ನೂತನ ಸಚಿವರಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಿದ ಸಿಎಂ: ಯಾವ ಜಿಲ್ಲೆ, ಯಾರ ಹೆಗಲಿಗೆ?

By Suvarna News  |  First Published Aug 4, 2021, 8:13 PM IST

* ನೂತನ ಸಚಿವರಿಗೆ ಜಿಲ್ಲೆಗಳನ್ನ ಹಂಚಿಕೆ ಮಾಡಿದ ಸಿಎಂ
* 29 ನೂತನ ಸಚಿವರಿಗೆ ಜಿಲ್ಲೆಗಳನ ಜವಾಬ್ದಾರಿ ನೀಡಿದ ಬೊಮ್ಮಾಯಿ
* ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ


ಬೆಂಗಳೂರು, (ಆ.04): ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕ ಕ್ಯಾಬಿನೆಟ್ ರಚನೆಯಾಗಿದ್ದು, ಇಂದು (ಆ.04) 29 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಬಳಿಕ ಬಸವರಾಜ ಬೊಮ್ಮಯಿ ಅವರು ವಿಧಾನಸೌಧದಲ್ಲಿ ನೂತನ ಸಚಿವರ ಜೊತೆ ಮೊದಲ ಕ್ಯಾಬಿನೆಟ್ ಸಭೆ ನಡೆಸಿದರು. ಈ ಸಭೆಯಲ್ಲಿ ಜಿಲ್ಲೆಗೆಳಿಗೆ ತೆರಳುವಂತೆ ನೂತನ ಸಚಿವರಿಗೆ ಬೊಮ್ಮಾಯಿ ಖಡಕ್ ಸೂಚನೆ ಕೊಟ್ಟಿದ್ದಾರೆ.

Tap to resize

Latest Videos

ಸಭೆ ಅಂತ್ಯ: ಮೊದಲ ಸಭೆಯಲ್ಲಿಯೇ ನೂತನ ಸಚಿವರಿಗೆ ಮಹತ್ವ ಸೂಚನೆ ಕೊಟ್ಟ ಸಿಎಂ

ಅದರಂತೆ ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳ ಪರಿಶೀಲನೆಗೆ ಹೋಗುವಂತೆ ಸಚಿವರುಗಳಿಗೆ ಜಿಲ್ಲೆಗಳನ್ನ ಹಂಚಿಕೆ ಮಾಡಿದ್ದಾರೆ. ಈ ಕೆಳಕಂಡ ಜಿಲ್ಲೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಹಂಚಿಕೆ ಮಾಡಿ ಆದೇಶಿಸಿದ್ದಾರೆ.
ಹಾಗಾದ್ರೆ ಯಾರಿಗೆ ಯಾವ ಜಿಲ್ಲೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

* ಗೋವಿಂದ ಕಾರಜೋಳ - ಬೆಳಗಾವಿ
* ಕೆ.ಎಸ್​.ಈಶ್ವರಪ್ಪ- ಶಿವಮೊಗ್ಗ
* ಆರ್​.ಅಶೋಕ್​- ಬೆಂಗಳೂರು ನಗರ
 * ಬಿ.ಶ್ರೀರಾಮುಲು- ಚಿತ್ರದುರ್ಗ
* ವಿ.ಸೋಮಣ್ಣ- ವಿ ಸೋಮಣ್ಣ
* ಉಮೇಶ್ ಕತ್ತಿ-ಬಾಗಲಕೋಟೆ
* ಎಸ್. ಅಂಗಾರ- ದಕ್ಷಿಣ ಕನ್ನಡ
* ಜೆ.ಸಿ.ಮಾಧುಸ್ವಾಮಿ- ತುಮಕೂರು
* ಡಾ. ಅಶ್ವಥ ನಾರಾಯಣ- ರಾಮನಗರ
 * ಸಿ.ಸಿ.ಪಾಟೀಲ್​ - ಗದಗ
* ಆನಂದ್​ ಸಿಂಗ್- ಬಳ್ಳಾರಿ, ವಿಜಯನಗರ 
* ಕೋಟಾ ಶ್ರೀನಿವಾಸ ಪೂಜಾರಿ- ಕೊಡಗು
 * ಪ್ರಭು ಚೌಹ್ವಾಣ್​- ಬೀದರ್
 * ಮುರುಗೇಶ್​ ನಿರಾಣಿ- ಕಲಬುರಗಿ
 * ಶಿವರಾಮ್​ ಹೆಬ್ಬಾರ್- ಉತ್ತರ ಕನ್ನಡ​
 * ಎಸ್​.ಟಿ. ಸೋಮಶೇಖರ್​- ಮೈಸೂರು, ಚಾಮರಾಜನಗರ
 * ಬಿ.ಸಿ.ಪಾಟೀಲ್- ಹಾವೇರಿ
* ಬಸವರಾಜ ಬೈರತಿ- ದಾವಣಗೆರೆ
, * ಡಾ.ಕೆ.ಸುಧಾಕರ್​- ಚಿಕ್ಕಬಳ್ಳಾಪುರ
* ಗೋಪಾಲಯ್ಯ- ಹಾಸನ
* ಶಶಿಕಲಾ ಜೊಲ್ಲೆ- ವಿಜಯಪುರ
* ಎಂಟಿಬಿ ನಾಗರಾಜ್​- ಬೆಂಗಳೂರು ಗ್ರಾಮಾಂತರ
* ಅರಗ ಜ್ಞಾನೇಂದ್ರ- ಚಿಕ್ಕಮಗಳೂರು
* ಸುನಿಲ್  ಕುಮಾರ್- ಉಡುಪಿ
* B C ನಾಗೇಶ್- ಯಾದಗಿರಿ
* ಹಾಲಪ್ಪ ಆಚಾರ್- ಕೊಪ್ಪಳ
* ಶಂಕರ್  ಪಾಟೀಲ್  ಮುನೇನಕೊಪ್ಪ- ಧಾರವಾಡ
* ಮುನಿರತ್ನ-ಕೋಲಾರ

click me!