ಅರುಣ್ ಸಿಂಗ್ ಭೇಟಿಯಾದ ರೇಣುಕಾಚಾರ್ಯಗೆ ಸಿಕ್ತು ಮಹತ್ವದ ಭರವಸೆ

By Suvarna News  |  First Published Aug 4, 2021, 10:11 PM IST

* ಅರುಣ್ ಸಿಂಗ್ ಭೇಟಿಯಾದ ಎಂಪಿ ರೇಣುಕಾಚಾರ್ಯ
* ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅರುಣ್ ಸಿಂಗ್ ಬಳಿ ಅಸಮಾಧಾನ
* ರೇಣುಕಾಚಾರ್ಯಗೆ ಭರವಸೆ ನೀಡಿದ ಅರುಣ್ ಸಿಂಗ್


ಬೆಂಗಳೂರು, (ಆ.04): ಸಚಿವ ಸಂಪುಟ ರಚನೆಯಾಗಿದ್ದು, 29 ಶಾಸಕರು ಇಂದು (ಬುಧವಾರ) ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಆದ್ರೆ, ಕೆಲವರಿಗೆ ಮಂತ್ರಿ ಕೈತಪ್ಪಿದ್ದರಿಂದ ಅವರೆಲ್ಲರೂ ಅಸಮಾಧಾನಗೊಂಡಿದ್ದಾರೆ.

ಅಂತಹ ಗುಂಪಿನಲ್ಲಿ ಎಂಪಿ ರೇಣುಕಾಚಾರ್ಯ ಸಹ ಒಬ್ಬರು...ಕಳೆದ ಬಾರಿ ಬಿಎಸ್‌ ಯಡಿಯೂರಪ್ಪನವರ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿಲ್ಲ. ಈ ಬಾರಿ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಅದ್ರೆ, ಸಿಗದಿರುವುದು ಅವರ ನಿರಾಸೆಗೆ ಕಾರಣವಾಗಿದೆ.

Tap to resize

Latest Videos

ನೂತನ ಸಚಿವರಿಗೆ ಜಿಲ್ಲೆಗಳನ್ನ ಹಂಚಿಕೆ ಮಾಡಿದ ಸಿಎಂ: ಯಾರಿಗೆ ಯಾವ ಜಿಲ್ಲೆ?

ಇನ್ನು ಈ ಬಗ್ಗೆ ರೇಣುಕಾಚಾರ್ಯ ಅವರು ಇಂದು (ಆ.04) ರಾಜ್ಯ ಬಿಜೆಪಿ ಅರುಣ್ ಸಿಂಗ್ ಅವರನ್ನ ಭೇಟಿ ಮಾಡಿ ಚರ್ಚಿದ್ದಾರೆ. ಕುಮಾರಕೃಪಾ ಗೆಸ್ಟ್​ಹೌಸ್​ನಲ್ಲಿ ಅರುಣ್ ಸಿಂಗ್ ಅವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಂತರ ಅವರನ್ನು ಸಮಾಧಾನ ಮಾಡಿರುವ ಅರುಣ್​ ಸಿಂಗ್​, ಮುಂದೆ ಒಂದೊಳ್ಳೆ ಗೌರವಯುತ ಹುದ್ದೆ ಕೊಡುವುದಾಗಿ ಭರವಸೆ ನೀಡಿದ್ದಾರೆಂದು ಎನ್ನಲಾಗಿದೆ. ಬಳಿಕ ರೇಣುಕಾಚಾರ್ಯ ಅವರು ಅಲ್ಲಿಂದ ವಾಪಸ್ ಆಗಿದ್ದಾರೆ.

ಮುಂದಿನ ದಿನಗಳಲ್ಲಿ ರೇಣುಕಾಚಾರ್ಯ ಅವರಗೆ ಯಾವ ಹುದ್ದೆ ಕೊಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ. ಈ ಹಿಂದೆ ಬಿಎಸ್‌ವೈ ರಾಜಕೀಯ ಕಾರ್ಯದರ್ಶಿಯಾಗಿದ್ದರು.

click me!