸಂಖ್ಯಾತ ಮೋರ್ಚಾ ಮುಖಂಡ ಬೆಗ್ಲಿ ಸಿರಾಜ್‌, ತೇಜಸ್‌ ವರ್ತೂರು ಪ್ರಕಾಶ್‌, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಮಚಂದ್ರೇಗೌಡ, ನಗರಾಧ್ಯಕ್ಷ ತಿಮ್ಮರಾಯಪ್ಪ, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌,ಮಾಜಿ ಸದಸ್ಯೆ ರೂಪಶ್ರೀ, ಬಂಕ್‌ಮಂಜುನಾಥ್‌, ಸೂಲೂರು ಆಂಜಿನಪ್ಪ, ಎಸ್ಸಿಮೋರ್ಚಾ ವೆಂಕಟೇಶ್‌ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿ ಚುಕ್ಕಾಣಿ ನಿತಿನ್‌ಗೆ
ಮಂಡ್ಯ ಜಿಲ್ಲೆಯಿಂದ ಜೆಡಿಎಸ್ ಓಡಿಸದಿದ್ದರೆ ಭವಿಷ್ಯವಿಲ್ಲ : ಚಲುವರಾಯಸ್ವಾಮಿ