ಕರ್ನಾಟದ ಹಲವು ರಾಜಕಾರಣಿಗೆ ಕೊರೋನಾ ವಕ್ಕರಿಸುತ್ತಿದೆ. ಕಾಂಗ್ರೆಸ್ ಬಿಜೆಪಿ ಶಾಸಕರುಗಳಿಗೆ ಇಂದು (ಏ.18) ಕೊರೋನಾ ದೃಢಪಟ್ಟಿದೆ.
ಬೆಂಗಳೂರು, (ಏ.18): ಕರ್ನಾಟಕ ರಾಜಕಾರಣಿಗೆ ಒಬ್ಬರಿಂದ ಒಬ್ಬರಿಗೆ ಕೊರೋನಾ ಸೋಂಕು ತಗುಲುತ್ತಿದೆ. ಇಂದು (ಭಾನುವಾರ) ಕಾಂಗ್ರೆಸ್ ಬಿಜೆಪಿ ಶಾಸಕರುಗಳಿಗೆ ಕೊರೋನಾ ದೃಢಪಟ್ಟಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇಂಡಿ ಶಾಸಕಗೆ ಕೊರೋನಾ
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್‌ಗು ಕೊರೊನಾ ಪಾಸಿಟಿವ್ ಬಂದಿದ್ದು, ಬೆಂಗಳೂರಿನ ಅಪೋಲೊ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಶಾಸಕ ಯಶವಂತರಾಯಗೌಡ ಮನವಿ ಮಾಡಿದ್ದಾರೆ.
ಕೊರೋನಾದಿಂದ ಪಾರಾಗಲು ನಾವೀಗ ಏನೆಲ್ಲ ಮಾಡಬೇಕು? ಸರ್ಕಾರಕ್ಕೊಂದು ಪತ್ರ
ರೇಣುಕಾಚಾರ್ಯಗೂ ಸೋಂಕು
ಹೌದು...ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ಕೊರೋನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಅವರು ಹೊನ್ನಾಳಿ ಮನೆಯಲ್ಲಿ ಐಸೋಲೆಶನ್ ನಲ್ಲಿದ್ದಾರೆ.
ಕಳೆದ ಮೂರು ದಿನಗಳಿಂದ ವಿವಿಧ ಕಾರ್ಯಕ್ರಮಗಳಲ್ಲಿ ರೇಣುಕಾಚಾರ್ಯ ಪಾಲ್ಗೊಂಡಿದ್ದರು. ಇಂದು (ಭಾನುವಾರ) ಬಲ್ಮುರಿ ಗ್ರಾಮದ ಸ್ಕೂಲ್ ಭೇಟಿ ಕೊಟ್ಟು ಕೊರೋನಾ ಜಾಗೃತಿ ಮೂಡಿಸಿದ್ದರು. ಇದೀಗ ರೇಣುಕಾಚಾರ್ಯ ಸಂಪರ್ಕ ಬಂದವರಿಗೆ ಶುರುವಾಗಿದೆ ಢವ ಢವ ಶುರುವಾಗಿದೆ.
ತರೀಕೆರೆ ಶಾಸಕ ಸುರೇಶ್‍ಗೆ ಕೊರೋನಾ ಪಾಸಿಟಿವ್
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಬಿಜೆಪಿ ಶಾಸಕ ಸುರೇಶ್ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ಅವರು ಶಿವಮೊಗ್ಗದ ನವಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚಿಕಿತ್ಸೆ ಬಳಿಕ ಮನೆಯಲ್ಲೇ ಹೋಂ ಐಸೋಲೇಶನ್ ಆಗಲಿದ್ದು, ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.