HDK ಕರ್ಮಭೂಮಿ ರಾಮನಗರದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್: ಮಾಜಿ ಶಾಸಕ ಕಾಂಗ್ರೆಸ್​ ಸೇರ್ಪಡೆ

By Suvarna News  |  First Published Apr 18, 2021, 2:40 PM IST

ನಗರಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಕುಮಾರಸ್ವಾಮಿ ಅವರ ಕರ್ಮಭೂಮಿ ರಾಮನಗರದಲ್ಲಿ ಜೆಡಿಎಸ್‌ಗೆ ಮರ್ಮಾಘಾತವಾಗಿದೆ. 


ಬೆಂಗಳೂರು, (ಏ.18):  ರಾಮನಗರ - ಚನ್ನಪಟ್ಟಣ ನಗರಸಭೆ ಚುನಾವಣೆಗೆ ಇದೇ ಏ. 27 ರಂದು ದಿನಾಂಕ ಫಿಕ್ಸ್ ಆಗಿದ್ದು, ಈ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಕರ್ಮಭೂಮಿ ರಾಮನಗರದಲ್ಲಿ ದಳಪತಿಗಳನ್ನ ಬಗ್ಗಬಡಿಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ತಂತ್ರ ಹೆಣೆಯುತ್ತಿವೆ.

ಇನ್ನೇನು ನಗರಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಮನಗರದಲ್ಲಿ ಜೆಡಿಎಸ್‌ಗೆ ಮರ್ಮಾಘಾತವಾಗಿದೆ. ಹೌದು..ರಾಮನಗರ ಮಾಜಿ ಶಾಸಕ, ಜೆಡಿಎಸ್​ ನಾಯಕ ಕೆ.ರಾಜು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 

Tap to resize

Latest Videos

ಎಚ್‌ಡಿಕೆ ಕರ್ಮಭೂಮಿ ರಾಮನಗರದಲ್ಲಿ ಕೇಸರಿ ಕಹಳೆ ಮೊಳಗಿಸಲು ಬಿಜೆಪಿ ಭರ್ಜರಿ ಪ್ಲಾನ್!

ಇಂದು (ಭಾನುವಾರ) ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಕಾಂಗ್ರೆಸ್​ ಬಾವುಟವನ್ನ ಹಿಡಿದರು.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಸುರೇಶ್, ಪರಿಷತ್ ಸದಸ್ಯ ರವಿ ಕುಮಾರ್, ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಉಪಸ್ಥಿತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಇದೇ ವೇಳೆ ಕೆ.ರಾಜು ಮಾತನಾಡಿ, ನನ್ನ ಬಗ್ಗೆ ಡಿಕೆ ಶಿವಕುಮಾರ್ ಒಂದೆರಡು ಮಾತನಾಡಿದ್ದಾರೆ. ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯನಾಗಿದ್ದೆ. ಬಳಿಕ ಶಾಸಕನಾದೆ, ಕುಮಾರಸ್ವಾಮಿ ಶಾಸಕರಾದ್ರು. ನಾನು‌ ಪರಿಷತ್ ಸದಸ್ಯನಾಗಿ ಮುಂದುವರಿದೆ. ಜೆಡಿಎಸ್​ನಲ್ಲಿ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ಅದನ್ನು ಮುಂದಿನ ದಿನಗಳಲ್ಲಿ ಹೇಳ್ತೇನೆ ಎಂದು ಹೊಸ ಬಾಂಬ್ ಸಿಡಿಸಿದರು. 

ನಾನು ಜೆಡಿಎಸ್ ತೊರೆಯುವುದಕ್ಕೆ ಮನಸ್ಸು ‌ಮಾಡಿದ್ದೆ. ಬಾಲಕೃಷ್ಣ ಹಾಗೂ ಚೆಲವರಾಯಸ್ವಾಮಿ ಅವರ ಬಳಿ ಹೇಳಿಕೊಂಡಿದ್ದೆ. ಇನ್ನಷ್ಟು ದಿನ ಕಾಯ್ದು ಆಮೇಲೆ ಕಾಂಗ್ರೆಸ್ ಸೇರ್ಪಡೆ ಆಗು ಅಂದ್ರು. ಇವಾಗ ನಾನು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದೇನೆ. ಯಾವುದೇ ಷರತ್ತು ಹಾಕದೆ ಕಾಂಗ್ರೆಸ್ ಸೇರಿದ್ದೇನೆ ಎಂದು ಸ್ಪಷ್ಟಪಡಿಸಿದರು.

click me!