ಬಿಜೆಪಿ ಯಾತ್ರೆಗೆ ವಿಜಯ ಸಂಕಲ್ಪ ಯಾತ್ರೆ ಎನ್ನುವ ಬದಲು ಭ್ರಷ್ಟೋತ್ಸವ ಎಂದರೆ ಬಿಜೆಪಿಯ ವಿಜಯೋತ್ಸವಕ್ಕೆ ಸೂಕ್ತವಾದ ಹೆಸರಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.6): ಬಿಜೆಪಿ ಯಾತ್ರೆಗೆ ವಿಜಯ ಸಂಕಲ್ಪ ಯಾತ್ರೆ ಎನ್ನುವ ಬದಲು ಭ್ರಷ್ಟೋತ್ಸವ ಎಂದರೆ ಬಿಜೆಪಿಯ ವಿಜಯೋತ್ಸವಕ್ಕೆ ಸೂಕ್ತವಾದ ಹೆಸರಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿಯವರು ರಾಜ್ಯದಲ್ಲಿ ವಿಜಯ ಸಂಕಲ್ಪಯಾತ್ರೆ ಆರಂಭಿಸಿದ್ದಾರೆ ಯಾವ ಮುಖಂಡರು ಯಾವ ವಿಜಯೋತ್ಸವ ಆಚರಿಸುತ್ತಿದ್ದಾರೆ ಯಾರಿಗೂ ತಿಳಿಯುತ್ತಿಲ್ಲ. ವಿರೂಪಾಕ್ಷ ಮುಡ್ನಾಳ್ ಅವರ ಘಟನೆ ನೋಡಿದಾಗ ನಿರಂತವಾಗಿ ಎರಡು ವರ್ಷದಿಂದಲೂ ಬಿಜೆಪಿ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದರೂ ಸಹ ಸಾಕ್ಷಿ ಕೊಡಿ ಎಂದು ಹೇಳುತ್ತಲೆ ಬಂದರು ಆದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆಂದು ಎಲ್ಲೂ ಹೇಳದೆ ಭ್ರಷ್ಟಾಚಾರವನ್ನು ವೈಭವೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
undefined
ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ:
ಬಿಜೆಪಿ ಯವರು ವಿಜಯ ಸಂಕಲ್ಪ ಯಾತ್ರೆ ಸಂದರ್ಭ ರಾಜ್ಯಕ್ಕೆ ನಿಮ್ಮ ಕೊಡುಗೆ ಏನೆಂಬುದನ್ನು ಹೇಳಬೇಕು. ರಾಜ್ಯದಿಂದ ಬಿಜೆಪಿಯ 25 ಮಂದಿ ಲೋಕಸಭಾ ಸದಸ್ಯರನ್ನು ಇಲ್ಲಿನ ಜನ ಆರಿಸಿ ಕಳುಹಿಸಿದ್ದಾರೆ. 3 ವರ್ಷದಲ್ಲಿ ಜಿಎಸ್ಟಿ ಮೂಲಕ 6.7 ಲಕ್ಷ ಕೋಟಿ ಕೇಂದ್ರ ಸರ್ಕಾರದ ಬೊಕ್ಕಸ ತುಂಬಿದೆ ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದ್ದು ರಾಜ್ಯಕ್ಕೆ ನಿಮ್ಮ ಕೊಡುಗೆ ಶೂನ್ಯ ಎಂದು ಆರೋಪಿಸಿದರು. ಅತೀಯಾದ ಮಳೆಯಿಂದ ಜನರು ಸಂಕಷ್ಟಕ್ಕೆ ಒಳಾಗಿದ್ದರೂ ಪ್ರಧಾನಿ ನರೇಂದ್ರಮೋದಿಯಾಗಲಿ, ಅಮಿತ್ ಶಾ ಅಥವಾ ನಡ್ಡಾ ಆಗಲಿ ಕನಿಷ್ಟ ವೈಮಾನಿಕ ಸಮೀಕ್ಷೆ ಮಾಡಬಹುದಿತ್ತು. ಮಾಡಲಿಲ್ಲ ಇಂದು ಚುನಾವಣೆ ಕಾರಣಕ್ಕಾಗಿ ಪ್ರತಿವಾರ ರಾಜ್ಯಕ್ಕೆ ಬರುತ್ತಿದ್ದಾರೆ ಬರಲಿ ಬಂದಾಗ ಕಾಂಗ್ರೆಸ್ ಪಕ್ಷ ಮತ್ತು ಜನತಾ ಪರಿವಾರದವರು ಯಾವರೀತಿ ರಾಜ್ಯವನ್ನು ಅಭಿವೃದ್ದಿಪಡಿಸಿದ್ದಾರೆ ಆ ಮಾಡೆಲ್ ಕೊಂಡೊಯ್ದು ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಅನುಷ್ಟಾನಕ್ಕೆ ತರಲಿ. ಅದುಬಿಟ್ಟು ರಾಜ್ಯಕ್ಕೆ ಬಂದು ಕಾಂಗ್ರೆಸ್ಗೆ ಅಪಮಾನ ಮಾಡುವುದು ಬೇಡಾ. ಇದನ್ನು ಒಂದೇ ವೇದಿಕೆಯಲ್ಲಿ ಚರ್ಚಿಸಲು ತಯಾರಿದ್ದೇನೆ ಎಂದರು.
ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಮಾ.9ಕ್ಕೆ ಕಾಂಗ್ರೆಸ್ಸಿಂದ 2 ತಾಸು ಕರ್ನಾಟಕ ಬಂದ್!
ಕಪ್ಪಕಾಣಿಕೆ ಸಲ್ಲಿಸಲು ದುಡ್ಡು ಕಲೆಕ್ಟ್:
ಅಮಿತ್ ಶಾಗೆ ಕಪ್ಪಕಾಣಿಕೆ ಸಲ್ಲಿಸಲು ಅರ್ಜೆಂಟ್ ಅರ್ಜೆಂಟಾಗಿ ದುಡ್ಡು ಕಲೆಕ್ಟ್ ಮಾಡಲು ಹೋಗಿ ಸಿಕ್ಕಿಬಿದ್ರು ನೇರವಾಗಿ ಬಸವರಾಜ ಬೊಮ್ಮಾಯಿ ಅಮಿತ್ ಶಾ ಹೊಣೆ ಹಾಗಾಗಿ ಬಸವರಾಜ ಬೊಮ್ಮಾಯಿ ರಾಜೀನಾಮೆ ಕೊಡಬೇಕು ಎಂದು ಕೇಳುತ್ತಿವೆ ಆದರೆ ಅವರು ಕೇಳುತ್ತಿಲ್ಲ ಆದ್ದರಿಂದ ಪ್ರತಿಭಟನೆ ಮೂಲಕ ಬಂದ್ ಮಾಡುತ್ತಿವೆ ಎಂದರು. ಯಡಿಯೂರಪ್ಪನವರು ವಯಸ್ಸಿನಲ್ಲಿ ರಾಜಕಾರಣದಲ್ಲೂ ಹಿರಿಯರು ಅವರು ಷಡ್ಯಂತ್ರ ಎನ್ನುವುದಾದರೆ ಯಾರು ಷಡ್ಯಂತ್ರ ಮಾಡಿದರು ಎನ್ನುವುದನ್ನು ಸಿಎಂ ಬಸವರಾಜ ಬೊಮ್ಮಾಯಿ ಹೇಳಬೇಕಿತ್ತು. ಜಿಲ್ಲೆಯ ನಾಯಕನೋರ್ವ ಯಡಿಯೂರಪ್ಪನವರಿಗೆ ಮುದಿ ಎತ್ತು ಎಂದು ಕರೆದಿದ್ದರು. ಆ ಮೂರ್ಖತನದ ಹೇಳಿಕೆಗೆ ಉತ್ತರ ನೀಡುವುದಿಲ್ಲ ಎಂದು ಯಡಿಯೂರಪ್ಪವರು ಹೇಳಿದರು.
ಸರ್ಕಾರದ ಭ್ರಷ್ಟಾಚಾರ ವಿರುದ್ಧ ಕರ್ನಾಟಕ ಬಂದ್‌ಗೆ ಕಾಂಗ್ರೆಸ್ ಕರೆ
ಇಡಿ, ಐಟಿ ರೈಡು ಕಾಂಗ್ರೆಸ್ಸಿಗರು ಮಾಡಿಸಿದರಾ ಎಂದು ಹೇಳಬೇಕು. ಷಡ್ಯಂತ್ರಗಳು ಅವರಲ್ಲೆ ಮಾಡಿರುವಂತದ್ದು ನಾವ್ಯಾರು ಅವರ ರಾಜೀನಾಮೆ ಕೆಳದಿದ್ದರೂ ಒಂದು ವರ್ಷದಲ್ಲಿ ಅವರನ್ನು ಸಿಎಂ ಸ್ಥಾನದಿಂದ ಏಕೆ ಇಳಿಸಿದರು? ಕಣ್ಣಿರು ಹಾಕಿಕೊಂಡು ಹೊರ ಬಂದಿದ್ದೇಕೆ ಎಂದು ಬಸವರಾಜ ಬೊಮ್ಮಾಯಿ ಹೇಳಬೇಕು. ಒಂದು ಇವಿಎಂ ಇನ್ನೊಂದು ಯಡಿಯೂರಪ್ಪನವರ ಮಿಷನ್ ಎರಡೆ ಬಿಜೆಪಿಗೆ ಗೊತ್ತಿರೋದು. ಅವರನ್ನು ಸಮಾದಾನ ಮಾಡಿ ಶಕ್ತಿ ಉಪಯೋಗಿಸಿಕೊಳ್ಳು ನರೇಂದ್ರ ಮೋದಿ, ಅಮಿತ್ ಷಾ, ನಡ್ಡರಿಂದ ಹಿಡಿದು ಬಸವರಾಜ ಬೊಮ್ಮಾಯಿ ವರೆಗೂ ಮೊಸಳೆ ಕಣ್ಣಿರು ಹಾಕುತ್ತಿದ್ದಾರೆ ಎಂದು ಹೇಳಿದರು.